
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಎರಡನೇ ಹಂತದ ತಂಡ ಡುತ್ತಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್, ಕೆ.ಎಲ್ ರಾಹುಲ್ ಭಾರತ ತಂಡದಲ್ಲಿಲ್ಲ. ರಿಷಬ್ ನೇತೃತ್ವದ ಭಾರತ ತಂಡದಲ್ಲಿ ಉಪನಾಯಕ ಹಾರ್ದಿಕ್ ಪಾಂಡ್ಯ. ಹೀಗೆ ಭಾರತಕ್ಕೆ ಇಬ್ಬರು ನಾಯಕರು ಹೊಸಬರು.
ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಎರಡು ಪಂದ್ಯಗಳಲ್ಲಿ ಸೋತ ಭಾರತ ಮೂರನೇ ಪಂದ್ಯದಲ್ಲಿ ಜಯಭೇರಿ ಬಾರಿಸಿತ್ತು. ಭಾರತ ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿ 48 ರನ್‌ಗಳಿಂದ ಗೆದ್ದಿತು. ಈ ಕುರಿತಾಗಿ ಪಾಕಿಸ್ತಾನದ ಮಾಜಿ ನಾಯಕ ಮತ್ತು ದಂತಕಥೆ ಇಂಜಮಾಮ್ ಉಲ್ ಹಕ್ ಭಾರತದ ಯುವಕರನ್ನು ಹೊಗಳಿದ್ದಾರೆ.
''ಈಗಲೂ ಸರಣಿಯಲ್ಲಿ ಭಾರತವೇ ಮುಂಚೂಣಿಯಲ್ಲಿದೆ. ಈಗ ದಕ್ಷಿಣ ಆಫ್ರಿಕಾ ಮೇಲೆ ಒತ್ತಡ ಹೆಚ್ಚಿದೆ. ತವರಿನಲ್ಲಿ ಭಾರತವನ್ನು ಅಷ್ಟು ಸುಲಭವಾಗಿ ಸೋಲಿಸಲಾಗುವುದಿಲ್ಲ. ಎರಡನೇ ಹಂತದ ತಂಡ ಖಂಡಿತವಾಗಿಯೂ ಶ್ಲಾಘನೀಯ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರಂತಹ ಆಟಗಾರರಿಲ್ಲದೆ ಭಾರತ ತಂಡವು ಉತ್ತಮ ಪ್ರದರ್ಶನ ನೀಡುತ್ತಿದೆ'' ಎಂದು ಇಂಜಮಾಮ್ ಹೇಳಿದ್ದಾರೆ.
ಮೂರನೇ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಲೈನ್ ಅಪ್ ಗಳು ಎಚ್ಚೆತ್ತುಕೊಂಡವು. ಬೌಲಿಂಗ್‌ನಲ್ಲಿ ಸ್ಪಿನ್ನರ್‌ಗಳ ಪ್ರದರ್ಶನ ಗಮನಾರ್ಹವಾಗಿದೆ. ಮೊದಲೆರಡು ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದ ಯುಜವೇಂದ್ರ ಚಹಾಲ್ ಮತ್ತು ಅಕ್ಷರ್ ಪಟೇಲ್ ಉತ್ತಮ ಬೌಲಿಂಗ್ ಮಾಡಿ ಪ್ರವಾಸಿಗರ ದಿಕ್ಕು ತಪ್ಪಿಸಿದರು. ವೇಗಿಗಳ ಸಾಲಿನಲ್ಲಿ ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್ ಎದುರಾಳಿಯನ್ನ ಕಟ್ಟಿಹಾಕಿದರು. ಪಂದ್ಯದಲ್ಲಿ ಹರ್ಷಲ್ 4 ಮತ್ತು ಚಹಾಲ್ 3 ವಿಕೆಟ್ ಪಡೆದರು.
ಇನ್ನು ಬ್ಯಾಟಿಂಗ್ ವಿಷಯಕ್ಕೆ ಬಂದರೆ ರುತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ಅರ್ಧಶತಕಗಳು ಭಾರತಕ್ಕೆ ನೆರವಾದವು. ಮೊದಲೆರಡು ಪಂದ್ಯಗಳಲ್ಲಿ ಲಯ ಕಂಡುಕೊಳ್ಳಲು ವಿಫಲರಾದ ರುತುರಾಜ್ ವಿಶಾಖಪಟ್ಟಣಂನಲ್ಲಿ ಅತ್ಯಂತ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಆಗಿ 35 ಎಸೆತಗಳಲ್ಲಿ 57 ರನ್ ಗಳಿಸಿದರು. ಇದರಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ಗಳು ಸೇರಿವೆ. ಇಶನ್ ಕಿಶನ್ 35 ಎಸೆತಗಳಲ್ಲಿ 54 ರನ್ ಗಳಿಸಿದರು. ಇವರ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳನ್ನು ಬಾರಿಸಿದರು.
ಭಾರತದ ಯುವ ಆಟಗಾರರ ಬೆಳವಣಿಗೆಯ ಹಿಂದೆ ರಾಹುಲ್ ದ್ರಾವಿಡ್ ಅವರ ಶ್ರೇಷ್ಠತೆಯನ್ನು ಇಂಜಮಾಮ್ ಶ್ಲಾಘಿಸಿದರು. ''ರುತುರಾಜ್ ಮತ್ತು ಇಶಾನ್ ಅವರಂತೆ ಆಡಿದರೆ ತಂಡದ ಕೀರ್ತಿ ಹೆಚ್ಚುತ್ತದೆ. ಈ ಎಲ್ಲಾ ಪ್ರದರ್ಶನಗಳು ಭಾರತ ತಂಡದ ಶಕ್ತಿಯನ್ನು ತೋರಿಸುತ್ತದೆ. ಎರಡನೇ ಹಂತದ ತಂಡ ಈ ರೀತಿ ಸೆಣಸಾಡುವುದನ್ನು ನೋಡುವುದೇ ಸೊಗಸು. ದ್ರಾವಿಡ್ ಈ ಹಿಂದೆ ಹೆಚ್ಚಾಗಿ ಅಂಡರ್-19 ತಂಡಕ್ಕೆ ತರಬೇತುದಾರರಾಗಿದ್ದಾರೆ. ದ್ರಾವಿಡ್ ಈಗಲೂ ಅದೇ ಶೈಲಿಯನ್ನು ಅನುಸರಿಸುತ್ತಿದ್ದಾರೆ " ಎಂದು ಇಂಜಮಾಮ್ ಸೇರಿಸಿದರು.
ದ್ರಾವಿಡ್ ಭಾರತಕ್ಕೆ ಅಂಡರ್-19 ಪ್ರಶಸ್ತಿ ಗೆಲ್ಲಲು ಕಾರಣರಾದ ಕೋಚ್ ಆಗಿದ್ದು, ಪ್ರಸ್ತುತ ತಂಡದಲ್ಲಿರುವ ಯುವ ಆಟಗಾರರಲ್ಲಿ ಹೆಚ್ಚಿನವರು ಈಗಾಗಲೇ ಅವರ ಅಡಿಯಲ್ಲಿ ಆಡಿದ ಆಟಗಾರರಾಗಿದ್ದಾರೆ. ಆದ್ದರಿಂದ, ದ್ರಾವಿಡ್ ಪ್ರತಿ ಆಟಗಾರನ ಪ್ರತಿಭೆಯನ್ನು ಚೆನ್ನಾಗಿ ತಿಳಿದಿದ್ದಾರೆ. ಇದು ಕೋಚ್ ಆಗಿ ಅವರ ಕೆಲಸವನ್ನು ಸುಲಭಗೊಳಿಸುತ್ತದೆ.