ಗವಾಸ್ಕರ್ ನೀಡಿದ ಸಣ್ಣ ಸಲಹೆ ವೃತ್ತಿ ಬದುಕಿನಲ್ಲಿ ದೊಡ್ಡ ಪಾತ್ರವಹಿಸಿತು: ಇನ್ಜಮಾಮ್ ಉಲ್ ಹಕ್

ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ಇನ್ಜಮಾಮ್ ಉಲ್ ಹಕ್ ತಮ್ಮ ಕ್ರಿಕೆಟ್ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ದೊಡ್ಡ ಸಮಸ್ಯೆಯೊಂದನ್ನು ಎದುರಿಸುತ್ತಿದ್ದರಂತೆ. ಶಾರ್ಟ್ ಎಸೆತಗಳನ್ನು ಎದುರಿಸುವುದು ಇನ್ಜಮಾಮ್ ಉಲ್ ಹಕ್ ಪಾಲಿಗೆ ದೊಡ್ಡ ಸವಾಲಾಗುತ್ತು. ಈ ಸಮಸ್ಯೆಯನ್ನು ಸಣ್ಣ ಸಲಹೆಯ ಮೂಲಕ ಸುನಿಲ್ ಗವಾಸ್ಕರ್ ಬಗೆಹರಿಸಿದರು ಎಂದು ಇನ್ಜಮಾಮ್ ಉಲ್ ಹಕ್ ಸ್ಮರಿಸಿಕೊಂಡಿದ್ದಾರೆ.
1992 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್ ಗೆಲುವಿನ ನಂತರ ಇಂಗ್ಲೆಂಡ್‌ಗೆ ತನ್ನ ಮೊದಲ ಪ್ರವಾಸಕ್ಕೆ ಇನ್ಜಮಾಮ್ ತಂಡದ ಜೊತೆಗೆ ತೆರಳಿದ್ದರು. ಅಲ್ಲಿ ಶಾರ್ಟ್ ಎಸೆತಗಳನ್ನು ನಿರ್ವಹಿಸುವಲ್ಲಿ ತೊಂದರೆಗಳನ್ನು ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದ ವಿಚಾರವನ್ನು ಪಾಕ್ ಮಾಜಿ ನಾಯಕ ಹೇಳಿಕೊಂಡಿದ್ದಾರೆ.
ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಇನ್ಜಮಾಮ್ ಉಲ್ ಹಕ್ ಸಮಸ್ಯೆಗೆ ಯಾವ ರೀತಿ ಪರಿಹಾರ ನೀಡಿದರು ಎಂದು ಮುಂದೆ ಓದಿ.

ಶಾರ್ಟ್ ಪಿಚ್ ಎದುರಿಸಲು ಕಷ್ಟಪಡುತ್ತಿದ್ದೆ
1992ರ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದೆ. ಅದು ನನ್ನ ಮೊದಲ ಇಂಗ್ಲೆಂಡ್ ಪ್ರವಾಸವಾಗಿತ್ತು. ಆ ಪಿಚ್‌ಗಳಲ್ಲಿ ನಾನು ಹೇಗೆ ಆಡಬೇಕು ಎಂಬ ಬಗ್ಗೆ ನನಗೆ ಯಾವುದೇ ಕಲ್ಪನೆ ಇರಲಿಲ್ಲ. ಶಾರ್ಟ್ ಪಿಚ್ ಎಸೆತಗಳನ್ನು ಆಡಲು ಸಾಧ್ಯವಾಗದ ಕಾರಣ ನಾನು ಕೆಟ್ಟ ಹೊಡೆತಗಳನ್ನು ಬಾರಿಸುತ್ತಿದ್ದೆ ಎಂದು ಇನ್ಜಮಾಮ್ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.

ಸುನಿಲ್ ಗವಾಸ್ಕರ್ ಬಳಿ ಸಹಾಯ ಕೇಳಿದೆ
ಆ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಚಾರಿಟಿ ಪಂದ್ಯವೊಂದರಲ್ಲಿ ಸುನಿಲ್ ಗವಾಸ್ಕರ್ ಅವರನ್ನು ಭೇಟಿ ಮಾಡಿದ್ದೆ. ಆಗ ಅವರ ಬಳಿ ತನ್ನ ಸಮಸ್ಯೆಯ ಬಗ್ಗೆ ಸುನಿಲ್ ಗವಾಸ್ಕರ್ ಬಳಿ ಹೇಳಿಕೊಂಡು ಅವರಲ್ಲಿ ಸಹಾಯ ಕೇಳಿದ್ದೆ. ಅದು ಕೇವಲ ಅರ್ಧ ಗಂಟೆಯ ಮಾತುಕತೆಯಾಗಿತ್ತು ಎಂದು ಇನ್ಜಮಾಮ್ ಸ್ಮರಿಸಿಕೊಂಡಿದ್ದಾರೆ.

ಸಣ್ಣ ಬದಲಾವಣೆಗೆ ಸುನಿಲ್ ಸಲಹೆ
ಶ್ರೇಷ್ಠ ವ್ಯಕ್ತಿಗಳ ದಾರಿಗಳು ಶ್ರೇಷ್ಠವಾಗಿಯೇ ಇರುತ್ತದೆ. ನನ್ನ ಬ್ಯಾಟಿಂಗ್ ಸಮಸ್ಯೆಯ ಪರಿಹಾರಕ್ಕೆ ಸುನಿಲ್ ಗವಾಸ್ಕರ್ ಒಂದು ಸಣ್ಣ ಕೆಲಸವನ್ನು ಮಾಡಲು ಮಾತ್ರವೇ ಹೇಳಿದರು. ಅದನ್ನು ಮಾಡಿದರೆ ಈ ಸಮಸ್ಯೆಯ ಸುಳಿಯಿಂದ ಹೊರಬರಲು ಸಾಧ್ಯವೆಂದು ತಿಳಿಸಿದರು ಎಂದು ಇನ್ಜಮಾಮ್ ಉಲ್ ಹಕ್ ಹೇಳಿದ್ದಾರೆ.

ಸುನಿಲ್ ಗವಾಸ್ಕರ್ ನೀಡಿದ ಸಲಹೆ
ಸುನಿಲ್ ಗವಾಸ್ಕರ್ ನೀಡಿದ ಸಲಹೆಯೇನೆಂದು ಇನ್ಜಮಾಮ್ ತಮ್ಮ ಯುಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. "ಸುನಿಲ್ ಗವಾಸ್ಕರ್ ನನಗೆ ಬ್ಯಾಟಿಂಗ್ ಮಾಡುವ ವೇಳೆಯಲ್ಲಿ ಶಾರ್ಟ್ ಬಾಲ್ ಅಥವಾ ಬೌನ್ಸರ್‌ಗಳ ಬಗ್ಗೆ ಯೋಚನೆಯನ್ನು ಮಾಡಲು ಹೋಗಬೇಡ. ಆ ಕ್ಷಣದಲ್ಲಿ ಅವುಗಳ ಬಗ್ಗೆ ಚಿಂತಿಸಿದರೆ ನೀನು ಸಿಕ್ಕಿಹಾಕಿಕೊಳ್ಳುತ್ತೀಯ. ಬೌಲರ್‌ಗಳು ಚೆಂಡೆಸೆಯುವಾಗ ಅದಕ್ಕೆ ಪ್ರತಿಯಾಗಿ ಸಹಜವಾಗಿಯೇ ಅರ್ಥವಾಗುತ್ತದೆ. ಆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ" ಎಂದು ಸುನಿಲ್ ಗವಾಸ್ಕರ್ ಹೇಳಿದ್ದನ್ನು ಇನ್ಜಮಾಮ್ ಉಲ್ಲೇಖಿಸಿದರು.

ಬಳಿಕ ಎದುರಾಗಲೇ ಇಲ್ಲ ಈ ಸಮಸ್ಯೆ
ಸುನಿಲ್ ಗವಾಸ್ಕರ್ ಹೇಳಿದ ಈ ಬದಲಾವಣೆಯನ್ನು ಇನ್ಜಮಾಮ್ ಉಲ್ ಹಕ್ ನೆಟ್ ಪ್ರ್ಯಾಕ್ಟೀಸ್ ಸಂದರ್ಭದಲ್ಲಿ ಅಳವಡಿಸಿಕೊಂಡು ಅಭ್ಯಾಸ ಮಾಡಿದ್ದನ್ನು ಇನ್ಜಮಾಮ್ ಉಲ್ ಹಕ್ ಹೇಳಿಕೊಂಡಿದ್ದು, ಅದಾದ ಬಳಿಕ ಶಾರ್ಟ್ ಪಿಚ್ ಬಾಲ್‌ಗಳನ್ನು ಎದುರಿಸುವ ಬಗ್ಗೆ ತನಗೆ ಯಾವತ್ತೂ ಸಮಸ್ಯೆಯಾಗಲಿಲ್ಲ ಎಂದು ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications