ಮುಂಬೈ, ಮೇ.3: ಐಪಿಎಲ್ 8ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವ ಟೀಂ ಇಂಡಿಯಾದ ಪ್ರಮುಖ ಆಟಗಾರ ರೋಹಿತ್ ಶರ್ಮ ಅವರು ತಮ್ಮ ಮದುವೆ ಯೋಜನೆ ಬಹಿರಂಗಗೊಳಿಸಿದ್ದಾರೆ. ಸುರೇಶ್ ರೈನಾರಂತೆ ರೋಹಿತ್ ಕೂಡಾ ತಮ್ಮ ಬಾಲ್ಯದ ಗೆಳತಿಯೊಂದಿಗೆ ಬದುಕು ಸಾಗಿಸುವುದಾಗಿ ಹೇಳಿದ್ದಾರೆ.
ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಭಾನುವಾರ ರೋಹಿತ್ ತಿಳಿಸಿದ್ದಾರೆ. ರೋಹಿತ್ ತಮ್ಮ ಗೆಳತಿ ಕಮ್ ಭಾವಿ ಪತ್ನಿಯೊಂದಿಗೆ ಇರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ನನ್ನ ಆಪ್ತಗೆಳತಿ ಈಗ ನನ್ನ ಪ್ರಾಣಸಖಿ ಎಂದು ಟ್ವೀಟ್ ಮಾಡಿದ್ದಾರೆ. ರಿತಿಕಾ ಹಾಗೂ ರೋಹಿತ್ ಶರ್ಮ ಜೋಡಿಗೆ ಎಲ್ಲೆಡೆಯಿಂದ ಶುಭ ಹಾರೈಕೆಗಳು ಸಿಗುತ್ತಿವೆ.

ಇತ್ತೀಚೆಗೆ ಐಪಿಎಲ್ ಆರಂಭಕ್ಕೂ ಮುನ್ನ ಸುರೇಶ್ ರೈನಾ ಅವರು ಬಾಲ್ಯದ ಗೆಳತಿ ಪ್ರಿಯಾಂಕಾ ಚೌಧುರಿ ಅವರನ್ನು ವರಿಸಿದ್ದರು. ಪಂಜಾಬಿ ಸಂಪ್ರದಾಯ ಹಾಗೂ ನಂತರ ನವದೆಹಲಿಯ ಖಾಸಗಿ ಹೋಟೆಲ್ ನಲ್ಲಿ ನಡೆದ ವೈಭವೋಪೇತ ಆರತಕ್ಷತೆ ಸಮಾರಂಭಕ್ಕೆ ಕ್ರಿಕೆಟರ್ಸ್, ಸಿನಿತಾರೆಯರು ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು.
ಈಗ ಮುಂಬೈ ಆಟಗಾರ ರೋಹಿತ್ ಶರ್ಮ ಅವರು ಕೂಡಾ ರೈನಾರಂತೆ ತಮ್ಮ ಬಾಲ್ಯದ ಗೆಳತಿಯನ್ನು ವರಿಸುತ್ತಿರುವುದು ವಿಶೇಷ.(ಒನ್ ಇಂಡಿಯಾ ಸುದ್ದಿ)