ಚೆನ್ನೈ ಗೆ ಮಣ್ಣು ಮುಕ್ಕಿಸಿದ ಹರ್ದಿಕ್ ಪಾಂಡ್ಯಾ ಯಾರು?
ಚೆನ್ನೈ, ಮೇ 10: ಐಪಿಎಲ್ ಪಂದ್ಯಾವಳಿ ಭಾರತದ ಮತ್ತೊಬ್ಬ ಉದಯನೋನ್ಮುಖ ಆಟಗಾರನನ್ನು ಬೆಳಕಿಗೆ ತಂದಿದೆ. ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ಹರ್ದಿಕ್ ಪಾಂಡ್ಯಾ ಎಂಬ ನವ ನಕ್ಷತ್ರದ ಉದಯವಾಗಿದೆ.
ಬೆಂಗಳೂರು ತಂಡದ ಬ್ಯಾಟ್ಸ್ ಮನ್ ಸರ್ಫರಾಜ್ ಖಾನ್ ನಂತರ ಎಲ್ಲರೂ ಇದೀಗ ಮುಂಬೈ ಇಂಡಿಯನ್ಸ್ ತಂಡದ ಪಾಂಡ್ಯಾ ಬಗ್ಗೆ ಮಾತನಾಡಲು ಶುರುವಿಟ್ಟುಕೊಂಡಿದ್ದಾರೆ.[ಸರ್ಫರಾಜ್ ಖಾನ್ ಹೊಸ 'ಜಾವೇದ್ ಮಿಯಾಂದಾದ್']

ಚೆನ್ನೈ ತಂಡದ ವಿರುದ್ಧ ಮುಂಬೈ ಗೆ ಗೆಲವು ತಂದುಕೊಟ್ಟ 21 ವರ್ಷದ ಬಲಗೈ ಬ್ಯಾಟ್ಸಮನ್ ಪಾಂಡ್ಯಾ ಕೇವಲ 8 ಚೆಂಡುಗಳಲ್ಲಿ 21 ಗಳಿಸಿದ್ದರು. ಪವನ್ ನೇಗಿಯ 19 ನೇ ಓವರ್ ನಲ್ಲಿ ಪಾಂಡ್ಯಾ ಬಾರಿಸಿದ ಮೂರು ಸಿಕ್ಸರ್ ಗಳು ಕೈತಪ್ಪಿ ಹೋಗಿದ್ದ ಜಯವನ್ನು ತಂದಿಕ್ಕಿತು. ಅಲ್ಲದೇ ಮೂರು ಕ್ಯಾಚ್ ಗಳನ್ನು ಪಡೆದು ಅಂದಿನ ಪಂದ್ಯದ ಪುರುಷೋತ್ತಮನಾಗಿ ಮೆರೆದರು.
ಪಾಂಡ್ಯಾ ಪ್ರದರ್ಶನಕ್ಕೆ ಮುಂಬೈ ತಂಡದ ಕೋಚ್, ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ. ಆತನ ಬಳಿ ಅನೇಕ ಕೌಶಲ್ಯಗಳಿವೆ. ಇದೇ ಬಗೆಯ ಆಟ ಮುಂದುವರಿಸಿಕೊಂಡು ಹೋದರೆ ಇನ್ನಷ್ಟು ಉತ್ತಮ ಆಟಗಾರನಾಗಿ ರೂಪುಗೊಳ್ಳುತ್ತಾನೆ ಎಂದು ಪಾಂಟಿಂಗ್ ಹೇಳಿದ್ದಾರೆ.[ಐಪಿಎಲ್ ಅಷ್ಟೂ ಸುದ್ದಿಗಳು]

ನಾನು ನೇರವಾಗಿ ಹೊಡೆಯಲು ಯತ್ನಿಸುತ್ತಿದ್ದೆ. ಚೆಂಡು ಬ್ಯಾಟ್ ಗೆ ಚೆನ್ನಾಗಿ ಬರುತ್ತಿತ್ತು. ಅಭ್ಯಾಸದ ವೇಳೆ ಶ್ರಮ ವಹಿಸಿದ್ದು ಇವತ್ತು ಸಾರ್ಥಕವಾಯಿತು ಎಂದು ಪಾಂಡ್ಯಾ ಪಂದ್ಯದ ನಂತರ ಹೇಳಿದರು.
* ಪೂರ್ಣ ಹೆಸರು: ಹಾರ್ದಿಕ್ ಹಿಮಾಂಶು ಪಾಂಡ್ಯಾ
* ಬಲಗೈ ಬ್ಯಾಟ್ಸಮನ್, ಬಲಗೈ ಮಧ್ಯಮ ವೇಗದ ಬೌಲರ್
* ಬರೋಡಾದ ಆಟಗಾರ[ಮಿಚೆಲ್ ಸ್ಟಾರ್ಕ್ ರಿಂದ ಯಾರ್ಕರ್ ಕಲಿತೆ : ಕನ್ನಡಿಗ ಅರವಿಂದ್]
* ಹುಟ್ಟಿದ ದಿನಾಂಕ: 11 ಅಕ್ಟೋಬರ್ 1993
* ವಯಸ್ಸು: 21 ವರ್ಷ
* ಪ್ರಥಮ ದರ್ಜೆ ಪಂದ್ಯ: 6( ಮಧ್ಯ ಪ್ರದೇಶದ ವಿರುದ್ದ ಪದಾರ್ಪಣೆ, 2013)
* ಐಪಿಎಲ್ ಪಂದ್ಯಗಳು: 4(ಬೆಂಗಳೂರು ವಿರುದ್ಧ ಪದಾರ್ಪಣೆ, 2015)
* ಐಪಿಎಲ್ ಹರಾಜಿನಲ್ಲಿ ಸಿಕ್ಕಿದ್ದು 10 ಲಕ್ಷ
* ಪ್ರಥಮ ದರ್ಜೆ ಪಂದ್ಯದ ಅತಿಹೆಚ್ಚು ರನ್: 90
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications