Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 19 Qualifier: ಆರ್‌ಸಿಬಿಯನ್ನು ಸತತ 2ನೇ ಬಾರಿ ಫೈನಲ್‌ ತಲುಪಿಸಿದ 5 ಹೀರೋಗಳು

ಧರ್ಮಶಾಲಾದಲ್ಲಿ ನಡೆದ 19ನೇ ಆವೃತ್ತಿ ಐಪಿಎಲ್‌ನ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಗುಜರಾತ್‌ ಟೈಟಾನ್ಸ್‌ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಕ್ಲಾಸ್ ಪ್ರದರ್ಶನ ನೀಡಿ ಅಬ್ಬರಿಸಿದೆ. ಒತ್ತಡವನ್ನು ಮೆಟ್ಟಿನಿಂತು ಆಡಿದ ಆರ್‌ಸಿಬಿ ಐದನೇ ಬಾರಿಗೆ ಐಪಿಎಲ್‌ ಫೈನಲ್‌ಗೆ ಪ್ರವೇಶಿಸಿದೆ.

ಆರ್‌ಸಿಬಿ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಈ ಬಾರಿ ಕಣಕ್ಕೆ ಇಳಿದಿತ್ತು. ತನ್ನ ಕ್ಷಮತೆ ಹಾಗೂ ಘನತೆಗೆ ತಕ್ಕ ಆಟವನ್ನು 19ನೇ ಆವೃತ್ತಿಯಲ್ಲಿ ಆಡಿ, ಮತ್ತೊಮ್ಮೆ ಪ್ರಶಸ್ತಿ ಎತ್ತುವತ್ತ ಹೆಜ್ಜೆಯನ್ನು ಇಟ್ಟಿದೆ. ಮಂಗಳವಾರ ಆರ್‌ಸಿಬಿ, ಗುಜರಾತ್ ಟೈಟಾನ್ಸ್‌ ವಿರುದ್ಧ 92 ರನ್‌ ಜಯ ಸಾಧಿಸುವಲ್ಲಿ, ಈ ಐದು ಆಟಗಾರರ ಕಾಣಿಕೆ ಅಪಾರ. ಈ ಐದು ಆಟಗಾರರ ಭರ್ಜರಿ ಆಟದ ಪರಿಣಾಮವೇ ಆರ್‌ಸಿಬಿ ಸತತ ಎರಡನೇ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆದಿದೆ. ಆ ಐದು ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ.

IPL 19 Qualifier

ರಜತ್ ಪಾಟೀದಾರ್‌

ಆರ್‌ಸಿಬಿ ಪರ ಬಿಗ್ ಮ್ಯಾಚ್‌ನಲ್ಲಿ ರಜತ್ ಪಾಟೀದಾರ್ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದರು. ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟ್ ಮಾಡಿದ ರಜತ್‌, ನೆಲಕಚ್ಚಿ ನಿಂತ ಮೇಲೆ ಚೆಂಡನ್ನು ಪ್ರೇಕ್ಷಕರ ಗ್ಯಾಲರಿ ದರ್ಶನ ಮಾಡಿಸುತ್ತಲೇ ಸಾಗಿದರು. ಈ ಆವೃತ್ತಿಯಲ್ಲಿ ಮಧ್ಯದ ಓವರ್‌ಗಳಲ್ಲಿ ಆರ್‌ಸಿಬಿ ಸ್ಥಿರ ಪ್ರದರ್ಶನ ನೀಡಿರುವಲ್ಲಿ ರಜತ್ ಪಾಟೀದಾರ್ ಪಾತ್ರ ದೊಡ್ದದು. ಗುಜರಾತ್‌ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲೂ ನಾಯಕನ ಆಟವಾಡಿದ ರಜತ್‌, 33 ಎಸೆತಗಳಲ್ಲಿ 5 ಬೌಂಡರಿ, 9 ಸಿಕ್ಸರ್ ಸಹಾಯದಿಂದ ಅಜೇಯ 93 ರನ್ ಬಾರಿಸಿದರು. ಇವರ ಅಮೋಘ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ನೀಡಲಾಯಿತು.

ಕೃನಾಲ್‌ ಪಾಂಡ್ಯ

ಆರ್‌ಸಿಬಿ ತಂಡದ ಸ್ಟಾರ್ ಆಲ್‌ರೌಂಡರ್‌ ಕೃನಾಲ್‌ ಪಾಂಡ್ಯ, ಒತ್ತಡದ ಸನ್ನಿವೇಶದಲ್ಲಿ ಆಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಆಟಗಾರ. ಒತ್ತಡ ತಮ್ಮ ಮೇಲೆ ಬಾರದಂತೆ ನೋಡಿಕೊಂಡು ಬ್ಯಾಟ್ ಮಾಡುವ ಕೃನಾಲ್‌ ಮೊದಲ ಕ್ವಾಲಿಫೈಯರ್‌ನಲ್ಲೂ ರಜತ್ ಪಾಟೀದಾರ್‌ ಜೊತೆಗೂಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಅಲ್ಲದೆ 5 ಬೌಂಡರಿ, 2 ಸಿಕ್ಸರ್ ನೆರವಿನಿಂದ 43 ರನ್‌ ಬಾರಿಸಿ ಔಟ್ ಆದರು. ಇವರು ತಮ್ಮ ಸ್ಪಿನ್ ಬೌಲಿಂಗ್‌ನಲ್ಲೂ ಕಮಾಲ್‌ ನಡೆಸಿ 2 ವಿಕೆಟ್‌ ಉರುಳಿಸಿದರು.

IPL 2026: ರಜತ್ ಪಾಟೀದಾರ್‌ ಮಾಸ್ಟರ್‌ ಸ್ಟ್ರೋಕ್‌ಗೆ ವಿರಾಟ್‌ ಕೊಹ್ಲಿ ಸ್ಟನ್‌: ವೈರಲ್ ವಿಡಿಯೋ

IPL 2026: ರಜತ್ ಪಾಟೀದಾರ್‌ ಮಾಸ್ಟರ್‌ ಸ್ಟ್ರೋಕ್‌ಗೆ ವಿರಾಟ್‌ ಕೊಹ್ಲಿ ಸ್ಟನ್‌: ವೈರಲ್ ವಿಡಿಯೋ

ವಿರಾಟ್ ಕೊಹ್ಲಿ

ಆರ್‌ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲುಬು ವಿರಾಟ್ ಕೊಹ್ಲಿ ಸಹ ಉತ್ತಮ ಆರಂಭವನ್ನು ನೀಡಿದರು. ಇವರು ದೊಡ್ಡ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟದೇ ಇದ್ದರೂ ಸಹ ತಂಡಕ್ಕೆ ಬೇಕಿದ್ದ ಅಡಿಪಾಯವನ್ನು ಹಾಕಿಕೊಟ್ಟರು. ಇವರು 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 43 ರನ್ ಬಾರಿಸಿ ಮಿಂಚಿದರು.

ಭುವನೇಶ್ವರ್ ಕುಮಾರ್‌

ಆರ್‌ಸಿಬಿಯ ಬೌಲಿಂಗ್ ಬ್ರಹ್ಮಾಸ್ತ್ರ ಭುವನೇಶ್ವರ್ ಕುಮಾರ್‌. ತಮ್ಮ ಕರಾರುವಾಕ್‌ ಸ್ವಿಂಗ್ ದಾಳಿಯಿಂದಲೇ ಹೆಸರುವಾಸಿಯಾಗಿರುವ ಭುವಿ ಪವರ್‌ ಪ್ಲೇನಲ್ಲಿ ಕಮಾಲ್‌ ಬೌಲಿಂಗ್ ನಡೆಸಿ, ಎದುರಾಳಿಯ ಮೇಲೆ ಒತ್ತಡ ಹೇರಿದರು. ಅವರು ಎಸೆದ ಮೊದಲ ಓವರ್‌ನಲ್ಲಿ ಕೇವಲ ಎರಡು ರನ್ ನೀಡಿ ಗುಜರಾತ್‌ ಟೈಟಾನ್ಸ್ ತಂಡದ ಮೇಲೆ ಒತ್ತಡವನ್ನು ಹೇರಿದರು. ಆರ್‌ಸಿಬಿ ಸತತ ಎರಡನೇ ಬಾರಿಗೆ ಫೈನಲ್‌ ಪ್ರವೇಶಿಸಿದಲ್ಲಿ ಭುವಿ ಪಾತ್ರ ದೊಡ್ಡದು.

ಫೈನಲ್ಸ್ ಸಿಂಹಾಸನದತ್ತ RCB ಲಗ್ಗೆ; ಈ ಬಾರಿಯೂ ಕಪ್‌ ನಮ್ದೇ ಎನ್ನಲೊಂದೇ ಹೆಜ್ಜೆ

ಫೈನಲ್ಸ್ ಸಿಂಹಾಸನದತ್ತ RCB ಲಗ್ಗೆ; ಈ ಬಾರಿಯೂ ಕಪ್‌ ನಮ್ದೇ ಎನ್ನಲೊಂದೇ ಹೆಜ್ಜೆ

ಜಾಕೋಬ್‌ ಡಫಿ

ವೇಗಿ ಜಾಕೋಬ್ ಡಫಿ ಸಹ ತಮಗೆ ಮ್ಯಾನೇಜ್ಮೆಂಟ್‌ ನೀಡಿದ್ದ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದರು. ಇವರು ಅಚ್ಚುಕಟ್ಟಾಗಿ ಬೌಲಿಂಗ್ ನಡೆಸಿ 39 ರನ್ ನೀಡಿ ಪ್ರಮುಖ ಮೂರು ವಿಕೆಟ್‌ ಪಡೆದು ಅಬ್ಬರಿಸಿದರು.

Story first published: Wednesday, May 27, 2026, 7:10 [IST]
Other articles published on May 27, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+