ಮನ್ದೀಪ್ ಕೈಗೆ 'ಪಂದ್ಯಶ್ರೇಷ್ಠ ಪ್ರಶಸ್ತಿ' ಇತ್ತ ಎಬಿ ಡಿ 'ಗ್ರೇಟ್'
ಪುಣೆ, ಮೇ.21: ಐಪಿಎಲ್ 2015 ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಟೂರ್ನಿಯಿಂದ 'ಎಲಿಮಿನೇಟ್' ಮಾಡಲು ಆರ್ ಸಿಬಿಗೆ ನೆರವಾಗಿದ್ದು, ಎಬಿ ಡಿವಿಲೆಯರ್ಸ್ ಹಾಗೂ ಮನದೀಪ್ ಸಿಂಗ್. ಬುಧವಾರ ರಾಜಸ್ಥಾನ ವಿರುದ್ಧ ಬೆಂಗಳೂರು 71ರನ್ ಗಳ ಜಯ ದಾಖಲಿಸಲು ಇವರಿಬ್ಬರು ಕಾರಣರು ಎಂದರೆ ತಪ್ಪಾಗಲಾರದು.
ಪಂದ್ಯದ ನಂತರ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಎಬಿಡಿ 'ಈ ಪ್ರಶಸ್ತಿ ಮನ್ದೀಪ್ ಗೆ ಸಲ್ಲಬೇಕು' ಎಂದಿದ್ದರು. ನುಡಿದಂತೆ ಮನ್ದೀಪ್ ಕೈಗೆ ಪ್ರಶಸ್ತಿ ನೀಡಿದ್ದಾರೆ. ಇಬ್ಬರ ಸಂಭ್ರಮವನ್ನು ಕಂಡ ಅಭಿಮಾನಿಗಳು ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ. ತಂಡದ ಮಾಲೀಕ ವಿಜಯ್ ಮಲ್ಯ ಅವರು ಕೂಡಾ ಎಬಿಡಿ ಅವರ ಈ ನಡೆಗೆ ಬಹುಪರಾಕ್ ಹೇಳಿದ್ದಾರೆ.
ಐಪಿಎಲ್ ವಿಶೇಷ ಪುಟ | |
ರಾಜಸ್ಥಾನ ವಿರುದ್ದ ಮಧ್ಯಮ ಕ್ರಮಾಂಕದಲ್ಲಿ ಆಡಲು ಬಂದ ಮನ್ದೀಪ್ ಸಿಂಗ್ ಆಟಕ್ಕೆ ಸೂಪರ್ ಬ್ಯಾಟ್ಸ್ ಮನ್ ಎಬಿ ಡಿ ವಿಲೆಯರ್ಸ್ ಕೂಡಾ ತಲೆದೂಗಿದರು. 34 ಎಸೆತಗಳಲ್ಲಿ 54ರನ್ ಗಳಿಸಿದ ಮನ್ದೀಪ್ ಅವರು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಅರ್ಧಶತಕ ಗಳಿಸಿ ಅಜೇಯರಾಗಿ ಉಳಿದು ತಂಡದ ಗೆಲುವಿಗೆ ಕಾರಣರಾದರು. ಮನ್ದೀಪ್ ಆಟದ ಬಗ್ಗೆ ಎಬಿಡಿ ಹೊಗಳಿಕೆ ಮಾತು ಮುಂದಿದೆ...

ಮನ್ದೀಪ್ ಹಾಗೂ ಎಬಿಡಿ ಜೊತೆಯಾಟ
ಮನ್ದೀಪ್ ಕಣಕ್ಕಿಳಿದಾಗ ಆರ್ ಸಿಬಿ 55/3 ಸ್ಕೋರ್ ಮಾಡಿತ್ತು. ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಎಬಿ ಡಿ ವಿಲೆಯರ್ಸ್ ಜೊತೆಯಲ್ಲಿ 113ರನ್ ಜೊತೆಯಾಟವಾಡಿದ ಮನ್ದೀಪ್ ಆಟ ಮೆಚ್ಚಿದ ಎಬಿಡಿ, ಪಂದ್ಯ ನಂತರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ನಾವು ಆಡುವಾಗ 140 ರನ್ ದಾಟುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಅದರೆ, 180 ರನ್ ಹೇಗೆ ಗಳಿಸಿದೆವು ಗೊತ್ತಿಲ್ಲ ಎಂದರು.
ನುಡಿದಂತೆ ನಡೆದ ಎಬಿ ಡಿ ವಿಲೆಯರ್ಸ್
ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ನಂತರ ನುಡಿದಂತೆ ಎಬಿಡಿ ಅವರು ಪ್ರಶಸ್ತಿಯನ್ನು ಮನ್ದೀಪ್ ಕೈಗೆತ್ತಿದ್ದಾರೆ.

ಮನದೀಪ್ ಆಟದಿಂದ ಸಾಧ್ಯವಾಯಿತು
ನಾನಂತೂ ಕೆಲ ಪಂದ್ಯಗಳಿಂದ ಉತ್ತಮ ಆಟ ಪ್ರದರ್ಶಿಸಿಲ್ಲ. ಇದೆಲ್ಲ ಮನದೀಪ್ ಆಟದಿಂದ ಸಾಧ್ಯವಾಯಿತು. ಆತನಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಬೇಕು ಎಂದಿದ್ದರು.
2012ರಲ್ಲೂ ಎಬಿಡಿ ಅಪ್ಪಣ್ಣನಿಗೆ ಪ್ರಶಸ್ತಿ ಕೊಟ್ಟಿದ್ರು
ಈ ಹಿಂದೆ 2012ರಲ್ಲೂ ಎಬಿಡಿ ತಮಗೆ ಸಿಕ್ಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸ್ಪಿನ್ನರ್ ಕೆಪಿ ಅಪ್ಪಣ್ಣ ಅವರಿಗೆ ನೀಡಿ ಗೌರವಿಸಿದ್ದರು. ಈಗ ಮನ್ದೀಪ್ ಗೆ ನೀಡಿದ್ದಾರೆ.
ವಿಜಯ್ ಮಲ್ಯರಿಂದ ಮನ್ದೀಪ್ ಹೊಗಳಿಕೆ
ವಿಜಯ್ ಮಲ್ಯರಿಂದ ಮನ್ದೀಪ್ ಹಾಗೂ ಎಬಿಡಿ ಉತ್ತಮ ನಡೆಗೆ ಹೊಗಳಿಕೆ.
ಎಬಿಡಿ ನಿಜಕ್ಕೂ ಗ್ರೇಟ್
ಎಬಿ ಡಿ ವಿಲೆಯರ್ಸ್ ನಿಜಕ್ಕೂ ಗ್ರೇಟ್. ಇಂಥ ಬುದ್ಧಿ ಎಷ್ಟು ಜನಕ್ಕಿರುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications