ಡೆಲ್ಲಿ ತಂಡದಿಂದ ಡಿ ಕಾಕ್ ಔಟ್, ಮರ್ಲಾನ್ ಸ್ಯಾಮುಯೆಲ್ಸ್ ಇನ್
ನವದೆಹಲಿ, ಏಪ್ರಿಲ್ 27 : ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಕ್ವಿಂಟನ್ ಡಿ ಕಾಕ್ 10ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಹೊರ ಬಿದ್ದಿದ್ದಾರೆ.
ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಅವರ ಸ್ಥಾನಕ್ಕೆ ಐಪಿಎಲ್ 10ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಅನ್ ಸೋಲ್ಡ್ ಆಗಿದ್ದ ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಮರ್ಲಾನ್ ಸ್ಯಾಮುಯೆಲ್ಸ್ ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿದೆ.[ಡೆಲ್ಲಿ ನಾಯಕ ಜಹೀರ್ ಹಂಚಿಕೊಂಡ್ರು ಶುಭ ಸಮಾಚಾರ!]

ಕಳೆದ ತಿಂಗಳು ಮುಕ್ತಾಯವಾದ ನ್ಯೂಜಿಲೆಂಡ್ ಟೂರ್ನಿ ವೇಳೆ ಡಿ ಕಾಕ್ ತಮ್ಮ ಬಲಗೈ ಬೆರಳಿಗೆ ಗಾಯವಾಗಿತ್ತು. ಈ ಗಾಯದಿಂದ ಚೇತರಿಸಿಕೊಳ್ಳದ ಡಿ ಕಾಕ್ ಅವರು ಐಪಿಎಲ್ 17ನಿಂದ ಹೊರ ಹೋಗಿದ್ದಾರೆ.
ಇದರಿಂದ ಡೆಲ್ಲಿ ತಂಡವು ಮರ್ಲಾನ್ ಸ್ಯಾಮುಯೆಲ್ಸ್ ಅವರನ್ನು ಆಯ್ಕೆ ಮಾಡಿಕೊಂಡಿದ್ದು, ಇವರು ಸ್ಯಾಮುಯೆಲ್ಸ್ ಇವರೆಗೆ 71 ಟೆಸ್ಟ್, 187 ಏಕದಿನ, 55 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಹಾಗೂ 2013ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪುಣೆ ವಾರಿಯರ್ಸ್ ಪರ ಆಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications