Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶಮಿ ಹಂಚಿಕೊಂಡ ಚಿತ್ರಕ್ಕೆ ಹೇಗೆ ಪ್ರತಿಕ್ರಿಯಿಸಲಿ?

ನವದೆಹಲಿ, ಏಪ್ರಿಲ್ 07: ಐಪಿಎಲ್ 10ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುತ್ತಿರುವ ಮೊಹಮ್ಮದ್ ಶಮಿ ಅವರು ತಮ್ಮ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ಶಮಿ ಹಂಚಿಕೊಂಡ ಚಿತ್ರವನ್ನು ನೋಡಿ ಹೇಗೆ ಪ್ರತಿಕ್ರಿಯಿಸುವುದೋ ತಿಳಿಯದಂತಾಗಿದೆ.

ಈ ಹಿಂದೆ ಮರಣಶಯ್ಯೆಯಲ್ಲಿ ಮಲಗಿದ್ದ ತಮ್ಮ ತಂದೆಯ ಚಿತ್ರವನ್ನು ಟ್ವೀಟ್ ಮಾಡಿ ಚರ್ಚೆಗೊಳಗಾಗಿದ್ದ ಶಮಿ ಅವರು ಈಗ ತಮ್ಮ ತಂದೆಗಾಗಿ ಸಮಾಧಿ ನಿರ್ಮಿಸಲು ತಾವೇ ಗುಂಡಿ ತೋಡುತ್ತಿರುವ ಚಿತ್ರವನ್ನು ಇನ್ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ. ಇದೇ ಚಿತ್ರ ಫೇಸ್ ಬುಕ್ ನಲ್ಲೂ ಬಂದಿದ್ದು, ಸಾಕಷ್ಟು ಚರ್ಚೆಯಾಗುತ್ತಿದೆ.

Mohammed Shami


ಮೊಹಮ್ಮದ್ ಶಮಿ ಅವರ ತಂದೆ ತೌಶಿಫ್ ಅಲಿ ಅವರು ಹೃದಯಾಘಾತದಿಂದ 2017ರ ಜನವರಿ 26 ರಂದು ಸಾವನ್ನಪ್ಪಿದ್ದರು. ತಂದೆ ಸಾವನ್ನಪ್ಪಿದಾಗ ಅಂತ್ಯಸಂಸ್ಕಾರ ನೆರವೇರಿಸಲು ಕ್ರಿಕೆಟರ್ ಶಮಿ ತಾವೇ ಭೂಮಿ ಅಗೆದಿದ್ದರು. ಈ ಚಿತ್ರ ತೆಗೆದವರು ಈಗ ಚಿತ್ರವನ್ನು ನನಗೆ ಕಳಿಸಿದ್ದಾರೆ ಎಂದು ಶಮಿ ಅವರು ಹಂಚಿಕೊಂಡಿದ್ದಾರೆ.

'ತಮ್ಮ ತಂದೆಗೆ ತಾವೇ ಸಮಾಧಿ ಅಗೆಯುವುದು ತುಂಬಾ ಕಷ್ಟದ ಗಳಿಗೆ ಎಂದಿರುವ ಶಮಿ ಈ ಫೋಟೋ ಕ್ಲಿಕ್ಕಿಸಿ, ತಮಗೆ ಕಳುಹಿಸಿದವರಿಗೆ ಧನ್ಯವಾದ ಹೇಳಿದ್ದಾರೆ. ಕೆಲ ಅಭಿಮಾನಿಗಳು ಶಮಿ ಅವರಿಗೆ ಸಂತಾಪ ಸೂಚಿಸಿ ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಬಾರದಿತ್ತು ಎಂದಿದ್ದಾರೆ.


ಈ ಹಿಂದೆ ಶಮಿ ತಮ್ಮ ತಂದೆ ಆಸ್ಪತ್ರೆಗೆ ದಾಖಲಾದಾಗ ಅವರ ಆರೋಗ್ಯದ ಬಗ್ಗೆ ಟ್ವೀಟ್ ಮಾಡಿದ್ದರು. ತಂದೆಯ ಶಸ್ತ್ರಚಿಕಿತ್ಸೆ, ಮೆಡಿಕಲ್ ರಿಪೋರ್ಟ್ ಮತ್ತಿತರ ವಿಷಯಗಳನ್ನು ಟ್ವಿಟ್ಟರ್‌ ಮೂಲಕ ಜನರೊಂದಿಗೆ ಹಂಚಿಕೊಂಡಿದ್ದರು.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+