Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌: ದಕ್ಷಿಣ ಆಫ್ರಿಕಾ ತಂಡಕ್ಕೆ ಆಲ್‌ರೌಂಡರ್‌ ಎಂಟ್ರಿ

Injury hit Anrich Nortje ruled out, All rounder Chris Morris added to Proteas WC squad

ಹೊಸದಿಲ್ಲಿ, ಮೇ 07: ಗಾಯದ ಸಮಸ್ಯೆಯಿಂದ ಚೇತರಿಸದ ದಕ್ಷಿಣ ಆಫ್ರಿಕಾ ತಂಡದ ವೇಗದ ಬೌಲರ್‌ ಎನ್ರಿಚ್‌ ನಾರ್ಜೆ ಮುಂಬರುವ ವಿಶ್ವಕಪ್‌ ಟೂರ್ನಿಯಿಂದ ಹೊರಗುಳಿಯುವಂತಾಗಿದ್ದು. ಅವರ ಸ್ಥಾನದಲ್ಲಿ ಆಲ್‌ರೌಂಡರ್‌ ಕ್ರಿಸ್‌ ಮಾರಿಸ್‌ ಹರಿಣ ಪಡೆಗೆ ಸೇರ್ಪಡೆಯಾಗಲಿದ್ದಾರೆ.

ಅಭ್ಯಾಸದ ವೇಳೆ ತಮ್ಮ ಬಲಗೈನ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ವೇಗಿ ಎನ್ರಿಚ್‌ ಸಂಪೂರ್ಣವಾಗಿ ಗುಣಮುಖರಾಗಲು ಕನಿಷ್ಠ 6-8 ವಾರಗಳ ಕಾಲ ವಿಶ್ರಾಂತಿ ಅಗತ್ಯವಿದೆ.

ಈ ಕುರಿತಾಗಿ ದಕ್ಷಿಣ ಆಫ್ರಿಕಾ ತಂಡದ ಮ್ಯಾನೇಜರ್‌ ಮೊಹಮ್ಮದ್‌ ಮೂಸಾಜೀ ವಿವರಣೆ ನೀಡಿದ್ದಾರೆ. "ಸೋಮವಾರ ಅಭ್ಯಾಸದ ವೇಳೆ ಎನ್ರಿಚ್‌ ಅವರ ಬಲಗೈ ಹೆಬ್ಬರಳು ಮುರಿದಿದೆ. ಕೂಡಲೇ ವೈದ್ಯರ ಬಳಿ ತೆರಳಿರುವ ಅವರು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ಅವರ ಚೇತರಿಕೆಗೆ ಕನಿಷ್ಠ 8 ವಾರಗಳ ಸಮಯ ಬೇಕಿದೆ. ಹೀಗಾಗಿ ಮುಂಬಯುವ ವಿಶ್ವಕಪ್‌ ಟೂರ್ನಿಗೆ ಅವರು ಅಲಭ್ಯರಾಗಿದ್ದಾರೆ,'' ಎಂದು ತಿಳಿಸಿದ್ದಾರೆ.

"ಅನಿರೀಕ್ಷಿತ ಗಾಯದ ಸಮಸ್ಯೆಗಳು ದುರಂತವೇ ಸರಿ. ಏಕೆಂದರೆ ಇತ್ತೀಚೆಗಷ್ಟೇ ಭುಜದ ಗಾಯದ ಸಮಸ್ಯೆಯಿಂದ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದರು. ಕಳೆದ ವರ್ಷವೂ ಅವರು ಹಲವು ಬಾರಿ ಗಾಯದ ಸಮಸ್ಯೆ ಎದುರಿಸಿದ್ದರು. ಅವರು ಬಹುಬೇಗನೆ ಚೇತರಿಸಲಿ ಎಂದು ಹಾರೈಸುತ್ತೇವೆ,'' ಎಂದಿದ್ದಾರೆ.

ಎನ್ರಿಚ್‌ ಅವರ ಸ್ಥಾನದಲ್ಲಿ 32 ವರ್ಷದ ಆಲ್‌ರೌಂಡರ್‌ ಕ್ರಿಸ್‌ ಮಾರಿಸ್‌ ದಕ್ಷಿಣ ಆಫ್ರಿಕಾದ ವಿಶ್ವಕಪ್‌ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮಾರಿಸ್‌, 2018ರ ಫೆಬ್ರವರಿಯಲ್ಲಿ ಕೊನೆಯ ಬಾರಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದರು.

"ಕ್ರಿಸ್‌ ಮಾರಿಸ್‌ ನಮ್ಮ ಮುಂದಿನ ಆಯ್ಕೆ. ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ಅವರು ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಡೆತ್‌ ಬೌಲಿಂಗ್‌ ಜತೆಗೆ ಉತ್ತಮ ವೇಗವನ್ನು ಹೊಂದಿದ್ದಾರೆ. ಅವರ ಪ್ರತಿಭೆ ಇಂಗ್ಲೆಂಡ್‌ನಲ್ಲಿ ತಂಡದ ನೆರವಿಗೆ ಬರಲಿದೆ. ಅವರ ಸೇರ್ಪಡೆಯಿಂದಾಗಿ ತಂಡದ ಬ್ಯಾಟಿಂಗ್‌ಗೂ ಹೆಚ್ಚಿನ ಬಲ ಬಂದಂತಾಗಿದೆ,'' ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಯ ಆಯ್ಕೆ ಸಮಿತಿ ಸಂಚಾಲಕ ಲಿಂಡಾ ಝೋಂಡಿ ಹೇಳಿದ್ದಾರೆ.

ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ವಿಶ್ವಕಪ್‌ಗೂ ಮುನ್ನ ದಕ್ಷಿಣ ಆಫ್ರಿಕಾ ತಂಡ ಮೊದಲಿಗೆ ಶ್ರೀಲಂಕಾ ಮತ್ತು ವೆಸ್ಟ್‌ ಇಂಡೀಸ್‌ ವಿರುದ್ಧ ಮೇ 24 ಮತ್ತು 26ರಂದು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಬಳಿಕ ಮೇ 30ರಂದು ದಿ ಓವಲ್‌ ಕ್ರೀಡಾಂಗಣದಲ್ಲಿ ಆತಿಥೇಯ ಇಂಗ್ಲೆಂಡ್‌ ಎದುರು ತನ್ನ ಅಭಿಯಾನ ಆರಂಭಿಸಲಿದೆ.

Story first published: Tuesday, May 7, 2019, 19:58 [IST]
Other articles published on May 7, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+