ಎಬಿಡಿ- ಕೊಹ್ಲಿ ನಿರ್ಮಿಸಿದ ಹೊಸ ದಾಖಲೆಗಳತ್ತ ಒಂದು ನೋಟ
ಬೆಂಗಳೂರು, ಮೇ 15: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಮಳೆಯ ಅಬ್ಬರದಲ್ಲಿ ದಾಖಲೆಗಳು ಕೊಚ್ಚಿ ಹೋಯಿತು. ಗುಜರಾತ್ ಲಯನ್ಸ್ ಬೌಲರ್ ಗಳನ್ನು ಚೆಂಡಾಡಿದ ಕೊಹ್ಲಿ ಹಾಗೂ ಎಬಿಡಿ ಸ್ಫೋಟಕ ಬ್ಯಾಟಿಂಗ್ ಆರ್ಭಟಕ್ಕೆ ಪ್ರೇಕ್ಷಕರು ಮನಸೋತರು.
ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ
ಕ್ರಿಸ್ ಗೇಲ್ ಆಟ ನೋಡಲು ಬಂದಿದ್ದ ಪ್ರೇಕ್ಷಕರಿಗೆ ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟ್ಸ್ಮನ್ ಎಬಿಡಿ ವಿಲಿಯರ್ಸ್ 129 ರನ್( 52 ಎಸೆತಗಳು, 10X4, 12X6) ಹಾಗೂ ನಾಯಕ ವಿರಾಟ್ ಕೊಹ್ಲಿ 109 ರನ್(55 ಎಸೆತ, 5X4, 8X6) ದಾಖಲೆಯ ಶತಕದಾಟ ರಂಜನೆ ನೀಡಿತು. []

ಗುಜರಾತ್ ಲಯನ್ಸ್ ತಂಡವನ್ನು 144 ರನ್ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈಗ ಪ್ಲೇ ಆಫ್ ಆಸೆ ಚಿಗುರಿದೆ. [ಅಂಕ ಪಟ್ಟಿ]
ನುಚ್ಚುನೂರಾದ ದಾಖಲೆಗಳು:
ಐಪಿಎಲ್ 2016ರಲಿ ಕೊಹ್ಲಿ ಶತಕಗಳು
* ಅಜೇಯ 100: vs ಗುಜರಾತ್ ಲಯನ್ಸ್ , ರಾಜ್ ಕೋಟ್ (ಏಪ್ರಿಲ್ 24)
* ಅಜೇಯ 108: vs ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ , ಬೆಂಗಳೂರು(ಮೇ 7)
* 109 : vs ಗುಜರಾತ್, ಬೆಂಗಳೂರು (ಮೇ 14)
[ಕೊಹ್ಲಿ ನಾಯಕನಾಗಲು ಇದು ಸಕಾಲವಲ್ಲ : ಗವಾಸ್ಕರ್]
* ಆರ್ಸಿಬಿ 144 ರನ್ಗಳಿಂದ ಗೆದ್ದು ಐಪಿಎಲ್ ಇತಿಹಾಸ ದಲ್ಲಿ ಅತಿದೊಡ್ಡ ಗೆಲುವಿನ ದಾಖಲೆ ಬರೆಯಿತು.
* 2008ರಲ್ಲಿ ಆರ್ಸಿಬಿ ತಂಡವೇ ಕೆಕೆಆರ್ ವಿರುದ್ಧ 140 ರನ್ನಿಂದ ಸೋತಿದ್ದು ಹಿಂದಿನ ದಾಖಲೆ.
* ವಿರಾಟ್ ಕೊಹ್ಲಿ ಒಂದೇ ಐಪಿಎಲ್ ಆವೃತ್ತಿಯಲ್ಲಿ ಬರೋಬ್ಬರಿ 3 ಶತಕ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಗೇಲ್ 2 ಶತಕ ಸಿಡಿಸಿದ್ದು ಹಿಂದಿನ ದಾಖಲೆ. [ಫೈನಲಿಗೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಶುರು]
* ಆರ್ಸಿಬಿ (248) ಐಪಿಎಲ್ ಇತಿಹಾಸದ 2ನೇ ಗರಿಷ್ಠ ಮೊತ್ತ ದಾಖಲಿಸಿತು. 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಆರ್ಸಿಬಿ ತಂಡವೇ ಬಾರಿಸಿದ 263 ರನ್ ಟಾಪ್ ಸ್ಕೋರ್.
* ಎಬಿಡಿ ವಿಲಿಯರ್ಸ್ ಐಪಿಎಲ್ನಲ್ಲಿ ತಮ್ಮ 3ನೇ ಶತಕ ಪೂರೈಸಿದರು. ಜತೆಗೆ 3 ಸಾವಿರ ರನ್ ಪೂರೈಸಿದ 3ನೇ ವಿದೇಶಿ ಮತ್ತು ಒಟ್ಟಾರೆ 9ನೇ ಬ್ಯಾಟ್ಸ್ಮನ್ ಎನಿಸಿದರು.
* ಐಪಿಎಲ್ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಹಾಗೂ ಒಟ್ಟಾರೆ ಟಿ20 ಕ್ರಿಕೆಟ್ನಲ್ಲಿ 2ನೇ ಸಲ ಪಂದ್ಯವೊಂದರಲ್ಲಿ 2 ಶತಕ ಮೂಡಿಬಂತು. [ಆರ್ ಸಿಬಿ ಸೋಲಿಗೆ ಬೌಲಿಂಗ್ ಕಾರಣವಲ್ಲ: ಕೆಎಲ್ ರಾಹುಲ್]
* ಗ್ಲೌಸ್ಟೆರ್ಶೈರ್ ತಂಡದ ಕೆವಿನ್ ಓಬ್ರಿಯಾನ್(119) ಮತ್ತು ಹಮಿಶ್ ಮಾರ್ಷಲ್ (102) 2011ರಲ್ಲಿ ಫ್ರೆಂಡ್ಸ್ಲೈಫ್ ಟಿ20ಯಲ್ಲಿ ಮಿಡ್ಲ್ಸೆಕ್ಸ್ ವಿರುದ್ಧ ಪಂದ್ಯದಲ್ಲಿ ಶತಕ ಬಾರಿಸಿದ್ದರು.
* ಟಿ 20 ಜೊತೆಯಾಟ ದಾಖಲೆ, 98 ಎಸೆತಗಳಲ್ಲಿ 229ರನ್ ಗಳಿಕೆ.
* ಡಿವಿಲಿಯರ್ಸ್ ರಿಂದ 5ನೇ ಅತ್ಯಂತ ವೇಗದ ಶತಕ ದಾಖಲೆ.
* ಡಿವಿಲಿಯರ್ಸ್ ರಿಂದ ಒಂದು ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ಸಿಕ್ಸರ್ (12).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications