ಕಾಲು ನೋವಿನ ನಡುವೆಯೂ ಪಂದ್ಯ ಗೆಲ್ಲಿಸಿಕೊಟ್ಟ ಗೇಲ್
ಕೋಲ್ಕತ, ಏ. 12: ಟಿ-20 ಕ್ರಿಕೆಟ್ ನ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ (96ರನ್, 56ಎಸೆತ, 7ಬೌಂಡರಿ,7ಸಿಕ್ಸರ್) ಸ್ಫೋಟಕ ಆಟ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಗೆಲುವು ದಕ್ಕಿಸಿಕೊಟ್ಟಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಶನಿವಾರ ನಡೆದ ಕೋಲ್ಕತ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ತಂಡ ಮೂರು ವಿಕೆಟ್ ಜಯ ಸಾಧಿಸಿದೆ.
ಮೊದಲಿ ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ಗೌತಮ್ಗಂಭೀರ್ (58) ಮತ್ತು ರುಸೆಲ್ (41*) ಬ್ಯಾಟಿಂಗ್ ನೆರವಿನಿಂದ ಆರ್ ಸಿಬಿಗೆ 178 ರನ್ ಗುರಿ ನೀಡಿತ್ತು. ಬೆಂಗಳೂರು ಪರ ಗೇಲ್ ಹೊರತಾಗಿ ಮತ್ಯಾರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ ಬೇಡದ ರನ್ ಕಡಿಯಲು ಹೋಗಿ ಗೇಲ್ ರನೌಟ್ ಆದರೂ ಅದಾಗಲೇ ಅವರು ತಂಡಕ್ಕೆ ಜಯವನ್ನು ಖಾತ್ರಿ ಮಾಡಿ ಹೋಗಿದ್ದರು.[ಆರ್ ಸಿಬಿ vs ಹೈದರಾಬಾದ್ ಕದನಕ್ಕೆ ಸೌರಶಕ್ತಿ]

ಆರಂಭಿಕ ಆಘಾತ
ಆರಂಭಿಕ ಆಟಗಾರನಾಗಿ ಕ್ರೀಸ್ ಗೆ ಇಳಿದ ನಾಯಕ ವಿರಾಟ್ ಕೊಹ್ಲಿ ಬೇಗನೇ ಫೆವಿಲಿಯನ್ ಸೇರಿಕೊಂಡರು. ನಂತರ ಬಂದ ದಿನೇಶ್ ಕಾರ್ತಿಕ್ ಸಹ ಹೆಚ್ಚು ಹೊತ್ತಿ ನಿಲ್ಲಲಿಲ್ಲ. ಆದರೆ ಒಂದು ಕಡೆ ನೆಲಕಚ್ಚಿ ನಿಂತ ಗೇಲ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಕ್ಯಾಚ್ ಬಿಟ್ಟ ಮಾರ್ಕೆಲ್
ಬಿರುಸಿನ ಆಟಕ್ಕೆ ಮುಂದಾಗಿದ್ದ ಕ್ರೀಸ್ ಗೇಲ್ ನೀಡಿದ ಕ್ಯಾಚನ್ನು ಮಾರ್ಕೆಲ್ ಕೈ ಚೆಲ್ಲಿದ್ದು ಕೋಲ್ಕತ್ತಾ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು. ಗೇಲ್ 33 ರನ್ ಗಳಿಸಿದ್ದಾಗ ಮಾರ್ನೆ ಮಾರ್ಲೆಲ್ ಸುಲಕಭವಾದ ಕ್ಯಾಚ್ ಕೈಬಿಟ್ಟರು. ಇದು ಕೋಲ್ಕತ್ತಾ ಕೈ ನಿಂದ ಪಂದ್ಯವನ್ನೇ ಕಸಿದುಕೊಂಡಿತು.

ಪಂದ್ಯ ಸೋಲಲು ಬಿಡಲಿಲ್ಲ
ಒಂದು ಹಂತದಲ್ಲಿ ಬೆಂಗಳೂರು ಕೈಯಿಂದ ಪಂದ್ಯ ಕೈತಪ್ಪಿತು ಎಂದೆನಿಸಿದರು ಗೇಲ್ ಬೌಂಡರಿ, ಸಿಕ್ಸರ್ ಗಳು ರನ್ ಗತಿ ಉಳಿಯಲು ಬಿಡಲಿಲ್ಲ. ಡೆವಿಲಿಯರ್ಸ್ ಸ್ಫೋಟಕ ಆಟ ಸಹ ಬೆಂಗಳೂರು ಗೆಲ್ಲುವಲ್ಲಿ ನೆರವಾಯಿತು. ಕಾಲು ನೋವಿನಿಂದ ಬಳಲುತ್ತಿದ್ದರು ಗೇಲ್ ಅಮೋಘ ಆಟ ಪ್ರದರ್ಶನ ನೀಡಿದರು. ಗ್ಯಾಲರಿಯಲ್ಲಿ ಕುಳಿತ ಅನುಷ್ಕಾ ಶರ್ಮಾ ಆರ್ ಸಿಬಿ ತಂಡವನ್ನು ಹುರಿದುಂಬಿಸುತ್ತಿದ್ದರು

ಬಂಗಾಳದ ಹುಲಿ
ಭಾರತ ಕ್ರಿಕೆಟ್ ದಿಗ್ಗಜ, ಮಾಜಿ ನಾಯಕ ಸೌರವ್ ಗಂಗೂಲಿ ಈಡನ್ ಗಾರ್ಡನ್ ನಲ್ಲಿ ಕಾಣಿಸಿಕೊಂಡು ಕ್ರಿಕೆಟ್ ಆಸ್ವಾದಿಸಿದರು. ಹಿಂದೆ ಕೋಲ್ಕತ್ತಾ ಪರವಾಗಿ ಆಡಿದ್ದ ದಾದಾ ಇದೀಗ ಕ್ರಿಕೆಟ್ ಕಾಮೆಂಟೆಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಜಯದ ಕೇಕೆ
ಇನ್ನು ಒಂದು ಓವರ್ ಬಾಕಿ ಇರುವಂತೆ ಬೆಂಗಳೂರು ತಂಡ ಜಯದ ನಗೆ ಬೀರಿತು. ಟಿ-2೦ ಕ್ರಿಕೆಟ್ ನಲ್ಲಿ ರನ್ ಹೊಳೆ ಹರಿಸಲಿದ್ದೇನೆ ಎಂದು ಕ್ರೀಸ್ ಗೇಲ್ ಮುನ್ಸುಚನೆ ಕೊಟ್ಟಂತೆ ಪಂದ್ಯ ಕಂಡುಬಂದಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications