Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ENG Test: ವೆಸ್ಟ್‌ ಇಂಡೀಸ್‌ ದಾಖಲೆ ಅಳಿಸಿದ ಭಾರತ: ಯಾವ ದಾಖಲೆ?

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಮೂರನೇ ಟೆಸ್ಟ್‌ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್‌ ಸೋತಿದೆ. ಇಂಗ್ಲೆಂಡ್‌ ಈ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸುವ ಕನಸು ಎರಡೂ ತಂಡಗಳದ್ದಾಗಿದೆ. ಇಂಗ್ಲೆಂಡ್‌ ಲೀಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ 5 ವಿಕೆಟ್‌ ಜಯ ಸಾಧಿಸಿತ್ತು. ಇನ್ನು ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ 336 ರನ್‌ಗಳಿಂದ ಜಯ ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸಿತ್ತು. ಹೀಗಾಗಿ ಮೂರನೇ ಟೆಸ್ಟ್‌ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಶುಭಮನ್‌ ಗಿಲ್‌ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗೆಲುವಿನ ಕನಸು ಕಾಣುತ್ತಿದೆ. ಟಾಸ್‌ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇನ್ನು ಬೆನ್‌ ಸ್ಟೋಕ್ಸ್ ನಾಯಕರಾದ ಬಳಿಕ ಇಂಗ್ಲೆಂಡ್‌ನಲ್ಲಿ ಇದೇ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡಲು ಆತಿಥೇಯ ತಂಡ ಮುಂದಾಗಿದೆ. ಮೂರನೇ ಟೆಸ್ಟ್‌ ಪಂದ್ಯದಲ್ಲೂ ಟಾಸ್‌ ಸೋತ ಶುಭಮನ್‌ ಗಿಲ್‌ ನಿರಾಸೆ ಅನುಭವಿಸಿದ್ದಾರೆ. ಆದರೆ ಟೀಮ್ ಇಂಡಿಯಾ ವಿಶೇಷ ದಾಖಲೆ ಮಾಡಿದೆ.

India s Unwanted Toss Record Against England at Lord s

ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾವನ್ನು ಮುನ್ನಡೆಸುವ ಅವಕಾಶ ಪಡೆದ ಶುಭಮನ್‌ ಗಿಲ್‌, ಈ ಸರಣಿಯಲ್ಲಿ ಮೂರು ಟಾಸ್‌ಗಳನ್ನು ಸೋತಿದ್ದಾರೆ. ಈ ಮೂಲಕ ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ ಹೆಚ್ಚು ಟಾಸ್‌ಗಳನ್ನು ಸೋತ ಭಾರತ ವಿಶೇಷ ದಾಖಲೆಗೆ ತನ್ನ ಹೆಸರು ನಮೂದಿಸಿದೆ.

ವಿಂಡೀಸ್‌ ದಾಖಲೆ ಅಳಿಸಿದ ಭಾರತ

ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಟಾಸ್‌ ಸೋಲುತ್ತಿದ್ದಂತೆ ಸತತ 13ನೇ ಬಾರಿ ಟಾಸ್‌ ಸೋತಿದೆ. 2025ರ ಜನವರಿ 31 ರಿಂದ ಜುಲೈ 10, 2025ರ ನಡುವೆ ಒಟ್ಟು 13 ಟಾಸ್‌ನಲ್ಲಿ ನಿರಾಸೆ ಕಂಡಿದೆ. ಈ ಮೂಲಕ ಟೀಮ್ ಇಂಡಿಯಾ ವೆಸ್ಟ್‌ ಇಂಡೀಸ್‌ ತಂಡದ ದಾಖಲೆಯನ್ನು ಮುರಿದಿದೆ. 1999 ರ ಫೆಬ್ರವರಿ 2 ರಿಂದ 1999 ರ ಏಪ್ರಿಲ್ 21 ರವರೆಗೆ ವೆಸ್ಟ್‌ ಇಂಡೀಸ್‌ ಸತತ 12 ಬಾರಿ ಟಾಸ್‌ ಸೋತಿತ್ತು. ಭಾರತದ ಪರ ರೋಹಿತ್‌ ಶರ್ಮಾ 8, ಶುಭಮನ್‌ ಗಿಲ್‌ 2, ಸೂರ್ಯಕುಮಾರ್‌ ಯಾದವ್ 2 ಬಾರಿ ಟಾಸ್ ಸೋತಿದ್ದಾರೆ.

India s Unwanted Toss Record Against England at Lord s

ಟೀಮ್ ಇಂಡಿಯಾ ಪರ ಮೂರನೇ ಟೆಸ್ಟ್ ಪಂದ್ಯದಲ್ಲಿ ಕೇವಲ ಒಂದೇ ಒಂದು ಬದಲಾವಣೆಯೊಂದಿಗೆ ಕಣಕ್ಕೆ ಇಳಿದಿದೆ. ಎರಡನೇ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದ ಪ್ರಸಿದ್ಧ್ ಕೃಷ್ಣ ಅವರನ್ನು ಕೈ ಬಿಡಲಾಗಿದೆ. ಇವರ ಬದಲಿಗೆ ಎರಡನೇ ಟೆಸ್ಟ್‌ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಜಸ್ಪ್ರೀತ್ ಬುಮ್ರಾ ಅವರಿಗೆ ಅವಕಾಶ ನೀಡಲಾಗಿದೆ. ಇನ್ನು ಬ್ಯಾಟಿಂಗ್ ಲೈನ್‌ ಅಪ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮೂರನೇ ಕ್ರಮಾಂಕದಲ್ಲಿ ಕರುಣ್ ನಾಯರ್‌ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಇನ್ನು ಇಂಗ್ಲೆಂಡ್ ತಂಡದ ಪರ ಜೋಶ್ ಟಂಗಾ ಬದಲಿಗೆ ಜೋಫ್ರಾ ಆರ್ಚರ್‌ಗೆ ಅವಕಾಶ ಸಿಕ್ಕಿದೆ.

Story first published: Thursday, July 10, 2025, 21:06 [IST]
Other articles published on Jul 10, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+