For Quick Alerts
ALLOW NOTIFICATIONS  
For Daily Alerts
 

ಡೆಲ್ಲಿ ವಿರುದ್ಧ ಕೊಹ್ಲಿ ಪಡೆ ಮೈಮರೆಯುವಂತಿಲ್ಲ!

By Mahesh

ಬೆಂಗಳೂರು, ಮೇ.17: ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಬಗ್ಗು ಬಡಿದು ಆತ್ಮ ವಿಶ್ವಾಸದಿಂದ ಬೀಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭಾನುವಾರ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಎದುರಿಸುತ್ತಿದೆ. ವಾರ್ನರ್ ಪಡೆಯನ್ನು ಮಣಿಸಿದ ಕೊಹ್ಲಿ ಪಡೆ ಮೈಮರೆಯುವಂತಿಲ್ಲ, ಲೀಗ್ ಹಂತದ ಕೊನೆಗೆ ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನಕ್ಕೇರುವ ಗುರಿಯನ್ನು ಇಟ್ಟುಕೊಂಡು ಕಣಕ್ಕಿಳಿಯಬೇಕಿದೆ.

ಸನ್ ರೈಸರ್ಸ್ ವಿರುದ್ಧದ 'ಮಾಡು ಇಲ್ಲವೇ ಮನೆಗೆ ನಡಿ ಪಂದ್ಯದಲ್ಲಿ ಅದ್ಭುತ ಜಯ ದಾಖಲಿಸಿದ ಆರ್ ಸಿಬಿ ಸದ್ಯಕ್ಕೆ ಅಂಕಪಟ್ಟಿಯಲ್ಲಿ 15 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಡೆಲ್ಲಿ ವಿರುದ್ಧ ಗೆಲುವು ಸಾಧಿಸಿದರೆ 17 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಬಹುದು. ಮೇ.19ರಂದು ಟಾಪ್ 1 ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕ್ವಾಲಿಫೈಯರ್1ರಲ್ಲಿ ಎದುರಿಸಬಹುದು. [ಪಂದ್ಯ ನುಂಗಿದ ಮಳೆ, ಆರ್ ಸಿಬಿ ಪ್ಲೇ ಆಫ್ ಗೆ ಎಂಟ್ರಿ]

ಒಂದು ವೇಳೆ ಡೆಲ್ಲಿ ವಿರುದ್ಧ ಸೋತರೂ ಚಿಂತಿಸಬೇಕಿಲ್ಲ. ಆರ್ ಸಿಬಿ ತಂಡದ ರನ್ ರೇಟ್ ಸಕತ್ತಾಗಿದೆ. ಡಿಡಿ ವಿರುದ್ಧ 145ರನ್ ಗಳ ಅಂತರದಲ್ಲಿ ಸೋತರೆ ಅಥವಾ ಮುರ್ನಾಲ್ಕು ಓವರ್ ಗಳಲ್ಲಿ ಆರ್ ಸಿಬಿ ಆಲೌಟ್ ಆದರೆ ಮಾತ್ರ ರನ್ ರೇಟ್ ಕುಸಿದು ಪ್ಲೇ ಆಫ್ ಅರ್ಹತೆ ಕಳೆದುಕೊಳ್ಳಬೇಕಾಗುತ್ತದೆ. ಆರ್ ಸಿಬಿ ಇರುವ ಲಯ ಗಮನಿಸಿದರೆ ಡಿಡಿಗೆ ಡಿಚ್ಚಿ ಕೊಡುವ ಸಾಧ್ಯತೆ ಹೆಚ್ಚಿದೆ. (ಐಪಿಎಲ್ ಗ್ಯಾಲರಿ)

Royal Challengers Bangalore Vs Delhi Daredevils

ಐಪಿಎಲ್ 2015 : ಆರ್ ಸಿಬಿ vs ಡೆಲ್ಲಿ ಡೇರ್ ಡೆವಿಲ್ಸ್ ಮ್ಯಾಚ್ ಗೈಡ್:
ಯಾವಾಗ, ಎಲ್ಲಿ ಪಂದ್ಯ?:
* ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಡೇರ್ ಡೆವಿಲ್ಸ್
* ಎಂ. ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
* ಮೇ.17, ಭಾನುವಾರ, 4 PM
* 8PM : ಸನ್ ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್

ಎಲ್ಲೆಲ್ಲಿ ನೋಡಬಹುದು?
* ಸೋನಿ ಮ್ಯಾಕ್ಸ್(ಹಿಂದಿ ಕಾಮೆಂಟ್ರಿ)
* ಸೋನಿ ಸಿಕ್ಸ್ (ಇಂಗ್ಲೀಷ್)
* ಸೋನಿ ಆಥ್ (ಬೆಂಗಾಲಿ)
* ಸೋನಿ ಕಿಕ್ಸ್ (ತಮಿಳು, ತೆಲುಗು)
* [ಯಾವ ದೇಶದಲ್ಲಿ ಯಾವ ಚಾನೆಲ್ ನಲ್ಲಿ ಪ್ರಸಾರ ಪಟ್ಟಿ]

* ಮೊಬೈಲಿನಲ್ಲಿ ಹಾಟ್ ಸ್ಟಾರ್ ಅಪ್ಲಿಕೇಷನ್ ಮೂಲಕ ನೋಡಬಹುದು.

ಪ್ರಮುಖ ಆಟಗಾರರು:
* ಆರ್ ಸಿಬಿ : ಕ್ರಿಸ್ ಗೇಲ್, ಎಬಿ ಡಿವಿಲೆಯರ್ಸ್, ವಿರಾಟ್ ಕೊಹ್ಲಿ, ಮಿಚೆಲ್ ಸ್ಟಾರ್ಕ್
* ಡಿಡಿ: ಶ್ರೇಯಸ್ ಐಯರ್, ಜೆಪಿ ಡುಮಿನಿ, ಯುವರಾಜ್ ಸಿಂಗ್, ಜಹೀರ್ ಖಾನ್

ಮುಖಾಮುಖಿ
ಡಿಡಿ -5; ಬೆಂಗಳೂರು-9

ಐಪಿಎಲ್ 2015ರ ಅಂಕಪಟ್ಟಿಯಲ್ಲಿ ಸದ್ಯದ ಸ್ಥಾನ
* ಡಿಡಿ -7 (5 ಗೆಲುವು, 8 ಸೋಲು)
* ಆರ್ ಸಿಬಿ- 3 (7 ಗೆಲುವು, 5 ಸೋಲು, 1 ಫಲಿತಾಂಶವಿಲ್ಲ)

ತಂಡಗಳು:
ಆರ್ ಸಿಬಿ: ವಿರಾಟ್ ಕೊಹ್ಲಿ(ನಾಯಕ), ಎಬಿ ಡಿವಿಲೆಯರ್ಸ್, ಕ್ರಿಸ್ ಗೇಲ್, ಮಿಚೆಲ್ ಸ್ಟಾರ್ಕ್, ನಿಕ್ ಮ್ಯಾಡಿಸನ್, ವರುಣ್ ಅರೋನ್, ಅಶೋಕ್ ದಿಂಡಾ, ಹರ್ಷಲ್ ಪಟೇಲ್, ವಿಜಯ್ ಜೋಲ್, ಅಬು ನೆಚಿಂ, ಸಂದೀಪ್ ವಾರಿಯರ್, ಯೋಗೇಶ್ ಟಕಾವಾಲೆ, ಯುಜುವೇಂದ್ರ ಚಾಹಲ್, ರಿಲೇ ರೋಸೊ, ಇಕ್ಬಾಲ್ ಅಬ್ದುಲ್ಲಾ, ಮನ್ವಿಂದರ್ ಬಿಸ್ಲಾ, ಮಂದೀಪ್ ಸಿಂಗ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಎಸ್ ಬದರೀನಾಥ್, ಡರೇನ್ ಸಾಮಿ, ಸೀನ್ ಅಬಾಟ್, ಆಡಂ ಮಿಲ್ನೆ, ಡೇವಿಡ್ ವೀಸೆ, ಸರ್ಫಾಜ್ ಖಾನ್, ಜಲರಾಜ್ ಸಕ್ಸೇನಾ, ಶಿಶಿರ್ ಭವಾನೆ.

ಡೆಲ್ಲಿ ಡೇರ್ ಡೆವಿಲ್ಸ್: ಜೆಪಿ ಡುಮಿನಿ (ನಾಯಕ), ಮಹಮ್ಮದ್ ಶಮಿ, ಕ್ವಿಂಟಾನ್ ಡಿ ಕಾಕ್ (ವಿಕೆಟ್ ಕೀಪರ್), ಮನೋಜ್ ತಿವಾರಿ, ಕೇದಾರ್ ಜಾಧವ್, ಮಾಯಂಕ್ ಅಗರವಾಲ್, ಶಹಬಾಜ್ ನದೀಂ, ಸೌರಭ್ ತಿವಾರಿ, ಜಯಂತ್ ಯಾದವ್, ಇಮ್ರಾನ್ ತಾಹೀರ್, ನಾಥನ್ ಕೌಲ್ಟರ್ ನೈಲ್, ಏಂಜಲೋ ಮ್ಯಾಥ್ಯೂಸ್, ಯುವರಾಜ್ ಸಿಂಗ್, ಅಮಿತ್ ಮಿಶ್ರಾ, ಜಯದೇವ್ ಉನದ್ಕಟ್, ಜಿ ಸಂಧು, ಶ್ರೇಯಸ್ ಐಯರ್, ಸಿಎಂ ಗೌತಮ್, ಟ್ರಾವಿಸ್ ಹೆಡ್, ಶ್ರೀಕರ್ ಭರತ್, ಅಲ್ಬೊ ಮಾರ್ಕೆಲ್, ನಾರ್ಜ ಸ್ಟೋನಿಸ್, ಜಹೀರ್ ಖಾನ್, ಕೆಕೆ ಜಿಯಾಸ್, ಡೊಮಿನಿಕ್ ಜೋಸೆಪ್ಜ್. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+