Asia Cup 2023: ಟೀಮ್ ಇಂಡಿಯಾ ಬ್ಯಾಟರ್ ಗಳನ್ನು ಕಾಡಿದ ಇನ್ ಸೈಡ್ ಎಡ್ಜ್ ಭೂತ!
ಏಷ್ಯಾ ಕಪ್ ನಲ್ಲಿ ಶನಿವಾರ ಸಾಂಪ್ರದಾಯಿಕ ಎದುರಾಳಿಗಳು ಫೈಟ್ ನಡೆಸುತ್ತಿವೆ. ಭಾರತ- ಪಾಕಿಸ್ತಾನ ತಂಡಗಳ ಕಾದಾಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾದಿದ್ದರು. ಅಂದಕೊಂಡಂತೆ ಮ್ಯಾಚ್ ನಿಗದಿತ ಸಮಯಕ್ಕೆ ಆರಂಭವಾಯಿತು. ಆದರೆ, ಪಂದ್ಯಕ್ಕೆ ಮಳೆ ಪದೆ ಪದೇ ಕಾಟ ನೀಡಿತು.
ಪರಿಣಾಮ ಬ್ಯಾಟರುಗಳು ಚೆಂಡಿನ ವೇಗವನ್ನು ಅರಿಯುವಲ್ಲಿ ವಿಫಲರಾಗಿ ಔಟ್ ಆದರು. ಏಷ್ಯಾಕಪ್ 2023ರ ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಕೆಟ್ಟ ಆರಂಭವನ್ನು ಕಂಡಿತು. 48 ರನ್ ಗಳಿಸುವಷ್ಟರಲ್ಲಿ ಟೀಂ ಇಂಡಿಯಾ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ರನ್ ಗಳಿಸಲು ಪರದಾಡಿದರು. ಇವರಿಬ್ಬರನ್ನೂ ಶಹೀನ್ ಅಫ್ರಿದಿ ಔಟ್ ಮಾಡಿದರು. ಅದೇ ಸಮಯದಲ್ಲಿ ಶ್ರೇಯಸ್ ಅಯ್ಯರ್ ಕೂಡ 14 ರನ್ ಗಳಿಸಿ ಹ್ಯಾರಿಸ್ ರೌಫ್ ಎಸೆತದಲ್ಲಿ ಔಟಾದರು. ಕೊಹ್ಲಿ ಮತ್ತು ರೋಹಿತ್ ಔಟಾದ ಹಿಂದೆ ಪ್ರಮುಖ ಕಾರಣವಿದೆ.

ಎಡಗೈ ವೇಗದ ಬೌಲರ್ ಗಳ ಮುಂದೆ ವಿಕೆಟ್
ಈ ಇಬ್ಬರೂ ಬ್ಯಾಟರುಗಳು 2021 ರಿಂದ ಎಡಗೈ ವೇಗದ ಬೌಲರ್ ಗಳ ಮುಂದೆ ವಿಕೆಟ್ ಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಪಾಕಿಸ್ತಾನದ ಶಹೀನ್ ಅಫ್ರಿದಿ ಎಡಗೈ ವೇಗದ ಬೌಲರ್. ಏಷ್ಯಾ ಕಪ್ 2023 ರ ಮೂರನೇ ಪಂದ್ಯದಲ್ಲಿ ಅವರು ರೋಹಿತ್ ಮತ್ತು ಕೊಹ್ಲಿಯನ್ನು ಔಟ್ ಮಾಡಿದರು. ರೋಹಿತ್ 22 ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು. ಅವರು 2 ಬೌಂಡರಿಗಳನ್ನು ಬಾರಿಸಿದ್ದರು. 7 ಎಸೆತಗಳಲ್ಲಿ 4 ರನ್ ಗಳಿಸಿದ್ದ ಕೊಹ್ಲಿಗೆ ಆಫ್ರಿದಿ ಖೆಡ್ಡಾ ತೋಡಿದರು.
ರೋಹಿತ್ ಹಾಗೂ ವಿರಾಟ್ ಇನ್ ಸೈಡ್ ಎಡ್ಜ್ ಮೂಲಕ ಔಟ್
ರೋಹಿತ್ ಹಾಗೂ ವಿರಾಟ್ ಇನ್ ಸೈಡ್ ಎಡ್ಜ್ ಮೂಲಕ ಔಟ್ ಆಗಿ ಪೆವಿಲಿಯನ್ ಸೇರಿದರು. 2021 ರಿಂದ ಎಡಗೈ ವೇಗದ ಬೌಲರ್ ಗಳ ಎದುರು ರೋಹಿತ್ 6 ಬಾರಿ ಔಟಾಗಿದ್ದಾರೆ. ಕೊಹ್ಲಿ 4 ಬಾರಿ ವಿಕೆಟ್ ಕಳೆದುಕೊಂಡಿದ್ದಾರೆ. ಬೌಲಿಂಗ್ ವೇಳೆ ವಿಶೇಷ ಟ್ರಿಕ್ ಬಳಸಿ ಶಹೀನ್ ಪೆವಿಲಿಯನ್ ಹಾದಿ ತೋರಿಸಿದರು. 2021 ರಿಂದ ಏಕದಿನ ಪಂದ್ಯಗಳಲ್ಲಿ ಎಡಗೈ ವೇಗದ ಬೌಲರ್ ಎದುರು ಕೊಹ್ಲಿ 98 ಎಸೆತಗಳಲ್ಲಿ 87 ರನ್ ಗಳಿಸಿದ್ದಾರೆ.
ಈ ಸಮಯದಲ್ಲಿ, ಅವರು 88.77 ರ ಸ್ಟ್ರೈಕ್ ರೇಟ್ ಹೊಂದಿದ್ದರು. ಕೊಹ್ಲಿ ಸರಾಸರಿ 21.75 ಆಗಿದೆ. ಅವರು ಕೂಡ 4 ಬಾರಿ ಔಟಾಗಿದ್ದಾರೆ. ಇದೇ ವೇಳೆ, ರೋಹಿತ್ 147 ಎಸೆತಗಳಲ್ಲಿ 138 ರನ್ ಗಳಿಸಿದ್ದಾರೆ. ರೋಹಿತ್ ಸ್ಟ್ರೈಕ್ ರೇಟ್ 93.87 ಆಗಿದ್ದು, ಅವರ ಸರಾಸರಿ 23 ಆಗಿದೆ. ರೋಹಿತ್ ಕೂಡ 6 ಬಾರಿ ಔಟಾದರು. ಪಾಕ್ ವಿರುದ್ಧ ರೋಹಿತ್ ಶರ್ಮಾ 11 ರನ್ ಗಳಿಸಿ ಔಟಾದರು.
ಶುಬ್ಮನ್ ಗಿಲ್ 32 ಎಸೆತಗಳಲ್ಲಿ 10 ರನ್ ಗಳಿಸಿ ಔಟ್
ಶುಬ್ಮನ್ ಗಿಲ್ 32 ಎಸೆತಗಳಲ್ಲಿ 10 ರನ್ ಗಳಿಸಿ ಔಟಾದರು. ವಿರಾಟ್ 4 ರನ್ ಗಳಿಸಿ ಔಟಾದರು. ಶ್ರೇಯಸ್ ಅಯ್ಯರ್ 9 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು. ಇಶಾನ್ ಮತ್ತು ಹಾರ್ದಿಕ್ ಪಾಂಡ್ಯ ತಂಡಕ್ಕೆ ಆಧಾರವಾದರು. ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿದ ಜೋಡಿ ಅಬ್ಬರಿಸಿತು. ಪಾಕ್ ಪರ ಶಹೀನ್ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ತಲಾ ಎರಡು ವಿಕೆಟ್ ಪಡೆದರು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications