Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಮ್ಮ ಬೆಂಗಳೂರಿನಲ್ಲಿ ಐಪಿಎಲ್ 9 ಹರಾಜು ಪ್ರಕ್ರಿಯೆ

ಬೆಂಗಳೂರು, ಡಿ.08: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಹೊಸ ತಂಡಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದ ಬೆನ್ನಲ್ಲೇ ಆಟಗಾರರ ಹರಾಜು ದಿನಾಂಕ, ಟೂರ್ನಿಯ ಅವಧಿಯನ್ನು ಪ್ರಕಟಿಸಿದೆ. ಬೆಂಗಳೂರಿನಲ್ಲಿ ಐಪಿಎಲ್ 9ರ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.

ಪುಣೆ ಹಾಗೂ ರಾಜ್ ಕೋಟ್ ಮುಂದಿನ ಎರಡು ವರ್ಷಗಳ ಕಾಲ ಐಪಿಎಲ್ ನಲ್ಲಿ ಆಡಲಿವೆ. ಈ ತಂಡಗಳು ನಿಷೇಧಕ್ಕೊಳಗಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಬದಲಿಗೆ ಟೂರ್ನಿಯಲ್ಲಿ ಆಡಲಿವೆ. [ಐಪಿಎಲ್ 9ಗೆ ಎರಡು ಹೊಚ್ಚ ಹೊಸ ತಂಡಗಳು ಪ್ರಕಟ]

IPL 2016 from April 9 to May 29; Players auction on February 6

2018ರಲ್ಲಿ ಈ ಎರಡು ತಂಡಗಳು ಮತ್ತೊಮ್ಮೆ ಆಡುವ ಅವಕಾಶ ಪಡೆದುಕೊಳ್ಳಲಿವೆ. ನ್ಯೂ ರೈಸಿಂಗ್ ಕನ್ಸೊರ್ಟಿಯಂ ಪುಣೆ ತಂಡದ ಮಾಲೀಕರಾಗಿದ್ದರೆ, ಇಂಟೆಕ್ಸ್ ಮೊಬೈಲ್ ಸಂಸ್ಥೆ ರಾಜ್ ಕೋಟ್ ತಂಡವನ್ನು ಹೊಂದಿದೆ.

ಫೆಬ್ರವರಿ 6, 2016ರಂದು ಬೆಂಗಳೂರಿನಲ್ಲಿ ಐಪಿಎಲ್ 9ರ ಹರಾಜು ನಡೆಯಲಿದೆ. ಐಪಿಎಲ್ 9 ಟೂರ್ನಿ ಏಪ್ರಿಲ್ 9 ರಿಂದ ಮೇ 29, 2016ರ ತನಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಲಿದೆ.

ಹೊಸದಾಗಿ ಸೇರ್ಪಡೆಗೊಂಡಿರುವ ಪುಣೆ ಹಾಗೂ ರಾಜ್ ಕೋಟ್ ತಂಡಗಳು ಡಿಸೆಂಬರ್ 15ರೊಳಗೆ ತಮ್ಮ ತಂಡಗಳ ಬಗ್ಗೆ ಅಂತಿಮ ಕರಡು ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ. ಹರಾಜು ಪ್ರಕ್ರಿಯೆಯಲ್ಲಿ ಪುಣೆ ತಂಡಕ್ಕೆ ಹರಾಜು ಕೂಗುವ ಮೊದಲ ಅವಕಾಶ ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ.

ಎಂಎಸ್ ಧೋನಿ ಸೇರಿದಂತೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಆಟಗಾರರು ಫೆಬ್ರವರಿ 6ರಂದು ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹರಾಗಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+