
ಅಂಪೈರ್ ನಿರ್ಣಯ ನಿಜಕ್ಕೂ ಆಘಾತಕಾರಿ
'' ಅಂಪೈರ್ ನಿರ್ಣಯ ನಿಜಕ್ಕೂ ಆಘಾತಕಾರಿ, ಇದರಿಂದ ಪಂದ್ಯ ಕಳೆದುಕೊಳ್ಳಬೇಕಾಯಿತು. ಈ ವಿಷಯದ ಬಗ್ಗೆ ಗಮನಹರಿಸುವಂತೆ ರೆಫ್ರಿ ಅವರಿಗೆ ಅಧಿಕೃತ ದೂರು ನೀಡಿದ್ದೇವೆ. ರೆಫ್ರಿ ನೀಡುವ ನಿರ್ಣಯಕ್ಕೆ ಬದ್ಧರಾಗಿರುತ್ತೇವೆ. ಗುಣಮಟ್ಟ, ನ್ಯಾಯಯುತವಾಗಿ ಆಟದ ನಿರೀಕ್ಷೆ ಅಭಿಮಾನಗಳಲ್ಲಿರುತ್ತದೆ" ಎಂದು ಕಿಂಗ್ಸ್ ಎಲೆವನ್ ತಂಡ ಹೇಳಿದೆ.
ಡೆಲ್ಲಿ ಹಿಂದಿಕ್ಕಿ ದಾಖಲೆ ಬರೆದ ಕಿಂಗ್ಸ್ ಎಲೆವನ್ ''ಕ್ಯಾಪ್ಟನ್'

ಅಂಪೈರ್ ನಿರ್ಣಯದ ಬಗ್ಗೆ ರೆಫ್ರಿ ಪಾತ್ರವೇನು?
ಮುಂದೇನು?: ಅಂಪೈರ್ ನಿರ್ಣಯದ ಬಗ್ಗೆ ತಂಡದ ನಾಯಕ ಪ್ರಶ್ನಿಸುವ ಹಕ್ಕು ಎಲ್ಲಾ ಸಂದರ್ಭಗಳಲ್ಲೂ ಇರುವುದಿಲ್ಲ. ಕರ್ನಾಟಕ ತಂಡದ ನಾಯಕ ವಿನಯ್ ಕುಮಾರ್ ಅವರು ಈ ಹಿಂದೆ ಮೈದಾನದಲ್ಲೇ ಅಂಪೈರ್ ಜೊತೆ ವಾದಿಸಿ, ತಂಡಕ್ಕೆ 2 ಹೆಚ್ಚುವರಿ ರನ್ ಸಂಪಾದಿಸಿದ್ದು ಇತಿಹಾಸ. ಆದರೆ, ಚುಟುಕು ಕ್ರಿಕೆಟ್ ಪಂದ್ಯದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಕೆಎಲ್ ರಾಹುಲ್ ನೀಡಿರುವ ದೂರನ್ನು ಮ್ಯಾಚ್ ರೆಫ್ರಿ ಶ್ರೀನಾಥ್ ಅವರು ಐಪಿಎಲ್ ಆಡಳಿತ ಕೌನ್ಸಿಲ್ ಮುಂದಿಟ್ಟು ಚರ್ಚಿಸಿ ತಮ್ಮ ನಿರ್ಣಯ ಪ್ರಕಟಿಸಲಿದ್ದಾರೆ.

ಪಂದ್ಯದ ಫಲಿತಾಂಶ
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್, ಮಾರ್ಕಸ್ ಸ್ಟೋಯ್ನಿಸ್ ಅದ್ಭುತ ಬ್ಯಾಟಿಂಗ್‌ನೊಂದಿಗೆ (21 ಎಸತಕ್ಕೆ 53 ರನ್) ಮತ್ತು ಶ್ರೇಯಸ್ ಐಯ್ಯರ್ 39, ರಿಷಭ್ ಪಂತ್ 31 ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 157 ರನ್ ಗಳಿಸಿತ್ತು.
ಐಪಿಎಲ್ ಇತಿಹಾಸದ ಸೂಪರ್ ಓವರ್ ಪಂದ್ಯಗಳಲ್ಲಿ ಸೋತು-ಗೆದ್ದವರ ಪಟ್ಟಿ
ಗುರಿ ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್, ಮಯಾಂಕ್ ಅಗರ್ವಾಲ್ 89 (60 ಎಸೆತ) ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 157 ರನ್ ಬಾರಿಸಿ ಪಂದ್ಯ ಸರಿದೂಗಿಸಿತ್ತು. ಇನ್ನೊಂದು ರನ್ ಗಳಿಸುವಷ್ಟರಲ್ಲಿ ಮಯಾಂಕ್ ವಿಕೆಟ್ ಒಪ್ಪಿಸಿದ್ದರು. ಸೂಪರ್ ಓವರ್‌ನಲ್ಲಿ ಕೆXIಪಿ 2 ರನ್ ಬಾರಿಸಿತ್ತು, ಡೆಲ್ಲಿ 3 ರನ್ ಬಾರಿಸಿ ಪಂದ್ಯ ಗೆದ್ದಿತು.
ಸೆಹ್ವಾಗ್ ಟ್ವೀಟ್
ಅಂಪೈರ್ ಗೆ ಮ್ಯಾನ್ ಆಫ್ ದಿ ಮ್ಯಾಚ್ ನೀಡಬೇಕು. ರನ್ ಇದ್ದಿದ್ದನ್ನು ಶಾರ್ಟ್ ರನ್ ಎಂದು ಹೇಳಿ ಪ್ರಮಾದ ಎಸಗಿದ ಅಂಪೈರ್ ನಿಜಕ್ಕೂ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹರು. ಇದು ಶಾರ್ಟ್ ರನ್ ಆಗಿರಲಿಲ್ಲ. ಪಂದ್ಯದ ದಿಕ್ಕು ಬದಲಾಯಿಸಿದ್ದು ಇದೇ ಘಟನೆ ಎಂದು ಟ್ವೀಟ್ ಮಾಡಿದ್ದರು.


Click it and Unblock the Notifications












