ಪಂಜಾಬ್‌ಗೆ ಮಾಡು ಇಲ್ಲವೆ ಮಡಿ, ಚೆನ್ನೈಗೆ ಔಪಚಾರಿಕ ಪಂದ್ಯ

ಪುಣೆ, ಮೇ 20: ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸುತ್ತಿದೆ. ಪಂದ್ಯವು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ಚೆನ್ನೈ ತಂಡ ಟಾಸ್ ಗೆದ್ದಿದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಐಪಿಎಲ್ 11ನ ಲೀಗ್ ಹಂತದ ಕೊನೆಯ ಪಂದ್ಯ ಇದಾಗಿದ್ದು ಪ್ಲೇ ಆಫ್‌ಗೆ ಪ್ರವೇಶ ಗಿಟ್ಟಿಸಲು ಪಂಜಾಬ್ ತಂಡವು ಭಾರಿ ಅಂತರದಲ್ಲಿ ಗೆಲುವು ಸಾಧಿಸುವ ಒತ್ತಡದಲ್ಲಿದೆ. ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ಚೆನ್ನೈ ತಂಡ, ಕಳೆದ ಪಂದ್ಯದಲ್ಲಿ ಸೋಲನ್ನಪ್ಪಿರುವ ಕಾರಣ ಈ ಪಂದ್ಯ ಗೆದ್ದು ಗೆಲುವಿನ ಹಾದಿ ಮರಳುವ ಪ್ರಯತ್ನ ಮಾಡಲಿದೆ.
ಸಿಎಸ್‌ಕೆ ಮತ್ತು ಪಂಜಾಬ್ ತಂಡಗಳು ಪರಸ್ಪರ 27 ಪಂದ್ಯಗಳನ್ನು ಆಡಿದ್ದು ಅದರಲ್ಲಿ 10 ಪಂದ್ಯಗಳಲ್ಲಿ ಚೆನ್ನೈ ಗೆದ್ದಿದ್ದರೆ, 7 ಪಂದ್ಯಗಳಲ್ಲಿ ಪಂಜಾಬ್ ಗೆದ್ದಿದೆ. ಒಂದು ಪಂದ್ಯ ಟೈ ಆಗಿದೆ. ಮೇಲ್ನೋಟಕ್ಕೆ ಚೆನ್ನೈ ಬಲಿಷ್ಠ ತಂಡವಾಗಿ ಕಾಣುತ್ತಿದೆಯಾದರೂ ಪಂಜಾಬ್‌ನ ಬ್ಯಾಟಿಂಗ್ ಬಲ ಹೆಚ್ಚಿದೆ.
ಪಂಜಾಬ್‌ಗೆ ಭಾರಿ ಅಂತರದ ಗೆಲುವು ಅವಶ್ಯಕವಿರುವ ಕಾರಣ ಆರಂಭಿಕ ಆಟಗಾರರಾದ ಕೆ.ಎಲ್.ರಾಹುಲ್ ಹಾಗೂ ಕ್ರಿಸ್ ಗೇಲ್ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು, ಈ ಜೋಡಿ ಸಿಡಿದೆದ್ದರೆ ಪ್ಲೇ ಆಫ್ ಕನಸು ನನಸಾಗುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications