For Quick Alerts
ALLOW NOTIFICATIONS  
For Daily Alerts
 

ಐಪಿಎಲ್ : ಲಯಕ್ಕೆ ಮರಳಿದ ಯುವರಾಜ್, ಕೆಕೆಆರ್ ಔಟ್

By Mahesh

ನವದೆಹಲಿ, ಮೇ 25: ಸನ್ ರೈಸರ್ಸ್ ಹೈದರಾಬಾದ್ ಪರ ಯುವರಾಜ್ ಸಿಂಗ್ ಹಾಗೂ ಭುವನೇಶ್ವರ್ ಕುಮಾರ್ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡವನ್ನು ಕ್ವಾಲಿಫೈಯರ್ 2ಕ್ಕೆ ಕೊಂಡೊಯ್ದಿದ್ದಾರೆ. ಐಪಿಎಲ್ 9ರ ಕ್ವಾಲಿಫೈಯರ್ 1 ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 22 ರನ್ ಗಳ ಸೋಲು ಕಂಡ ಕೆಕೆಅರ್ ಟೂರ್ನಿಯಿಂದ ಹೊರ ಬಿದ್ದಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಯುವರಾಜ್ ಅವರು 30 ಎಸೆತಗಳಲ್ಲಿ 44ರನ್ ಚೆಚ್ಚಿದರು. 8 ಬೌಂಡರಿ, 1 ಸಿಕ್ಸರ್ ಮೂಲಕ ತ್ವರಿತಗತಿಯಲ್ಲಿ ರನ್ ಗಳಿಸಿದ್ದಲ್ಲದೆ, ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ತಂಡ ತಮ್ಮ ಮೇಲಿಟ್ಟಿದ್ದ ಭರವಸೆಗೆ ಬೆಲೆ ತಂದರು.[ಕೆಕೆಆರ್ ಚಿಯರ್ ಗರ್ಲ್ಸ್ ಕಣ್ಣೀರು ಒರೆಸಿದ ಶಾರುಖ್!]

IPL 2016: Hyderabad knock Kolkata out, to face Gujarat in Qualifier 2

ಸನ್​ರೈಸರ್ಸ್ ತಂಡ 8 ವಿಕೆಟ್​ಗೆ 162 ರನ್ ಪೇರಿಸಿತು. ಇದಕ್ಕೆ ಪ್ರತಿಯಾಗಿ ಕೆಕೆಆರ್ 8 ವಿಕೆಟ್​ಗೆ 140 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ವೇಗಿ ಭುವನೇಶ್ವರ್ ಕುಮಾರ್ (19ಕ್ಕೆ 3) ಬಿಗಿ ಬೌಲಿಂಗ್ ಮೂಲಕ ಕೆಕೆಆರ್ ಆಸೆಗೆ ತಣ್ಣೀರೆರೆಚಿದರು.[ಎಬಿಡಿ ಅಬ್ಬರ, ವಾಹ್ ಅಬ್ದುಲ್ಲಾ! ಆರ್ ಸಿಬಿ ಫೈನಲಿಗೆ!]

ಕೆಕೆಆರ್ ಪರ ಮನೀಷ್ ಪಾಂಡೆ 36 ರನ್(28 ಎಸೆತ, 2‍X4, 1X6) ಮಾತ್ರ ಹೋರಾಟದ ಆಟ ಪ್ರದರ್ಶಿಸಿದರು. ರಾಬಿನ್ ಉತ್ತಪ್ಪ 11, ಗಂಭೀರ್ 28, ಕಾಲಿನ್ ಮುನ್ರೋ 16, ಯೂಸುಫ್ ಪಠಾಣ್ 2 ವಿಫಲರಾಗಿದ್ದು, ಅಭಿಮಾನಿಗಳಿಗೆ ನಿರಾಶೆ ತಂದಿತು.

Story first published: Wednesday, January 3, 2018, 10:04 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+