ಚೆನ್ನೈ ಬಗ್ಗು ಬಡಿದು ಐಪಿಎಲ್ 8 ಫೈನಲಿಗೆ ಮುಂಬೈ
ಮುಂಬೈ, ಮೇ.20: ಮುಂಬೈ ತಂಡ ಆಲ್ ರೌಂಡ್ ಆಟದ ಮುಂದೆ ಧೋನಿ ಹುಡುಗರು ಮಂಕಾದರೂ, ಕ್ಯಾಚುಗಳನ್ನು ಕೈಚೆಲ್ಲಿದರೂ ಅಂಬಾನಿ ಹುಡುಗರು ಮ್ಯಾಚ್ ಬಿಟ್ಟುಕೊಡಲಿಲ್ಲ. ರನ್ ಚೇಸ್ ನಲ್ಲಿ ಕಿಂಗ್ ಎಂದು ಮೆರೆಯುತ್ತಿದ್ದ ಧೋನಿ ಕೂಡಾ ಶೂನ್ಯ ಸುತ್ತಿ ಪೆವಿಲಿಯನ್ ಗೆ ಹೋಗಿದ್ದು ಐಪಿಎಲ್ 2015 ಕ್ವಾಲಿಫೈಯರ್ 1 ರ ವಿಶೇಷ.
ಮುಂಬೈ ಇಂಡಿಯನ್ಸ್ ತಂಡ ನೀಡಿದ್ದ 187/6 ಮೊತ್ತವನ್ನು ಚೇಸ್ ಮಾಡಿದ ಚೆನ್ನೈ ತಂಡ ಸತತ ಆಘಾತ ಅನುಭವಿಸಿ 25 ರನ್ ಗಳಿಂದ ಪಂದ್ಯವನ್ನು ಸೋತು ಶರಣಾಯಿತು. ಪೊಲ್ಲಾರ್ಡ್, ಹರ್ಭಜನ್, ಸಿಮನ್ಸ್ ಉತ್ತಮ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಮೂರನೇ ಬಾರಿಗೆ ಐಪಿಎಲ್ ಫೈನಲ್ ತಲುಪಿದೆ.ಮುಂಬೈ ತಂಡ 2010, 2013ರಲ್ಲಿ ಫೈನಲ್ ತಲುಪಿತ್ತು.

ಚೆನ್ನೈ ಪರ ಡು ಫ್ಲೆಸಿಸ್ (45), ಸುರೇಶ್ ರೈನಾ (25), ಅಶ್ವಿನ್ (23), ಡ್ವೈನ್ ಬ್ರಾವೋ (20) ರನ್ ಗಳಿಸಿ ಹೋರಾಟ ತೋರಿದರು. ಕೊನೆಗೆ 19 ಓವರ್ಗಳಲ್ಲಿ 162 ಕ್ಕೆ ಆಲೌಟಾಯಿತು.
ಮುಂಬೈ ಇಂಡಿಯನ್ಸ್ ಪರ ಲಸಿತ್ ಮಾಲಿಂಗ 23 ಕ್ಕೆ 3, ವಿನಯ್ ಕುಮಾರ್ 26 ಕ್ಕೆ 2, ಹರಭಜನ್ ಸಿಂಗ್ 26 ಕ್ಕೆ 2 ವಿಕೆಟ್ ಪಡೆದು ಮಿಂಚಿದರು.
188 ರನ್ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭದಿಂದಲೂ ನಿರಂತರವಾಗಿ ಬ್ಯಾಟ್ಸ್ಮನ್ಗಳನ್ನು ಕಳೆದುಕೊಂಡ ಪರಿಣಾಮ 19 ಓವರ್ಗಳಲ್ಲಿ 162 ಕ್ಕೆ ಆಲೌಟಾಯಿತು. ಚೆನ್ನೈ ಪರ ಫ್ಲೆಸಿಸ್ (45), ಸುರೇಶ್ ರೈನಾ (25), ಅಶ್ವಿನ್ (23), ಡ್ವೈನ್ ಬ್ರಾವೋ (20) ರನ್ ಗಳಿಸಿದರು.
ಮುಂಬೈ ಇಂಡಿಯನ್ಸ್ ಪರ ಲಸಿತ್ ಮಾಲಿಂಗ 23 ಕ್ಕೆ 3, ವಿನಯ್ ಕುಮಾರ್ 26 ಕ್ಕೆ 2, ಹರ್ಭಜನ್ ಸಿಂಗ್ 26 ಕ್ಕೆ 2 ವಿಕೆಟ್ ಪಡೆದು ಮಿಂಚಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡಕ್ಕೆ ಸಿಮನ್ಸ್ ಮತ್ತೊಮ್ಮೆ ಆಸರೆಯಾದರು. 51 ಎಸೆತಗಳಲ್ಲಿ 65ರನ್, ಪೊಲ್ಲಾರ್ಡ್ ಬಿರುಸಿನ 17 ಎಸೆತಗಳಲ್ಲಿ 41ರನ್ ಗಳಿಸಿ ತಂಡದ ಮೊತ್ತವನ್ನು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 187 ಸ್ಕೋರಿಗೆ ಏರಿಸಿದರು.ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಡ್ವೈನ್ ಬ್ರಾವೋ 40 ಕ್ಕೆ 3 ಮತ್ತು ಆಶಿಶ್ ನೆಹ್ರಾ 28 ಕ್ಕೆ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications