ಟ್ವೀಟ್ಸ್ : ಕ್ರಿಸ್ ಗೇಲ್ ವಿಶ್ವ ಕ್ರಿಕೆಟ್ ನ 'ಬಿಗ್ ಬಾಸ್'
ಬೆಂಗಳೂರು, ಮೇ.7: ಕ್ರಿಸ್ ಗೇಲ್ ಅಬ್ಬರಿಸುತ್ತಿದ್ದರೆ ಎದುರಾಳಿ ತಂಡದವರು ಕೈಕಟ್ಟಿ ಆಟ ನೋಡಬೇಕಾಗುತ್ತದೆ. ವಿಶ್ವ ಕ್ರಿಕೆಟ್ ನ ಬಿಗ್ ಬಾಸ್ ಎಂದರೆ ಹಾಗೆ. ಜಮೈಕಾದ ಸರದಾರನ ಆರ್ಭಟಕ್ಕೆ ಅಭಿಮಾನಿಗಳಲ್ಲದೆ ಕ್ರಿಕೆಟರ್ಸ್ ಕೂಡಾ ತಲೆದೂಗಿದ್ದಾರೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಗೇಲ್ ಗೆ ಶುಭ ಹಾರೈಕೆಗಳು ಇನ್ನೂ ಬರುತ್ತಲೇ ಇದೆ.
ಕ್ರಿಸ್ ಗೇಲ್ ಜೊತೆ ಫೋಟೊ ತೆಗೆಸಿಕೊಳ್ಳಲು ಅಭಿಮಾನಿಗಳಲ್ಲದೆ ಆರ್ ಸಿಬಿ ಸಹ ಆಟಗಾರರೂ ಕೂಡಾ ಮುಗಿಬೀಳುತ್ತಿದ್ದಾರೆ. ಎಲ್ಲರ ಪ್ರೀತಿ ತುಂಬಿದ ಮಾತುಗಳು, ಹೊಗಳಿಕೆಯನ್ನು ಅರಗಿಸಿಕೊಂಡ ಗೇಲ್ ಎಲ್ಲರಿಗೂ ಒನ್ ಲವ್ ನಿಮ್ಮ ಪ್ರೀತಿ ಆದರಕ್ಕೆ ನಾನು ತಲೆಬಾಗುವೆ ಎಂದು ಧನ್ಯವಾದ ಅರ್ಪಿಸಿದ್ದಾರೆ. [ಗೇಲ್ ಈಗ ರೊನಾಲ್ಡೊ ಸ್ಟೈಲ್ ನೋಡಿ]
ಐಪಿಎಲ್ 2015ರಲ್ಲಿ ಮೊದಲ ಶತಕ ದಾಖಲಿಸಿದ ಗೇಲ್ ಬಿರುಗಾಳಿಯ ಹೊಡೆತಕ್ಕೆ ಪಂಜಾಬ್ ಬೌಲರ್ಸ್ ಸಿಲುಕಿದರು. 57 ಎಸೆತಗಳಲ್ಲಿ 117ರನ್ ಚೆಚ್ಚಿದ ಗೇಲ್ ತಂಡಕ್ಕೆ 138 ರನ್ ರೊನಾಲ್ಡೋ ರೀತಿಯಲ್ಲೇ ಕ್ರಿಸ್ ಗೇಲ್ ಐಪಿಎಲ್ ನಲ್ಲಿ ತಮ್ಮ ಶತಕದ ಸಂಭ್ರಮ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು. ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಬಂದ ಶುಭ ಹಾರೈಕೆಗಳ ಸಂಗ್ರಹ ಇಲ್ಲಿದೆ ನೋಡಿ....ಐಪಿಎಲ್ ವಿಶೇಷ ಪುಟ| ಅಂಕಪಟ್ಟಿ

ಪಂದ್ಯದ ಗೆಲುವಿಗೆ ಕಾರಣರಾದ ಗೇಲ್
57 ಎಸೆತಗಳಲ್ಲಿ 117ರನ್ ಚೆಚ್ಚಿದ ಗೇಲ್ ತಂಡಕ್ಕೆ 138 ರನ್ ರೊನಾಲ್ಡೋ ರೀತಿಯಲ್ಲೇ ಕ್ರಿಸ್ ಗೇಲ್ ಐಪಿಎಲ್ ನಲ್ಲಿ ತಮ್ಮ ಶತಕದ ಸಂಭ್ರಮ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು.
ಕೆವಿನ್ ಪೀಟರ್ಸನ್ ರಿಂದ ಹೊಗಳಿಕೆ
ಇಂಗ್ಲೆಂಡ್ ಆಟಗಾರ, ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುತ್ತಿದ್ದ ಕೆವಿನ್ ಪೀಟರ್ಸನ್ ರಿಂದ ಶುರುವಾದ ಹೊಗಳಿಕೆ ವರ್ಲ್ಡ್ ಬಾಸ್ ಎಂದ ಕೆಪಿ
ಡೇವಿಡ್ ಮಿಲ್ಲರ್ ರಿಂದ ಹೊಗಳಿಕೆ
ಅದ್ಭುತ ಬ್ಯಾಟಿಂಗ್ ಎಂಜಾಯ್ ಮಾಡಿದೆ ಎಂದ ಮಿಲ್ಲರ್
ಬಿಸ್ಲಾ ಜೊತೆ ಪೋಸ್
ಆರ್ ಸಿಬಿ ಸಹ ಆಟಗಾರ ಮನ್ವಿಂದರ್ ಬಿಸ್ಲಾ ಜೊತೆ ಪೋಸ್ ಕೊಟ್ಟ ಗೇಲ್.
ನನ್ನ ಬಿಗ್ ಬ್ರದರ್ ಎಂದ ಸರ್ಫರಾಜ್
ಗೇಲ್ ನನ್ನ ಬಿಗ್ ಬ್ರದರ್ ಎಂದ ಯುವ ಆಟಗಾರ ಸರ್ಫರಾಜ್ ಖಾನ್.
ಡೇಮಿಯನ್ ಮಾರ್ಟಿನ್ ರಿಂದ ಹೊಗಳಿಕೆ
ಗೇಲ್ ಆಟ ನೋಡುವುದೇ ಆನಂದ ಎಂದ ಆಸೀಸ್ ಮಾಜಿ ಆಟಗಾರ ಡೇಮಿಯನ್ ಮಾರ್ಟಿನ್.
ಅಭಿಮಾನಿಗಳಿಂದ ಗೇಲ್ ಚಿತ್ರ
ಅಭಿಮಾನಿಗಳಿಂದ ಗೇಲ್ ಸಂಭ್ರಮದ ಚಿತ್ರ ಹಂಚಿಕೆ
ಮೆಕ್ಲಮ್ ಜೊತೆ ಹೋಲಿಕೆ
ಮೆಕ್ಲಮ್ ಜೊತೆ ಹೋಲಿಕೆ, ಟಿ20ಯಲ್ಲಿ ಗೇಲ್ ಶತಕದ ಬಗ್ಗೆ ವಿವರಣೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications