ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಲ್ಯ ತಂಡದ ವಿರುದ್ಧ ಆರ್ಭಟಿಸಲು ಯುವರಾಜ್ ಸಜ್ಜು?

By Mahesh

ನವದೆಹಲಿ, ಏ.26: ಐಪಿಎಲ್ ನಲ್ಲಿ ಸತತ ಎರಡು ಸೀಸನ್ ನಲ್ಲಿ ಅತಿ ಹೆಚ್ಚು ಮೌಲ್ಯಕ್ಕೆ ಹರಾಜಾದ ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರು ಕಳೆದ ಸೀಸನ್ ನಲ್ಲಿ ಆರ್ ಸಿಬಿ ಪರ ಆಡಿದ್ದರು. ಈಗ ಡೆಲ್ಲಿ ಪರ ಬ್ಯಾಟ್ ಬೀಸುತ್ತಿದ್ದಾರೆ. ಮಲ್ಯ ಅವರಿಂದ ರಿಜೆಕ್ಟ್ ಆದ ಯುವರಾಜ್ ಅವರು ಮೈದಾನದಲ್ಲಿ ಇದಕ್ಕೆ ತಕ್ಕ ಉತ್ತರ ನೀಡುತ್ತಾರಾ? ಕಾದು ನೋಡಬೇಕಿದೆ. ಕೋಟ್ಲಾ ಮೈದಾನದಲ್ಲಿ ರನ್ ಹೊಳೆ ಹರಿಯುವ ನಿರೀಕ್ಷೆಯಿದೆ.

ಕಳೆದ ವರ್ಷ ಐಪಿಎಲ್ ಹರಾಜಿನಲ್ಲಿ ಯುವರಾಜ್ ಸಿಂಗ್ ರನ್ನು ವಿಜಯ್ ಮಲ್ಯ ಅವರು 14 ಕೋಟಿ ರು ನೀಡಿ ತಂಡಕ್ಕೆ ಸೇರಿಸಿಕೊಂಡಿದ್ದರು. ಅದರೆ, ಈ ವರ್ಷ ಯುವರಾಜ್ ರನ್ನು ತಂಡದಲ್ಲಿ ಉಳಿಸಿಕೊಳ್ಳುವ ಮನಸು ಮಾಡಿರಲಿಲ್ಲ. ಐಪಿಎಲ್ 8ರ ಹರಾಜಿನಲ್ಲೂ ಯುವರಾಜ್ ಸಿಂಗ್ ಭರ್ಜರಿ ಬೆಲೆಗೆ ಮಾರಾಟವಾದರು. ಡೆಲ್ಲಿ ಡೇರ್ ಡೆವಿಲ್ಸ್ ತಂಡ 16 ಕೋಟಿ ರು ಕೊಟ್ಟು ಪಡೆದುಕೊಂಡಿತ್ತು.

ಪಂದ್ಯ ವಿಷಯಕ್ಕೆ ಬಂದರೆ ಡೆಲ್ಲಿ ಹಾಗೂ ಬೆಂಗಳೂರು ಎರಡು ತಂಡಗಳು ಕಳೆದ ಪಂದ್ಯ ಗೆದ್ದ ಹುಮ್ಮಸ್ಸಿನಿಂದ ಕಣಕ್ಕಿಳಿಯುತ್ತಿವೆ. ಮುಂಬೈ ವಿರುದ್ಧ ಡೆಲ್ಲಿ ಗೆಲುವು ಸಾಧಿಸಿದರೆ, ರಾಜಸ್ಥಾನ ರಾಯಲ್ಸ್ ಗೆ ಐಪಿಎಲ್ ನಲ್ಲಿ ಆರ್ ಸಿಬಿ ಮೊದಲ ಸೋಲುಣಿಸಿತು.
(ಐಪಿಎಲ್ ಗ್ಯಾಲರಿ)

Yuvraj Singh


ಐಪಿಎಲ್ 2015 ಆರ್ ಸಿಬಿ vs ಡಿಡಿ ಮ್ಯಾಚ್ ಗೈಡ್:
ಯಾವಾಗ, ಎಲ್ಲಿ ಪಂದ್ಯ?:
* ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಡೇರ್ ಡೆವಿಲ್ಸ್
* ಫಿರೋಜ್ ಶಾ ಕೋಟ್ಲಾ, ನವದೆಹಲಿ
* ಏ.26,ಭಾನುವಾರ, 8PM IST
* 4 PM : ಕೆಕೆಆರ್ vs ಆರ್ ಆರ್

ಎಲ್ಲೆಲ್ಲಿ ನೋಡಬಹುದು?
* ಸೋನಿ ಮ್ಯಾಕ್ಸ್(ಹಿಂದಿ ಕಾಮೆಂಟ್ರಿ)
* ಸೋನಿ ಸಿಕ್ಸ್ (ಇಂಗ್ಲೀಷ್)
* ಸೋನಿ ಆಥ್ (ಬೆಂಗಾಲಿ)
* ಸೋನಿ ಕಿಕ್ಸ್ (ತಮಿಳು, ತೆಲುಗು)
* [ಯಾವ ದೇಶದಲ್ಲಿ ಯಾವ ಚಾನೆಲ್ ನಲ್ಲಿ ಪ್ರಸಾರ ಪಟ್ಟಿ]
* ಮೊಬೈಲಿನಲ್ಲಿ ಹಾಟ್ ಸ್ಟಾರ್ ಅಪ್ಲಿಕೇಷನ್ ಮೂಲಕ ನೋಡಬಹುದು.

ಪ್ರಮುಖ ಆಟಗಾರರು:
* ಆರ್ ಸಿಬಿ : ಕ್ರಿಸ್ ಗೇಲ್, ಎಬಿ ಡಿವಿಲೆಯರ್ಸ್, ವಿರಾಟ್ ಕೊಹ್ಲಿ, ಮಿಚೆಲ್ ಸ್ಟಾರ್ಕ್
* ಡೆಲ್ಲಿ ಡೇರ್ ಡೆವಿಲ್ಸ್: ಜೆಪಿ ಡುಮಿನಿ, ಶ್ರೇಯಸ್ ಐಯರ್, ಯುವರಾಜ್ ಸಿಂಗ್, ಇಮ್ರಾನ್ ತಾಹೀರ್

ಮುಖಾಮುಖಿ
ಡೆಲ್ಲಿ -5; ಆರ್ ಸಿಬಿ-8

ಐಪಿಎಲ್ 2015ರ ಅಂಕಪಟ್ಟಿಯಲ್ಲಿ ಸದ್ಯದ ಸ್ಥಾನ
* ಡಿಡಿ -4 (3 ಗೆಲುವು, 3 ಸೋಲು)
* ಆರ್ ಸಿಬಿ- 6 (2 ಗೆಲುವು, 3 ಸೋಲು)

Virat Kohli

ತಂಡಗಳು:
ಆರ್ ಸಿಬಿ: ವಿರಾಟ್ ಕೊಹ್ಲಿ(ನಾಯಕ), ಎಬಿ ಡಿವಿಲೆಯರ್ಸ್, ಕ್ರಿಸ್ ಗೇಲ್, ಮಿಚೆಲ್ ಸ್ಟಾರ್ಕ್, ನಿಕ್ ಮ್ಯಾಡಿಸನ್, ವರುಣ್ ಅರೋನ್, ಅಶೋಕ್ ದಿಂಡಾ, ಹರ್ಷಲ್ ಪಟೇಲ್, ವಿಜಯ್ ಜೋಲ್, ಅಬು ನೆಚಿಂ, ಸಂದೀಪ್ ವಾರಿಯರ್, ಯೋಗೇಶ್ ಟಕಾವಾಲೆ, ಯುಜುವೇಂದ್ರ ಚಾಹಲ್, ರಿಲೇ ರೋಸೊ, ಇಕ್ಬಾಲ್ ಅಬ್ದುಲ್ಲಾ, ಮನ್ವಿಂದರ್ ಬಿಸ್ಲಾ, ಮಂದೀಪ್ ಸಿಂಗ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಎಸ್ ಬದರೀನಾಥ್, ಡರೇನ್ ಸಾಮಿ, ಸೀನ್ ಅಬಾಟ್, ಆಡಂ ಮಿಲ್ನೆ, ಡೇವಿಡ್ ವೀಸೆ, ಸರ್ಫಾಜ್ ಖಾನ್, ಜಲರಾಜ್ ಸಕ್ಸೇನಾ, ಶಿಶಿರ್ ಭವಾನೆ.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X