Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗೇಲ್ ಬೌಂಡರಿ, ಸಿಕ್ಸರ್ ಮಳೆಗೆ ವರುಣದೇವ ಅಸ್ತು

ಬೆಂಗಳೂರು, ಏ. 13: ಕ್ರಿಸ್ ಗೇಲ್ ಬ್ಯಾಟ್ ನಿಂದ ಬೌಂಡರಿ, ಸಿಕ್ಸರ್ ಸುರಿಮಳೆ ನೀರಿಕ್ಷೆ ಮಾಡಿದ್ದ ಬೆಂಗಳೂರಿಗರ ಆಸೆಗೆ ವರುಣದೇವ ತಣ್ಣೀರು ಎರಚುತ್ತಾನೆ ಎಂದು ಹೇಳಲಾಗಿತ್ತು. ಆದರೆ ಸೋಮವಾರ ಮಧ್ಯಾಹ್ನವೇ ಸುರಿದ ಮಳೆ ಪಂದ್ಯ ನಡೆಯಲು ಅವಕಾಶ ಮಾಡಿಕೊಟ್ಟಿದೆ.

ಚಿನ್ನಸ್ವಾಮಿ ಮೈದಾನದಲ್ಲಿ ನಿಗದಿಯಾಗಿದ್ದ ಬೆಂಗಳೂರು ಮತ್ತು ಹೈದ್ರಾಬಾದ್ ನಡುವಿನ ಪಂದ್ಯ ಆರಂಭವಾಗಲು ಯಾವ ಅಡ್ಡಿ ಆತಂಕ ಉಳಿದಿಲ್ಲ, ಹವಾಮಾನ ವರದಿ ಹೇಳಿದಂತೆ ಮಧ್ಯಾಹ್ನವೇ ಮಳೆ ಬಿದ್ದಿದ್ದು ಇದೀಗ ಶುಭ್ರ ಆಕಾಶ ಗೋಚರವಾಗುತ್ತಿದೆ. [ಕಾಲು ನೋವಿನ ನಡುವೆಯೂ ಪಂದ್ಯ ಗೆಲ್ಲಿಸಿಕೊಟ್ಟ ಗೇಲ್]

rain


ಅಭಿಮಾನಿಗಳಲ್ಲಿ ಆಶಾಕಿರಣ
ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ಸವಿಯಬೇಕು ಎಂದು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿದ್ದರು. ಪೊಲೀಸ್ ಇಲಾಖೆ ಸಹ ಬಂದೋಬಸ್ತ್ ಕೈಗೊಂಡಿದ್ದು ಸಂಚಾರ ಮಾರ್ಗದಲ್ಲೂ ಬದಲಾವಣೆ ಮಾಡಲಾಗಿತ್ತು. ಮಳೆ ಬಂದು ಪಂದ್ಯ ನಿಂತರೆ ಮುಂದಿನ ಬೆಂಗಳೂರು ಪಂದ್ಯದವರೆಗೂ ಕಾಯಬೇಕಾಗಿತ್ತು. ಆದರೆ ಈಗ ಎಲ್ಲ ಸಸೂತ್ರವಾಗಿದೆ. [ಬೆಂಗಳೂರು ಅಕಾಲಿಕ ಮಳೆಗೆ ಏನು ಕಾರಣ?]
rain 2

ಮುಂಬೈ ಇಂಡಿಯನ್ಸ್ ವಿರುದ್ಧ ಏಪ್ರಿಲ್ 19 ರಂದು ಬೆಂಗಳೂರಿನಲ್ಲಿ ಮುಂದಿನ ಪಂದ್ಯ ನಡೆಯಲಿದೆ. ನಗರದ ಹಲವಾರು ಭಾಗದಲ್ಲಿ ಈಗಾಗಲೇ ಮಳೆ ಜೋರಾಗಿ ಬೀದ್ದ ಪರಿಣಾಮ ಪಂದ್ಯ ವೀಕ್ಷಿಸಲು ತೆರಳುವವರು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಳ್ಳುವುದು ಗ್ಯಾರಂಟಿ.[ಇದೆಲ್ಲ ಇಲ್ಲದಿದ್ದರೆ ಬೆಂಗಳೂರನ್ನು ಬೆಂಗಳೂರು ಅಂತಾರಾ?]

ಗುಜರಾತ್ ನಿಂದ ಲಕ್ಷದ್ವೀಪದ ವರೆಗಿನ ಸಮುದ್ರ ತೀರದದಲ್ಲಿ ಏಕಾಏಕಿ ಕಾಣಿಸಿಕೊಂಡ ಹವಾಮಾನ ಬದಲಾವಣೆ ಅಕಾಲಿಕ ಮಳೆಗೆ ಕಾರಣವಾಗಿದೆ. ರಾಜ್ಯಾದ್ಯಂತ ಮಳೆಯಾಗುತ್ತಿದ್ದು ರೈತರ ಮೇಲೂ ಪರಿಣಾಮ ಬೀರಿದೆ.

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+