ಗೌತಮ್ 'ಗಂಭೀರ' ಆಟ, ಕೆಕೆಆರ್ ಗೆ ಗೆಲುವು
ಹೈದರಾಬಾದ್, ಏಪ್ರಿಲ್ 17: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಅವರ ಅರ್ಧಶತಕದ ನೆರವಿನಿಂದ ಕೆಕೆಆರ್ ತಂಡಕ್ಕೆ ಸನ್ ರೈಸರ್ಸ್ ವಿರುದ್ಧ ಗೆಲುವು ಸಿಕ್ಕಿದೆ.
ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ
ರನ್ ಚೇಸ್ ನಲ್ಲಿ ಗಂಭೀರವಾದ ಆಟವಾಡಿದ ಗೌತಮ್ ಅಜೇಯ 90 ರನ್(60 ಎಸೆತಗಳು, 13X4, 1X6) ಹಾಗೂ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ 38 ರನ್(34 ಎಸೆತಗಳು, 3X4, 1X6) ನೆರವಿನಿಂದ ಕೋಲ್ಕತ್ತಾ ನೈಟ್ರೈಡರ್ಸ್ ತಂಡ 8 ವಿಕೆಟ್ಗಳಿಂದ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತು. []

ಇದಕ್ಕೂ ಮುನ್ನ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಅತಿಥೇಯ ತಂಡವಾದ ಸನ್ರೈಸರ್ಸ್ ಮೊದಲು ಬ್ಯಾಟಿಂಗ್ ಮಾಡಿತು. ಸನ್ರೈಸರ್ಸ್ ತಂಡ 7 ವಿಕೆಟ್ಗೆ 142 ರನ್ ಕಷ್ಟಪಟ್ಟು ಗಳಿಸಿತು. ಈ ಗುರಿಯನ್ನು ಕೆಕೆಆರ್ 18.2 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಸುಲಭವಾಗಿ ದಾಟಿತು. [ಅಂಕ ಪಟ್ಟಿ]
ತಂಡದ ಮೊತ್ತ 50 ರನ್ ಆಗುವಷ್ಟರಲ್ಲೇ 4 ವಿಕೆಟ್ ಕಳೆದುಕೊಂಡಿದ್ದ ಹೈದರಾಬಾದಿಗೆ ಇಂಗ್ಲೆಂಡಿನ ಇಯಾನ್ ಮಾರ್ಗನ್ ಆಸರೆಯಾದರು. ಕೆಕೆಆರ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಪಂದ್ಯದ ಚಿತ್ರಗಳನ್ನು ಗ್ಯಾಲರಿಯಲ್ಲಿ ನೋಡಿ....
ಮಾರ್ಗನ್ 51ರನ್ (43 ಎಸೆತಗಳು, 3 X4, 2X6) ಹಾಗೂ ವಿಕೆಟ್ ಕೀಪರ್ ನಮನ್ ಓಜಾ 37 ರನ್(28 ಎಸೆತಗಳು, 2X4, 2X6) ಇಬ್ಬರ 67 ರನ್ ಜತೆಯಾಟದಿಂದ ತಂಡ ಉತ್ತಮ ಮೊತ್ತ ಕಲೆಹಾಕುವ ಕುರುಹು ತೋರಿತು. ಆದರೆ, ಮಾರ್ಕೆಲ್ ಹಾಗೂ ಸುನಿಲ್ ನಾರಾಯಣ್ ಸೇರಿದಂತೆ ಕೆಕೆಆರ್ ಬೌಲರ್ ಗಳು ಸನ್ ರೈಸರ್ಸ್ ತಂಡವನ್ನು ಕಟ್ಟಿ ಹಾಕಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications