ಟಿ20 ವಿಶ್ವಕಪ್: ಭಾರತ ತಂಡದಲ್ಲಿ ಸ್ಥಾನ ಪಡೆದ ಆಟಗಾರರ ವಯಸ್ಸು, ಸ್ಟ್ರೈಕ್ ರೇಟ್, ವಿಕೆಟ್ ಮಾಹಿತಿ
ಮುಂಬರುವ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಭಾರತ ತಂಡ ಘೋಷಿಸಿದ ತಂಡದಲ್ಲಿ ಶುಭಮನ್ ಗಿಲ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸುತ್ತಿದ್ದಾರೆ. ಈ ತಂಡ ಯುವ ಹಾಗೂ ಅನುಭವಿ ಆಟಗಾರರಿಂದ ಕೂಡಿದ್ದಾಗಿದೆ. ಈ ತಂಡದಲ್ಲಿ ಸ್ಥಾನ ಪಡೆದ ಆಟಗಾರರ ವಯಸ್ಸು, ಅವರು ಆಡಿದ ಪಂದ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದ ಆಟಗಾರರಲ್ಲಿ ಸೂರ್ಯಕುಮಾರ್ ಯಾದವ್ ಹಿರಿಯ ಆಟಗಾರ. ಇವರು ಈಗಾಗಲೇ ಮೂರು ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಸೂರ್ಯಕುಮಾರ್ ಯಾದವ್ ಈ ತಂಡದಲ್ಲಿ ಸಾಕಷ್ಟು ಅನುಭವ ಹೊಂದಿರುವ ಆಟಗಾರ. ಇವರನ್ನು ಬಿಟ್ಟರೆ ಟಿ20 ಶ್ರೇಯಾಂಕದಲ್ಲಿ ನಂಬರ್ 1 ಬೌಲರ್ ಎಂಬ ಖ್ಯಾತಿ ಪಡೆದಿರುವ ವರುಣ್ ಚಕ್ರವರ್ತಿ ಸೇರಿದ್ದಾರೆ. ಇವರು ಟೀಮ್ ಇಂಡಿಯಾಗೆ ತಡವಾಗಿ ಎಂಟ್ರಿ ಪಡೆದರು. ಆದರೆ ಸದ್ಯ ಇವರು ಬ್ಯಾಟರ್‌ಗಳನ್ನು ಕಾಡಬಲ್ಲ ಸ್ಪಿನ್ ಬೌಲರ್.

ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದ ಯುವ ಆಟಗಾರ ಎಂದರೆ ಹರ್ಷಿತ್ ರಾಣಾ. ಇವರು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಯುವ ಆಟಗಾರ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹರ್ಷಿತ್ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಹರ್ಷಿತ್ ರಾಣಾ ತಮ್ಮ ಬಿಗುವಿನ ದಾಳಿ ಹಾಗೂ ಕರಾರುವಾಕ್ ದಾಳಿಯಿಂದ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲರು. ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆದಿರುವ 7 ಆಟಗಾರರು ಇದೇ ಮೊದಲ ಬಾರಿಗೆ ಮೆಗಾ ಇವೆಂಟ್‌ನಲ್ಲಿ ಭಾಗವಹಿಸುತ್ತಿದ್ದಾರೆ.
ಹಾಲಿ ಚಾಂಪಿಯನ್
ಕಳೆದ ಬಾರಿಯ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಕುಲ್‌ದೀಪ್ ಯಾದವ್ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ಕಳೆದ ಬಾರಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಆ ಬಳಿಕ ಟೀಮ್ ಇಂಡಿಯಾದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ನಿವೃತ್ತಿ ಪಡೆದಿದ್ದರು.
ಟಿ20 ವಿಶ್ವಕಪ್ ಭಾರತ ತಂಡದ ಆಟಗಾರರ ಅಂಕಿಅಂಶಗಳು
| ಆಟಗಾರರ ಹೆಸರು | ವಯಸ್ಸು | ಪಂದ್ಯಗಳು | ರನ್ | ಸ್ಟ್ರೈಕ್ ರೇಟ್ | ವಿಕೆಟ್‌ಗಳು |
|---|---|---|---|---|---|
| ಸೂರ್ಯಕುಮಾರ್ ಯಾದವ್ | 35 | 99 | 2,788 | 163.20 | 0 |
| ಅಭಿಷೇಕ್ ಶರ್ಮಾ | 25 | 33 | 811 | 188.02 | 6 |
| ಸಂಜು ಸ್ಯಾಮ್ಸನ್ | 31 | 52 | 1,032 | 148.60 | 0 |
| ಇಶಾನ್ ಕಿಶನ್ | 27 | 32 | 796 | 124.37 | 0 |
| ತಿಲಕ್ ವರ್ಮಾ | 23 | 40 | 1,183 | 144.00 | 3 |
| ಹಾರ್ದಿಕ್ ಪಾಂಡ್ಯ | 32 | 124 | 2,002 | 145.20 | 101 |
| ಶಿವಂ ದುಬೆ | 32 | 50 | 639 | 139.80 | 18 |
| ಅಕ್ಷರ್ ಪಟೇಲ್ | 31 | 85 | 681 | 135.12 | 82 |
| ರಿಂಕು ಸಿಂಗ್ | 28 | 35 | 550 | 161.70 | 3 |
| ವಾಶಿಂಗ್ಟನ್ ಸುಂದರ್ | 26 | 58 | 254 | 120.14 | 51 |
| ಹರ್ಷಿತ್ ರಾಣಾ | 23 | 6 | 64 | 48.00 | 17 |
| ಜಸ್ಪ್ರೀತ್ ಬುಮ್ರಾ | 32 | 83 | 8 | 53.30 | 103 |
| ಕುಲ್‌ದೀಪ್ ಯಾದವ್ | 31 | 50 | 4 | 49.10 | 90 |
| ಅರ್ಷದೀಪ್ ಸಿಂಗ್ | 26 | 72 | 97 | 61.17 | 110 |
| ವರುಣ್ ಚಕ್ರವರ್ತಿ | 34 | 33 | 4 | 22.00 | 55 |
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications