For Quick Alerts
ALLOW NOTIFICATIONS  
For Daily Alerts
 

IML 2025: ವೆಸ್ಟ್ ಇಂಡೀಸ್ ವಿರುದ್ಧ ಇಂಡಿಯಾ ಮಾಸ್ಟರ್ಸ್‌ಗೆ ಭರ್ಜರಿ ಗೆಲುವು

ಶನಿವಾರ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂಡಿಯಾ ಮಾಸ್ಟರ್ಸ್ ಮತ್ತು ವೆಸ್ಟ್ ಇಂಡೀಸ್ ಮಾಸ್ಟರ್ಸ್ ನಡುವೆ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ 2025 ರ 12ನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮಾಸ್ಟರ್ಸ್ ವಿರುದ್ಧ ಇಂಡಿಯಾ ಮಾಸ್ಟರ್ಸ್ 7 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಇಂಡಿಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಸತತ ಗೆಲುವಿನೊಂದಿಗೆ ಮುನ್ನಡೆದಿದೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಮಾಸ್ಟರ್ಸ್ ಅದ್ಭುತ ಪ್ರದರ್ಶನ ನೀಡಿತು. ಪರಿಣಾಮ ಇಂಡಿಯಾ ಮಾಸ್ಟರ್ಸ್ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 253 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಮಾಸ್ಟರ್ಸ್ 6 ವಿಕೆಟ್ ಕಳೆದುಕೊಂಡು ಕೇವಲ 246 ರನ್ ಕಲೆ ಹಾಕಿತು. ಇದರೊಂದಿಗೆ ಇಂಡಿಯಾ ಮಾಸ್ಟರ್ಸ್ 7 ರನ್‌ಗಳ ಅಂತರದಲ್ಲಿ ಗೆಲುವಿನ ನಗೆ ಬೀರಿತು.

India Masters beat West Indies by 7 runs in match 12 of International Masters League 2025 at Shaheed Veer Narayan Singh International Stadium Raipur on Saturday

ಇಂಡಿಯಾ ಮಾಸ್ಟರ್ಸ್ ಪರ ಆರಂಭಿಕರಾದ ಅಂಬಟಿ ರಾಯುಡು (63) ಮತ್ತು ಸೌರಭ್ ತಿವಾರಿ (60) ಅರ್ಧಶತಕ ಸಿಡಿಸಿ ಮಿಂಚಿದರು. ಈ ಇಬ್ಬರ ಅರ್ಧಶತಕಗಳೊಂದಿಗೆ ಯುವರಾಜ್ ಸಿಂಗ್ 49 ರನ್‌ಗಳ ನೆರವಿನಿಂದ ಇಂಡಿಯಾ ಮಾಸ್ಟರ್ಸ್
ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಂಡಕ್ಕೆ 253 ರನ್‌ಗಳ ಬೃಹತ್ ಗುರಿಯನ್ನು ನೀಡಿತು.

ಇಂಡಿಯಾ ಮಾಸ್ಟರ್ಸ್ ನೀಡಿದ 53 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ಭರ್ಜರಿ ಆರಂಭ ಪಡೆಯಿತು. ಡ್ವೇನ್ ಸ್ಮಿತ್ (79) ಮತ್ತು ವಿಲಿಯಂ ಪರ್ಕಿನ್ಸ್ (52) ಶತಕದ ಜೊತೆಯಾಟವಾಡಿದರು. ನಂತರ ಬಂದ ಲೆಂಡ್ಲ್ ಸಿಮ್ಮನ್ಸ್ 38 ರನ್‌ಗಳಿಸಿದರೆ, ಉಳಿದ ಬ್ಯಾಟರ್‌ಗಳು ತಂಡಕ್ಕೆ ನೆರವಾಗಲಿಲ್ಲ. ಇಂಡಿಯಾ ಮಾಸ್ಟರ್ಸ್ ಪರ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ತಮ್ಮ ಎರಡನೇ ಓವರ್‌ನಲ್ಲಿ 13 ರನ್ ನೀಡಿ 3 ವಿಕೆಟ್ ಕಬಳಿಸಿದರು. ಪವನ್ ನೇಗಿ 27 ರನ್‌ಗಳಿಗೆ 2 ವಿಕೆಟ್ ಪಡೆದು ತಂಡದ ಗೆಲುವಿಗೆ ಕೊಡುಗೆ ನೀಡಿದರು.

ಉಭಯ ತಂಡಗಳ ಪ್ಲೇಯಿಂಗ್-11

ಇಂಡಿಯಾ ಮಾಸ್ಟರ್ಸ್: ಅಂಬಟಿ ರಾಯುಡು (ವಿಕೆಟ್‌ಕೀಪರ್), ಗುರುಕೀರತ್ ಸಿಂಗ್ ಮಾನ್, ಸೌರಭ್ ತಿವಾರಿ, ಯುವರಾಜ್ ಸಿಂಗ್ (ನಾಯಕ), ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಸ್ಟುವರ್ಟ್ ಬಿನ್ನಿ, ಪವನ್ ನೇಗಿ, ರಾಹುಲ್ ಶರ್ಮಾ, ಧವಲ್ ಕುಲಕರ್ಣಿ, ಅಭಿಮನ್ಯು ಮಿಥುನ್.

ವೆಸ್ಟ್ ಇಂಡೀಸ್ ಮಾಸ್ಟರ್ಸ್: ಡ್ವೇನ್ ಸ್ಮಿತ್, ನರಸಿಂಗ್ ಡಿಯೋನರೈನ್, ಕಿರ್ಕ್ ಎಡ್ವರ್ಡ್ಸ್, ಲೆಂಡ್ಲ್ ಸಿಮನ್ಸ್, ಬ್ರಿಯಾನ್ ಲಾರಾ (ನಾಯಕ), ವಿಲಿಯಂ ಪರ್ಕಿನ್ಸ್ (ವಿಕೆಟ್‌ಕೀಪರ್‌), ಜೊನಾಥನ್ ಕಾರ್ಟರ್, ಆಶ್ಲೇ ನರ್ಸ್, ಜೆರೋಮ್ ಟೇಲರ್, ಟಿನೋ ಬೆಸ್ಟ್, ಸುಲೈಮನ್ ಬೆನ್.

Story first published: Sunday, March 9, 2025, 0:05 [IST]
Other articles published on Mar 9, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+