ಸತತ ನಾಲ್ಕನೇ ಸೋಲು ಕಂಡ ಮುಂಬೈ ಇಂಡಿಯನ್ಸ್
ಮುಂಬೈ, ಏ. 18: ತವರು ನೆಲದಲ್ಲೇ ಮುಂಬೈ ಗೆ ಚೆನ್ನೈ ಸೂಪರ್ ಕಿಂಗ್ಸ್ ಡಿಚ್ಚಿ ನೀಡಿದೆ. ಐಪಿಎಲ್ 8 ರಲ್ಲಿ ಗೆಲುವಿನ ಖಾತೆ ತೆರೆಯಲು ಮುಂಬೈ ಗೆ ಸಾಧ್ಯವಾಗಿಲ್ಲ. ಶುಕ್ರವಾರ ನಡೆದ ಪಂದ್ಯದಲ್ಲಿ ಚನ್ನೈ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಮುಬೈ ನೀಡಿದ 183 ರನ್ ಗಳ ಸ್ಪರ್ಧಾತ್ಮಕ ಸವಾಲನ್ನೇ ನೀಡಿತ್ತು. ಇದಕ್ಕೆ ಪ್ರತಿಯಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೇವಲ 16.4 ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡು ನಿರಾಯಾಸವಾಗಿ ಗೆಲುವಿನ ದಡ ಮುಟ್ಟಿತು.
ಚೆನ್ನೈ ತಂಡದ ಆರಂಭಿಕರಾದ ಡ್ವೇನ್ ಸ್ಮಿತ್ (62ರನ್, 30ಎಸೆತ, 8ಬೌಂಡರಿ, 4ಸಿಕ್ಸರ್) ಮತ್ತು ಬ್ರೆಂಡನ್ ಮೆಕ್ಕಲಂ (46ರನ್, 20ಎಸೆತ, 6ಬೌಂಡರಿ, 2ಸಿಕ್ಸರ್) ಮೊದಲಿನಿಂದಲೂ ಅಬ್ಬರಿಸಿದರು. ಪವರ್ ಪ್ಲೇ(6 ಓವರ್) ನಲ್ಲಿಯೇ 90 ರನ್ ಗುಡ್ಡೆಹಾಕಿದರು.(ಪಿಟಿಐ ಚಿತ್ರಗಳು)

ಮೆಕಲಮ್ ಭರ್ಜರಿ ಆಟ
ಮೊದಲ ಐದು ಓವರ್‌ಗಳು ಪೂರ್ಣಗೊಂಡಾಗ ವಿಕೆಟ್ ನಷ್ಟವಿಲ್ಲದೆ ಚೆನ್ನೈ 72 ರನ್‌ಗಳನ್ನು ಗಳಿಸಿ ಗೆಲುವನ್ನು ಸುಲಭ ಮಾಡಿಕೊಂಡಿತು. ಇದಕ್ಕೆ ಕಾರಣವಾಗಿದ್ದು ಡ್ವೇನ್ ಸ್ಮಿತ್, ಬ್ರೆಂಡನ್ ಮೆಕ್ಲಮ್ ಅಬ್ಬರದ ಆಟ. ಮೆಕ್ಲಮ್ (46, 20ಎಸೆತ, 6ಬೌಂಡರಿ, 2 ಸಿಕ್ಸರ್) ಸ್ಫೋಟದ ಎದುರು ಮುಂಬೈ ಬೌಲರ್ ಗಳು ತಣ್ಣಗಾದರು.

ಸಿಡಿದ ಡ್ವೇನ್ ಸ್ಮಿತ್
ಸ್ಮಿತ್ ಕೇವಲ 30 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು 4 ಸಿಕ್ಸರ್ ಸೇರಿದಂತೆ 62 ರನ್ ಸಿಡಿಸಿದರು. ನಂತರ ಆಗಮಿಸಿದ ಸುರೇಶ್ ರೈನಾ (43, 29ಎಸೆತ, 4ಬೌಂಡರಿ, 2 ಸಿಕ್ಸರ್) ಸಹ ಸ್ಫೋಟಕ ಆಟವಾಡಿ ತಂಡವನ್ನು ಅತಿಶೀಘ್ರವಾಗಿ ಗೆಲುವಿನ ದಡ ಮುಟ್ಟಿಸಿದರು.

ಯಾವ ಬೌಲರ್ ಗಳು ಅಡ್ಡಿಯಾಗಲಿಲ್ಲ
ಮುಂಬೈ ಬೌಲರ್ ಗಳೀ ಮನಸೋ ಇಚ್ಛೆ ದಂಡನೆಗೆ ಒಳಗಾದರು. ಮೊದಲ ಹತ್ತು ಓವರ್‌ಗಳು ಪೂರ್ಣಗೊಂಡಾಗ ಸೂಪರ್ ಕಿಂಗ್ಸ್ 128 ರನ್ ಗಳಿಸಿದ್ದಾಗಲೇ ಗೆಲುವು ಖಚಿತವಾಗಿತ್ತು. ಲಸಿತ್ ಮಾಲಿಂಗ, ಹರಭಜನ್ ಸಿಂಗ್, ಕೀರನ್ ಪೊಲಾರ್ಡ್ ಸೇರಿದಂತೆ ಎಲ್ಲರನ್ನು ಚೆನ್ನೈ ಬ್ಯಾಟ್ಸ್ ಮನ್ ಗಳು ದಂಡಿಸಿದರು.

ರೋಹಿತ್, ಪೋಲಾರ್ಡ್ ಬಿರುಸಿನ ಆಟ
ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭದಲ್ಲಿ ರನ್ ಗಳಿಸಲು ಪರದಾಡಿ ನಂತರ ಅಮೋಘ ಆಟವಾಡಿತು. ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಕಳೆದುಕೊಂಡ ಮುಂಬೈ ತಂಡ ಆರಂಭದಲ್ಲಿ ಪರದಾಡಿತು. ನಂತರ ರೋಹಿತ್ ಶರ್ಮ ಮತ್ತು ಕೀರನ್ ಪೊಲಾರ್ಡ್ ಅರ್ಧಶತಕ ಗಳಿಸಿ ತಂಡ ಸವಾಲಿನ ಮೊತ್ತ ಗಳಿಸಲು ಕಾರಣರಾದರು.

13 ರನ್ ಗೆ 3 ವಿಕೆಟ್
ಮೊದಲ 13 ರನ್ ಗಳಿಸುವ ವೇಳೆಗೆ ಮುಂಬೈ 3 ವಿಕೆಟ್ ಕಳೆದುಕೊಂಡಿತ್ತು. ಹತ್ತು ಓವರ್ ಪೂರ್ಣಗೊಂಡಾಗ 62 ರನ್‌ಗಳನ್ನಷ್ಟೇ ಗಳಿಸಿತ್ತು. ಕೊನೆಯ 60 ಎಸೆತಗಳಲ್ಲಿ 131 ರನ್‌ಗಳ ಹರಿದು ಬಂದ ಪರಿನಾಮ ಸ್ಫರ್ಧಾತ್ಮಕ ಮೊತ್ತ ಕಲೆಹಾಕಲು ಸಾಧ್ಯವಾಯಿತು.

ಮುಂಬೈಗೆ ದಕ್ಕದ ಜಯ
ಸತತ 3 ನೇ ಜಯ ದಾಖಲಿಸಿದ ಚೆನ್ನೈ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದರೆ, ಸತತ ನಾಲ್ಕು ಸೋಲು ಕಂಡ ಅಂಬಾನಿ ಪಡೆ ಕೊನೆ ಸ್ಥಾನದಲ್ಲಿದೆ. ಮೊದಲ ಹಂತದಲ್ಲಿ ಮುಂಬೈಗೆ ಇನ್ನು ಮೂರು ಪಂದ್ಯಗಳಿದ್ದು ಜಯದ ರುಚು ಕಂಡರೆ ಮಾತ್ರ ಅಗ್ರ ನಾಲ್ಕರೊಳಗೆ ಸ್ಥಾನ ಕಾಪಾಡಿಕೊಳ್ಳಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications