ಯುವಿ 'ಭಾಭಿ'ಯನ್ನು ಬಾಚಿ ತಬ್ಬಿಕೊಂಡ ವಿರಾಟ್ ಕೊಹ್ಲಿ!
ಬೆಂಗಳೂರು, ಮೇ, 18: ಭಾನುವಾರದ ಪಂದ್ಯದಲ್ಲಿ ಗೇಲ್ ಬ್ಯಾಟ್ ನಿಂದ ಸಿಕ್ಸರ್ ಮಳೆ ಸುರಿಯಲಿಲ್ಲ. ಕೊಹ್ಲಿ ಕವರ್ ಡ್ರೈವ್ ನೋಡಲು ಸಾಧ್ಯವಾಗಲಿಲ್ಲ, ಎಬಿಡಿ 360 ಡಿಗ್ರಿ ಆಟವೂ ಇಲ್ಲ. ಆದರೆ ಅಭಿಮಾನಿಗಳಿಗೆ ಡಬಲ್ ಧಮಾಕಾ ಕಾದಿತ್ತು.
ಬೆಂಗಳೂರಿನಲ್ಲಿ ಭಾನುವಾರ ನಡೆಯುತ್ತಿದ್ದ ಬೆಂಗಳೂರು-ದೆಹಲಿ ನಡುವಿನ ಪಂದ್ಯ ಮಳೆಯಿಂದ ರದ್ದಾದರೂ ವಿರಾಟ್ ಮತ್ತು ಅನುಷ್ಕಾ ಜೋಡಿ ಕಂಡು ಜನರು ಪುಳಕಿತರಾಗಿದ್ದರು. ದಿನೇಶ್ ಕಾರ್ತಿಕ್ ಮತ್ತು ಯುವರಾಜ್ ಸಿಂಗ್ 'ಮಾದರಿ ಪ್ರೇಮಿ' ಗಳ ಜತೆ ಕಾಣಿಸಿಕೊಂಡರು.[ಬೆರಳಲ್ಲಿ ಬೆರಳಿಟ್ಟು ಹೆಜ್ಜೆ ಹಾಕಿದ ಮೀರಾ-ಮಾಧವ]
ದೆಹಲಿ ಬ್ಯಾಟಿಂಗ್ ನಂತರ ಪಂದ್ಯಕ್ಕೆ ಮಳೆರಾಯ ಅಡ್ಡಿ ಮಾಡಿದ. ಈ ವೇಳೆ ಎಲ್ಲ ಆಟಗಾರರು ಡ್ರೆಸ್ಸಿಂಗ್ ರೂಂ ನಲ್ಲಿದ್ದರೆ ವಿರಾಟ್ ಸೀದಾ ನಡೆದಿದ್ದು ತನ್ನ ಪ್ರೇಯಸಿ ಬಳಿಗೆ. ಚಿನ್ನಸ್ವಾಮಿಯಲ್ಲಿ ಒಂದಾದ ವಿರಾಟ್- ಅನುಷ್ಕಾ ಸುಮಾರು 15 ನಿಮಿಷಕ್ಕೂ ಅಧಿಕ ಕಾಲ ಮಾತುಕತೆ ನಡೆಸಿದರು. ಇತ್ತೀಚೆಗೆ ಯುವರಾಜ್ ಸಿಂಗ್ ಅನುಷ್ಕಾ ಅವರನ್ನು ಭಾಭಿ ಎಂದು ಕರೆದಿದ್ದರು.

ನಿರ್ಬಂಧ ಇದೆ
ಪಂದ್ಯ ನಡೆಯುತ್ತಿದ್ದ ವೇಳೆ ಹೆಂಡತಿ ಅಥವಾ ಗೆಳತಿಯನ್ನು ಭೇಟಿ ಮಾಡದಂತೆ ನಿರ್ಬಂಧವಿದೆ. ಆದರೆ ದೆಹಲಿ ವಿರುದ್ಧದ ಪಂದ್ಯಕ್ಕೆ ಮಳೆ ಅಡ್ಡಿ ಮಾಡಿದ್ದರಿಂದ ಪಂದ್ಯವನ್ನು ರದ್ದು ಮಾಡಲಾಗಿತ್ತು. ಗ್ಯಾಲರಿಯಲ್ಲಿ ಕುಳಿತು ಬೆಂಗಳೂರಿಗೆ ತನ್ನ ಗೆಳಯನಿಗೆ ಸ್ಫೂರ್ತಿ ನೀಡುತ್ತಿದ್ದ ಅನುಷ್ಕಾ ಬಳಿ ವಿರಾಟ್ ತೆರಳಿದ್ದು ಯಾವ ಸಮಸ್ಯೆಗೂ ಕಾರಣವಾಗಿಲ್ಲ.

ಆರ್ ಸಿಬಿ ಗ್ರೀನ್ ಡ್ರೆಸ್
ಐಪಿಎಲ್ ಪಂದ್ಯಾವಳಿಯ ತನ್ನ ಕೊನೆಯ ಲೀಗ್ ಪಂದ್ಯವನ್ನಾಡಲು ಆರ್ ಸಿಬಿ ಹಸಿರು ಹೊತ್ತ ಬಟ್ಟೆಯಿಂದ ಕಣಕ್ಕೆ ಇಳಿದಿತ್ತು. ಬೆಡಗಿ ಅನುಷ್ಕಾ ಬಿಳಿ ಬಟ್ಟೆಯಲ್ಲಿ ಕಂಗೊಳಿಸುತ್ತಿದ್ದರು.

ಪ್ಲೇ ಅಪ್ ಗೆ ಕೊಹ್ಲಿ ಪಡೆ
ದೆಹಲಿ ವಿರುದ್ಧದ ಪಂದ್ಯದ ಫಲಿತಾಂಶ ಏನೇ ಆದರೂ ಕೊಹ್ಲಿ ಪಡೆ ಪ್ಲೇ ಅಪ್ ಹಾದಿ ಸುಗಮವಾಗಿತ್ತು. ಆದರೆ ಪಂದ್ಯ ಗೆದ್ದಿದ್ದರೆ ಟಾಪ್ 2 ಸ್ಥಾನದಲ್ಲಿ ಅವಲಕಾಶ ಪಡೆಯಬಹುದಿತ್ತು. ಹಿಂದಿನ ಹೈದ್ರಾಬಾದ್ ಪಂದ್ಯದಲ್ಲಿ ಗೆದ್ದು ಬೀಗಿದ್ದ ಆರ್ ಸಿಬಿ ಗೆ ದೆಹಲಿ ವಿರುದ್ಧ ಬ್ಯಾಟ್ ಬೀಸಲು ಮಳೆರಾಯ ಅವಕಾಶ ನೀಡಲಿಲ್ಲ.

ಒಂದಾಗಿ ಬಂದಿದ್ದರು
ಭಾರತ ವಿಶ್ವಕಪ್ ಸೋತು ದೇಶಕ್ಕೆ ಹಿಂದಿರುಗಿದ್ದಾಗಲೂ ವಿರಾಟ್ ಅನುಷ್ಕಾ ವಿಮಾನ ನಿಲ್ದಾಣಕ್ಕೆ ಜತೆಜತೆಯಾಗಿಯೇ ಆಗಮಿಸಿದ್ದರು. ಆಸ್ಟ್ರೇಲಿಯಾ ವಿರುದ್ಧ ಸೆಲಿಫೈನಲ್ ಪಂದ್ಯ ಸೋತಾಗ ಕೆಲವರು ಅನುಷ್ಕಾ ಶರ್ಮಾ ಮೇಲೆ ಆರೋಪ ಮಾಡಿದ್ದರು. ವಿಶ್ವಕಪ್ ಸೋಲಿಗೆ ಆಕೆಯೇ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಗಳು ವ್ಯಕ್ತವಾಗಿದ್ದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications