ವಿರಾಟ್ ಕೊಹ್ಲಿ ಅಂಪೈರ್ ಗಳ ವಿರುದ್ಧ ಸಿಟ್ಟಿಗೆದ್ದಿದ್ದು ಯಾಕೆ?
ಹೈದ್ರಾಬಾದ್, ಮೇ 16: ಒಂದೆಡೆ ಹೈದ್ರಾಬಾದ್ ಆಟಗಾರರು ಮನಸೋ ಇಚ್ಛೆ ಬ್ಯಾಟ್ ಬೀಸಿತ್ತಿದ್ದರು. ಮಳೆ ಬಂದು 11 ಓವರ್ ಗೆ ಪಂದ್ಯ ಕಡಿತಗೊಂಡ ಒತ್ತಡ ಬೇರೆ. ಹಿಂದಿನ ಪಂದ್ಯದಲ್ಲಿ ಸೋತಿದ್ದು ಇದನ್ನು ಗೆಲ್ಲಲೇಬೇಕಾದ ಅನಿವಾರ್ಯತೆ, ಇಂಥ ಸಂದರ್ಭದಲ್ಲಿ ಮಳೆ ಬರುತ್ತಿದ್ದರೂ ಬೌಲಿಂಗ್ ಮಾಡುವಂತೆ ಸೂಚನೆ ನೀಡಿದರೆ ಯಾವ ನಾಯಕನಿಗಾದರೂ ಸಿಟ್ಟು ಬಾರದೇ ಇರುತ್ತದೆಯೇ?
ಶುಕ್ರವಾರ ಆದದ್ದೂ ಇದೆ. ಗಂಭೀರ್ ಜತೆ ಕಿತ್ತಾಡಿಕೊಂಡಿದ್ದ ವಿರಾಟ್ ಕೊಹ್ಲಿ ಈ ಬಾರಿ ಅಂಪೈರ್ ಗಳ ಜತೆ ಮಾತಿಗೆ ಇಳಿದಿದ್ದಾರೆ. ಮಳೆರಾಯನ ಮೇಲೆ ಗೊಣಗಾಟ ಮಾಡಿದರೆ ವರುಣ ಸುಮ್ಮನಾಗುವನೇ?

ಶುಕ್ರವಾರ ನಡೆದ ಪಂದ್ಯದಲ್ಲಿ ಹೈದ್ರಾಬಾದ್ ಗೆ ಕೊನೆಯ ಎರಡು ಓವರ್ ಎಸಯಬೇಕಿದ್ದಾಗ ಕೊಹ್ಲಿ ಅಂಪೈರ್ ಕುಮಾರ್ ಧರ್ಮಸೇನ ಬಳಿ ಬಂತು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನಾಯಕನಿಗೆ ದಿನೇಶ್ ಕಾರ್ತಿಕ್ ಸಹ ಸಾಥ್ ನೀಡಿದ್ದಾರೆ.[ಲಗಾನ್ ಚಿತ್ರದ ಕ್ಲೈಮಾಕ್ಸ್ ಮತ್ತೆ ನೋಡಿದ ಹಾಗೇ ಆಯ್ತು!]
ಕೊಹ್ಲಿ ಅಸಮಾಧಾನಕ್ಕೆ ಏನು ಕಾರಣ?
ಮಳೆ ಬಾಧಿತ ಪಂದ್ಯವನ್ನು 11 ಓವರ್ ಗೆ ಸೀಮಿತ ಮಾಡಲಾಗಿತ್ತು. ಬೆಂಗಳೂರು ಒಂಭತ್ತನೇ ಓವರ್ ಬೌಲಿಂಗ್ ಮಾಡುತ್ತಿದ್ದಾಗ ಕೊಹ್ಲಿ ಕೈ ಸೇರಿದ್ದ ಚೆಂಡು ಜಾರಿಕೊಂಡಿತ್ತು. ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರಿಗೂ ಇಂಥದೇ ಅನುಭವ ಹಲವು ಸಾರಿ ಆಗಿತ್ತು.
ನೇರವಾಗಿ ಅಂಪೈರ್ ಬಳಿ ಧಾವಿಸಿದ ಕೊಹ್ಲಿ' ಇನ್ನು ಯಾಕೆ ಪಂದ್ಯವನ್ನು ಮುಂದುವರಿಸುತ್ತಿದ್ದೀರಿ? ಚೆಂಡು ಸಂಪೂರ್ಣ ಒದ್ದೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.[ಎರಡು ವರ್ಷ ಬಳಿಕ ಮತ್ತೆ ಕೊಹ್ಲಿ- ಗಂಭೀರ್ ಕಿತ್ತಾಟ!]
ಈ ವೇಳೆ ಮಧ್ಯ ಪ್ರವೇಶ ಮಾಡಿದ ಮತ್ತೊಬ್ಬ ಅಂಪೈರ್ ಮಾತುಕತೆಗೆ ತೆರೆ ಎಳೆಯುವ ಯತ್ನ ಮಾಡಿದರು. ನಂತರ ಮತ್ತೆ ಮಳೆ ಆರಂಭಗೊಂಡು ಆರು ಓವರ್ ಗೆ ಸೀಮಿತ ಮಾಡಿದ ಪಂದ್ಯದಲ್ಲಿ ಬೆಂಗಳೂರು ತಂಡ ಜಯ ದಾಖಲಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications