ದೇವದತ್ ಭಾರತದ ಭವಿಷ್ಯದ ತಾರೆ ಎಂದ ಕೋಚ್ ಸೈಮನ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಯುವ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಹೊಸ ಯೋಜನೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್, ಆಸ್ಟ್ರೇಲಿಯಾ ಮಾಜಿ ಆಟಗಾರ ಸೈಮನ್ ಕಟಿಚ್ ರೂಪಿಸಿದ್ದು ಎಲ್ಲರಿಗೂ ಗೊತ್ತಿರಬಹುದು. ಯುವ ಪ್ರತಿಭೆ ಜೊತೆ ಒಬ್ಬ ಅನುಭವಿ ಆಟಗಾರನನ್ನು ಜೋಡಿ ಯಶಸ್ವಿಯಾಗಿದ್ದಾರೆ. ಈ ಪ್ರೋಗ್ರಾಂ ಜಾರಿಯಾದ ಮೊದಲ ಪಂದ್ಯದಲ್ಲೇ ದೇವದತ್ -ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಐಪಿಎಲ್ ನ ಮೊದಲ ನಾಲ್ಕು ಪಂದ್ಯಗಳಲ್ಲೇ ಮೂರು ಅರ್ಧಶತಕ್ ಸಿಡಿಸಿ ಮಿಂಚಿರುವ ಕರ್ನಾಟಕದ ಪ್ರತಿಭೆ ದೇವದತ್ ಪಡಿಕ್ಕಲ್ ಬಗ್ಗೆ ಆರ್ ಸಿಬಿ ಕೋಚ್ ಸೈಮನ್ ಕಟಿಚ್ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಭಾರತದ ಭವಿಷ್ಯದ ತಾರೆ, ಅವರ ಉಜ್ವಲ ಭವಿಷ್ಯ ನನ್ನ ಕಣ್ಮುಂದೆ ಗೋಚರಿಸುತ್ತಿದೆ ಎಂದಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಎರಡರಲ್ಲೂ ಮಿಂಚಿದರು. ಜೋಸ್ ಬಟ್ಲರ್ ಅವರ ಕ್ಯಾಚನ್ನು ಮೊದಲ ಸ್ಲಿಪ್ ನಲ್ಲಿದ್ದ ದೇವದತ್ ಅದ್ಭುತವಾಗಿ ಹಿಡಿದರು. 17ನೇ ಓವರ್ ನಲ್ಲಿ 47 ರನ್ ಗಳಿಸಿದ್ದ ಮಹಿಪಾಲ್ ಲೊಮ್ರೊರ್ ನೀಡಿದ್ದ ಕ್ಯಾಚನ್ನು ಹಿಡಿದು ಪೆವಿಲಿಯನ್ ಗೆ ಕಳಿಸಿದರು.
155ರನ್ ಚೇರ್ ಮಾಡು ಬ್ಯಾಟಿಂಗಿಗೆ ಇಳಿದ ಆರ್ ಸಿಬಿ ಅರೋನ್ ಫಿಂಚ್ ಬೇಗನೇ ವಿಕೆಟ್ ಕಳೆದುಕೊಂಡಿತು. ಬಳಿಕ ತಮ್ಮ ಮೆಂಟರ್ ವಿರಾಟ್ ಕೊಹ್ಲಿ ಜೊತೆಗೂಡಿ 2ನೇ ವಿಕೆಟ್ ಗೆ 99ರನ್ ಕಲೆ ಹಾಕಿದರು. ಐಪಿಎಲ್ 2020ರಲ್ಲಿ ಮೂರನೇ ಅರ್ಧಶತಕ ಗಳಿಸಿದರು. 16ನೇ ಓವರ್ ನಲ್ಲಿ 63ರನ್ ಗಳಿಸಿದ್ದಾಗ ಜೋಫ್ರಾ ಆರ್ಚರ್ ಗೆ ವಿಕೆಟ್ ಒಪ್ಪಿಸಿದರು. ಆ ವೇಳೆಗಾಗಲೇ ತಂಡ ಗೆಲುವಿನ ದಡದ ಸಮೀಪಕ್ಕೆ ಬಂದಿತ್ತು.

ದೇವದತ್ ತಯಾರಿ ಬಗ್ಗೆ ಕೋಚ್
ಕೊಂಚ ವಿರಾಮದ ನಂತರದ ಮೈದಾನಕ್ಕೆ ಇಳಿಯುವ ಮುನ್ನ ಇಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳಲು ಪಂದ್ಯಕ್ಕೂ ಕೆಲ ಗಂಟೆಗಳ ಮುನ್ನ ಪ್ರಾಕ್ಟೀಸ್ ಪಂದ್ಯದಲ್ಲಿ ದೇವದತ್ ಉತ್ಸಾಹದಿಂದ ಆಡಿದ್ದನ್ನು ನೋಡಿದೆ. ಈ ಬಿಸಿಲಿನಲ್ಲಿ ಫೀಲ್ಡಿಂಗ್ ಮಾಡಿ ರನ್ ಚೇಸ್ ಮಾಡಲು ಸಿದ್ಧವಾಗಬೇಕಿತ್ತು. ಬಟ್ಲರ್ ಕ್ಯಾಚ್ ಹಿಡಿದಿದ್ದು ಆತನಲ್ಲಿನ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಿಸಿರಬಹುದು. ಆತನ ಮುಂದೆ ಅದ್ಭುತ ಭವಿಷ್ಯವಿದೆ. ಅದರ ಕುರುಹು ಐಪಿಎಲ್ ನಲ್ಲಿ ಕಾಣಿಸುತ್ತಿದೆ ಎಂದು ಕಟಿಚ್ ಹೇಳಿದರು.

ಮೆಂಟರ್ ಶಿಪ್ ಕಾರ್ಯಕ್ರಮ
ಮುಖ್ಯ ಕೋಚ್ ಸೈಮನ್ ಕಟಿಚ್ ಅವರ ನಿರ್ದೇಶನದಂತೆ ಈ ಮೆಂಟರ್ ಶಿಪ್ ಕಾರ್ಯಕ್ರಮವನ್ನು ಹೊರ ತರಲಾಗಿದೆ. ಇದರಿಂದ ಆಟಗಾರರ ನಡುವೆ ಪರಸ್ಪರ ಬಾಂಧವ್ಯ ಹೆಚ್ಚಾಗಲಿದೆ. ಆಟದ ಕೌಶಲ್ಯ ಅಭಿವೃದ್ಧಿಗೆ ಇದು ಪೂರಕವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿರುವ ಕ್ರಿಕೆಟ್ ದಿಗ್ಗಜ ಆಟಗಾರರು ಯುವ ಅನ್ ಕ್ಯಾಪ್ಡ್ ಆಟಗಾರರನ್ನು ಹುರಿದುಂಬಿಸಲು ಅವರ ಅನುಭವ ಧಾರೆ ಎರೆಯಲು ಇದು ಉತ್ತಮ ವೇದಿಕೆಯಾಗಿದೆ. ತಂಡದಲ್ಲಿ ಯುವ ಹಾಗೂ ಅನುಭವಿ ಆಟಗಾರರು ಸಮ ಸಂಖ್ಯೆಯಲ್ಲಿರುವುದು ಈ ರೀತಿ ಪ್ರಯೋಗಕ್ಕೆ ಅನುಕೂಲವಾಗಿದೆ ಎಂದಿದ್ದಾರೆ.
ಯುವರಾಜ್ ಹಾಕಿದ ಸವಾಲಿಗೆ ವಿನಮ್ರ ಉತ್ತರದ ಮೂಲಕ ಹೃದಯ ಗೆದ್ದ ದೇವದತ್ ಪಡಿಕ್ಕಲ್

ಗೇಮ್ ಪ್ಲ್ಯಾನ್ ಬದಲು?
ಆರಂಭಿಕ ಆಟಗಾರರಾಗಿ ದೇವದತ್ ಪಡಿಕಲ್ ಹಾಗೂ ಆರೋನ್ ಫಿಂಚ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮೆಂಟರ್ ಶಿಪ್ ಪ್ರೋಗ್ರಾಂನಲ್ಲಿರುವ ಪಡಿಕ್ಕಲ್ ಹಾಗೂ ಕೊಹ್ಲಿ, ಸೈನಿ ಹಾಗೂ ಸ್ಟೇನ್ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ. ಹೀಗಾಗಿ ಪಿಚ್ ಗೆ ತಕ್ಕಂತೆ ಗೇಮ್ ಪ್ಲ್ಯಾನ್ ರೂಪಿಸಲಾಗುವುದು. 20 ಓವರ್ ಗಳ ಕಾಲ ಫೀಲ್ಡ್ ನಲ್ಲಿ ಸಕ್ರಿಯವಾಗಿರವಾಗುವುದು ಹೇಗೆ ಎಂಬುದು ದೇವದತ್ ರಂಥ ಯುವ ಆಟಗಾರರಿಗೆ ಸವಾಲಾಗಲಿದೆ. ಈ ಬಗ್ಗೆ ಥೆರಸಿಪ್ಟ್, ಫಿಸಿಯೋಗಳ ಸಲಹೆಯನ್ನು ಪಡೆಯಲಾಗುತ್ತಿದೆ ಎಂದರು.

ದೇವದತ್ ಪಡಿಕ್ಕಲ್ ಕ್ರಿಕೆಟ್ ದಾಖಲೆ
ಅಂಡರ್ 19, ಲಿಸ್ಟ್ ಎ, ಪ್ರಥಮ ದರ್ಜೆ ಕ್ರಿಕೆಟ್ ಎಲ್ಲದರಲ್ಲೂ ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಸಿಡಿಸಿದ ದಾಖಲೆ ಹೊಂದಿರುವ ದೇವದತ್ ಪಡಿಕ್ಕಲ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದಾರೆ. 20 ಲಕ್ಷದ ಮೂಲ ಬೆಲೆ ಆರ್ ಸಿಬಿ ಖರೀದಿಸಿದ್ದು, 2020ರಲ್ಲಿ ಅಕ್ಟೋಬರ್ 04ರ ಎಣಿಕೆಯಂತೆ 4 ಪಂದ್ಯಗಳಲ್ಲಿ 134.88 ಸ್ಟ್ರೈಕ್ ರೇಟ್ ಹಾಗೂ 43.50 ರನ್ ಸರಾಸರಿಯಂತೆ 174ರನ್ ಗಳಿಸಿದ್ದಾರೆ. 3 ಅರ್ಧಶತಕವಿದ್ದು, 19 ಬೌಂಡರಿ, 3 ಸಿಕ್ಸರ್ ಬಾರಿಸಿದ್ದಾರೆ. 63 ರನ್ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ.

ಕ್ರಿಸ್ ಮೋರಿಸ್ ಬಗ್ಗೆ
ಆರ್ ಸಿಬಿ ತಂಡದಲ್ಲಿ ಆಲ್ ರೌಂಡರ್ ಕೊರತೆಯನ್ನು ನೀಗಿಸಲು ಆಲ್ ರೌಂಡರ್ ಕ್ರಿಸ್ ಮೊರಿಸ್ ಶೀಘ್ರವೇ ಕಣಕ್ಕಿಳಿಯುವ ಸಾಧ್ಯತೆಯಿದೆ. ಮೊರಿಸ್ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಬೇಕಿದೆ. ತರಬೇತಿ ಶಿಬಿರದಲ್ಲಿ ಉತ್ತಮ ಫಲಿತಾಂಶ ನೀಡುತ್ತಿದ್ದಾರೆ.ಮೊರಿಸ್ ಅವರ ಸ್ನಾಯು ಸೆಳೆತ ಸಮಸ್ಯೆ ದೂರಾಗಿದೆ. ಶೀಘ್ರದಲ್ಲೇ ಆಡುವ ಹನ್ನೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕಟಿಚ್ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications