Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌: ಆಸ್ಟ್ರೇಲಿಯಾ ತಂಡಕ್ಕೂ ಗಾಯದ ಬರೆ

Injury hit Jhye Richardson ruled out of World Cup

ಮೆಲ್ಬೋರ್ನ್‌, ಮೇ 08: ಕಳೆದ ತಿಂಗಳು ಯುಎಇನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿ ವೇಳೆ ಎದುರಿಸಿದ್ದ ಭುಜದ ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಲು ವಿಫಲರಾಗಿರುವ ಆಸ್ಟ್ರೇಲಿಯಾದ ವೇಗದ ಬೌಲರ್‌ ಜೇ ರಿಚರ್ಡ್ಸನ್‌ ಮುಂಬರುವ ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ಪಾಕಿಸ್ತಾನ ವಿರುದ್ಧ ಶಾರ್ಜಾದಲ್ಲಿ ನಡೆದ ಎರಡನೇ ಏಕದಿನ ಪಂದ್ಯದ ವೇಳೆ 22 ವರ್ಷದ ಬಲಗೈ ವೇಗಿ ರಿಚರ್ಡ್ಸನ್‌ ಭುಜದ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಇದೀಗ ಆಸ್ಟ್ರೇಲಿಯಾ ತಂಡದ ವಿಶ್ವಕಪ್‌ ಪೂರ್ವ ಸಿದ್ಧತೆಯ ಹೊತ್ತಿಗೆ ಚೇತರಿಸಿಕೊಳ್ಳಲು ವಿಫಲರಾಗಿರುವ ಹಿನ್ನೆಲೆಯಲ್ಲಿ ವಿಶ್ವಕಪ್‌ಗೆ ಅವರು ಪ್ರಯಾಣ ಬೆಳಸಂತಾಗಿದೆ.

ರಿಚರ್ಡ್ಸನ್‌ ಇದಕ್ಕೂ ಮುನ್ನ ಭಾರತ ವಿರುದ್ಧದ 5 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಒಟ್ಟು 7 ವಿಕೆಟ್‌ಗಳನ್ನು ಪಡೆಯುವ ಮೂಲಕ ತಂಡಕ್ಕೆ ಸರಣಿ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಇನ್‌ ಫಾರ್ಮ್‌ ಬೌಲರ್‌ ರಿಚರ್ಡ್ಸನ್‌ ಅಲಭ್ಯತೆಯಿಂದಾಗಿ ಆಸ್ಟ್ರೇಲಿಯಾ ತಂಡಕ್ಕೆ ವಿಶ್ವಕಪ್‌ ಅಭಿಯಾನಕ್ಕೂ ಮೊದಲೇ ಭಾರಿ ಹೊಡೆತ ಬಿದ್ದಂತಾಗಿದೆ.

"ನೆಟ್ಸ್‌ನಲ್ಲಿ ರಿಚರ್ಡ್ಸನ್‌ ಬೌಲಿಂಗ್‌ ನಡೆಸಲು ಪ್ರಯತ್ನಿಸಿದರು. ಆದರೆ, ಅವರಿನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಬಳಿಕ ಆಯ್ಕೆ ಸಮಿತಿ ಸದಸ್ಯರೊಡನೆ ಚರ್ಚಿಸಿ ಅವರನ್ನು ವಿಶ್ವಕಪ್‌ ತಂಡದಿಂದ ಹೊರಗಿಡಲು ನಿರ್ಧರಿಸಲಾಗಿದೆ. ಅವರು ಪುನಃಶ್ಚೇತನದಲ್ಲಿ ಮುಂದುವರಿಯಲಿದ್ದು, ಇಂಗ್ಲೆಂಡ್‌ಗೆ ಪ್ರಯಾಣ ಬೆಳಸಲಿರುವ ಆಸ್ಟ್ರೇಲಿಯಾ "ಎ' ತಂಡಕ್ಕೆ ಅವರನ್ನು ಸೇರ್ಪಡೆ ಮಾಡುವ ಆಶಯ ಹೊಂದಿದ್ದೇವೆ, '' ಎಂದು ಆಸ್ಟ್ರೇಲಿಯಾ ತಂಡದ ಫಿಸಿಯೋಥೆರಪಿಸ್ಟ್‌ ಡೇವಿಡ್‌ ಬೇಕ್ಲೀ ಬುಧವಾರ ಹೇಳಿದ್ದಾರೆ.

ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಮೇ 30ರಿಂದ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಜೂನ್‌ 1ರಂದು ಬ್ರಿಸ್ಟೋಲ್‌ನಲ್ಲಿ ಅಫಘಾನಿಸ್ತಾನ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.

ರಿಚರ್ಡ್ಸನ್‌ ಬದಲಿಗೆ ರಿಚರ್ಡ್ಸನ್‌
ಜೇ ರಿಚರ್ಡ್ಸನ್‌ ಅವರ ಸ್ಥಾನದಲ್ಲಿ ಮತ್ತೊಬ್ಬ ಬಲಗೈ ವೇಗದ ಬೌಲರ್‌ ಕೇನ್‌ ರಿಚರ್ಡ್ಸನ್‌ ಆಸ್ಟ್ರೇಲಿಯಾದ ವಿಶ್ವಕಪ್‌ ತಂಡ ಸೇರಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾ ಪರ 20 ಏಕದಿನ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಕೇನ್‌ ರಿಚರ್ಡ್ಸನ್‌ ಒಟ್ಟು 29 ವಿಕೆಟ್‌ಗಳನ್ನು ಪಡೆದಿದ್ದಾರೆ.

Story first published: Wednesday, May 8, 2019, 13:02 [IST]
Other articles published on May 8, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+