ಮುಂಬೈ-ಬೆಂಗಳೂರು: ಗೆದ್ದರೆ ಒಳಕ್ಕೆ, ಸೋತರೆ ಹೊರಕ್ಕೆ
ಮುಂಬೈ, ಮೇ 10: ಐಪಿಎಲ್ ಪಂದ್ಯಾವಳಿ ರೋಚಕ ಘಟ್ಟ ತಲುಪಿದೆ. ಮುಂಬೈ ಮತ್ತು ಬೆಂಗಳೂರು ತಂಡಗಳ ನಡುವಿನ ಭಾನುವಾರದ ಪಂದ್ಯ ಎರಡು ತಂಡಗಳಿಗೆ ಮುಖ್ಯವಾಗಿದ್ದು ಉಪಾಂತ್ಯದ ಪ್ರವೇಶವನ್ನು ನಿರ್ಧರಿಸಲಿವೆ.
ಈಗಾಗಲೇ ಕೋಲ್ಕತ್ತಾ ತಂಡ ಉಪಾಂತ್ಯ ಪ್ರವೇಶ ಖಚಿತಪಡಿಸಿಕೊಂಡಿದೆ. ಚೆನ್ನೈ ವಿರುದ್ಧ ಮುಂಬೈ ಗೆದ್ದಿದ್ದು, ದೆಹಲಿ ವಿರುದ್ಧ ಹೈದ್ರಾಬಾದ್ ಗೆದ್ದಿದ್ದು ಬೆಂಗಳೂರು ತಂಡದ ಪ್ರವೇಶಕ್ಕೆ ಅಡ್ಡಿಯಾಗಿದೆ. ಅಂಕ ಪಟ್ಟಿಯಲ್ಲಿ ಬೆಂಗಳೂರು ಆರನೇ ಸ್ಥಾನದಲ್ಲಿದ್ದರೇ ಮುಂಬೈ ಐದನೇ ಸ್ಥಾನದಲ್ಲಿದೆ. ಇಬ್ಬರಿಗೂ ಕೇವಲ ಒಂದು ಅಂಕದ ವ್ಯತ್ಯಾಸವಿದ್ದು ಗೆದ್ದ ತಂಡ ಅಗ್ರ ನಾಲ್ಕರೊಳಗೆ ಸ್ಥಾನ ಪಡೆಯುವುದು.[ಚೆನ್ನೈ ಗೆ ಮಣ್ಣು ಮುಕ್ಕಿಸಿದ ಹಾರ್ದಿಕ್ ಪಾಂಡ್ಯಾ ಯಾರು?]

ಪಂದ್ಯ ಮುಂಬೈನಲ್ಲಿ ನಡೆಯುತ್ತಿದ್ದು ಗೆಲುವಿನ ಲಯಕ್ಕೆ ಮರಳಿರುವ ರೋಹಿತ್ ಪಡೆ ಸತತ ಆರನೇ ಜಯ ದಾಖಲಿಸಲು ಮುಂದಾಗಿದೆ. ಇತ್ತ ಪಂಜಾಬ್ ವಿರುದ್ಧದ ಭರ್ಜರಿ ಜಯ ದಾಖಲಿಸಿರುವ ಬೆಂಗಳೂರಿಗೆ ಜಯ ಅನಿವಾರ್ಯ.[ಚೆನ್ನೈ ಮಣಿಸಿದ ಮುಂಬೈ ಅಂಕಪಟ್ಟಿಯಲ್ಲಿ 'ಜಿಗಿತ']
ಧೋನಿ ಪಡೆಗೂ ಸಂಕಷ್ಟ
ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಗಣ್ಯನಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿಗೂ ಈಗ ತಲೆಬಿಸಿ ಆರಂಭವಾಗಿದೆ. ರಾಜಸ್ಥಾನದ ಜತೆ ಭಾನುವಾರ ನಡೆಯುವ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯ ಧೋನಿ ಹುಡುಗರಿಗೆ. ಇಲ್ಲವಾದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ಚೆನ್ನೈ ನ ರನ್ ರೇಟ್ ಇತರರಿಗೆ ಹೋಲಿಸಿದರೆ ತುಂಬಾ ಕಡಿಮೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications