ಹೈಲೈಟ್ಸ್ : ಯುವಿ ಕ್ವಿಕ್ 50, ನೆಹ್ರಾ ಏಕೈಕ 100 ವಿಕೆಟ್ ಟೇಕರ್!
ಹೈದರಾಬಾದ್, ಏಪ್ರಿಲ್ 06: ಐಪಿಎಲ್ 10ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 35 ರನ್ ಗಳಿಂದ ಸೋಲು ಕಂಡಿದೆ.
ಐಪಿಎಲ್ 2017ರ ಮೊದಲ ಪಂದ್ಯದಲ್ಲಿ ಯುವರಾಜ್ ಸಿಂಗ್ ಅಬ್ಬರ, ಅಫ್ಘಾನಿಸ್ತಾನದ ರಶೀದ್, ಇಂಗ್ಲೆಂಡಿನ ತೈಮುಲ್ ಗೆ ಚೊಚ್ಚಲ ಅನುಭವ ಮುಖ್ಯಾಂಶವಾಗಿತ್ತು.
ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ ಹೀಗಿದೆ
ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರು 27 ಎಸೆತಗಳಲ್ಲಿ 62ರನ್ ಚೆಚ್ಚಿ, ಹೈದರಾಬಾದ್ ತಂಡ ಬೃಹತ್ ಮೊತ್ತ ಪೇರಿಸಲು ನೆರವಾದರು. ಈ ಮೂಲಕ ಗಾಯಾಳುಗಳಿಂದ ತುಂಬಿರುವ ಆರ್ ಸಿಬಿ ತಂಡ, ಚೇಸ್ ಮಾಡಲು ಸಾಧ್ಯವಾಗದಷ್ಟು ರನ್ ಕಲೆ ಹಾಕಲು ಸಾಧ್ಯವಾಯಿತು. [ಟ್ವಿಟ್ಟರಲ್ಲಿ #ViratKohli ಬಳಸಿ, ಏನಾಗುವುದೋ ನೋಡಿ!]
ಯುವರಾಜ್ ಸಹಜವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು. ಚೊಚ್ಚಲ ಪಂದ್ಯವಾಡಿದ ಅಫ್ಘಾನಿಸ್ತಾನದ ರಶೀದ್ ಖಾನ್ ಅವರು ಮೊದಲ ಓವರ್ ನಲ್ಲೆ ವಿಕೆಟ್ ಕಿತ್ತರು.
ಹಿರಿಯ ಬೌಲರ್ ಆಶೀಶ್ ನೆಹ್ರಾ ಸತತ ಎರಡು ವಿಕೆಟ್ ಕಿತ್ತು ಹ್ಯಾಟ್ರಿಕ್ ಗಳಿಸುವ ಮಿಸ್ಸಾದರೂ ದಾಖಲೆ ಬರೆದರು. ಬೌಂಡರಿ ಬಳಿ ಡೇವಿಡ್ ವಾರ್ನರ್ ಕ್ಯಾಚ್ ಹಿಡಿದಿದ್ದು, ಒಂದೆರಡು ರನೌಟ್ ಗಳನ್ನು ಮರೆಯುವಂತಿಲ್ಲ. ಪಂದ್ಯದ ಪ್ರಮುಖಾಂಶಗಳು ಮುಂದಿವೆ ನೋಡಿ...

ಯುವರಾಜ್ ಸಿಂಗ್ ಅಬ್ಬರದ ಬ್ಯಾಟಿಂಗ್
* ಯುವರಾಜ್ ಸಿಂಗ್ ಅವರು ಭರ್ಜರಿ ಆಟವಾಡಿ 23 ಎಸೆತಗಳಲ್ಲಿ 51ರನ್ ಚೆಚ್ಚಿ, ವೈಯಕ್ತಿಕವಾಗಿ ಐಪಿಎಲ್ ನ ತ್ವರಿತ ಅರ್ಧಶತಕ ಬಾರಿಸಿದರು.
* ಅಂತಿಮವಾಗಿ ಯುವರಾಜ್ 27 ಎಸೆತಗಳಲ್ಲಿ 62 ರನ್(7x4, 3x6) ಚೆಚ್ಚಿದರು. ಸಿಕ್ಸ್ ಬಾರಿಸಿದ ನಂತರದ ಎಸೆತದಲ್ಲೆ ತೈಮುಲ್ ಮಿಲ್ಸ್ ಗೆ ಬೋಲ್ಡ್ ಔಟ್ ಆದರು.
* ಯುವರಾಜ್ ಸಿಂಗ್ ಅವರು ಅನಿಕೇತ್ ಚೌಧರಿ ಎಸೆತದಲ್ಲಿ ನೀಡಿದ್ದ ಕ್ಯಾಚನ್ನು ಎಸ್ ಅರವಿಂದ್ ಕೈ ಚೆಲ್ಲಿದ್ದು ದುಬಾರಿಯಾಯಿತು.

ಆರ್ ಸಿಬಿ ಸೋಲಿಗೆ ಕಾರಣ?
* ಸನ ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 207/4 ಸ್ಕೋರ್ ಮಾಡಿದು, ಅದರಲ್ಲಿ 17 ಬೌಂಡರಿ, 9 ಸಿಕ್ಸ್ ಗಳಿತ್ತು.
* ಆರ್ ಸಿಬಿ 19.4 ಓವರ್ ಗಳಲ್ಲಿ 172 ಸ್ಕೋರಿಗೆ ಆಲೌಟ್ ಆಗಿ 35 ರನ್ ಗಳ ಸೋಲು ಕಂಡಿದೆ.
* ಆರ್ ಸಿಬಿಯಲ್ಲಿ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಸರ್ಫರಾಜ್ ಖಾನ್ ಇಲ್ಲದೆ ಬ್ಯಾಟಿಂಗ್ ಶಕ್ತಿ ಕೊಂಚ ದುರ್ಬಲವಾಗಿತ್ತು. ಜೊತೆಯಾಟ ಕೊರತೆ ರನ್ ಚೇಸ್ ಗೆ ಮಾರಕವಾಯಿತು

ಗೇಲ್ ಹಾಗೂ ನೆಹ್ರಾ ಆಟ
* ಆರ್ ಸಿಬಿ ಪರ ಕ್ರಿಸ್ ಗೇಲ್ 32ರನ್ ಗಳಿಸಿ ಗರಿಷ್ಠ ವೈಯಕ್ತಿಕ ಮೊತ್ತ ದಾಖಲಿಸಿದರು.
* ಆರ್ ಸಿಬಿ ಚೇಸ್ ನಲ್ಲಿ 15 ಬೌಂಡರಿ, 5 ಸಿಕ್ಸರ್ ಗಳಿತ್ತು.
* ಆಶೀಶ್ ನೆಹ್ರಾ ಅವರು ಈ ಪಂದ್ಯದಲ್ಲಿ 2 ವಿಕೆಟ್ ಗಳಿಸಿ, ಐಪಿಎಲ್ ನಲ್ಲಿ 100 ವಿಕೆಟ್ ಪಡೆದ ಮೊದಲ ಎಡಗೈ ವೇಗಿ ಎನಿಸಿಕೊಂಡರು.

ತೈಮುಲ್ ಮಿಲ್ಸ್ ಹಾಗೂ ರಶೀದ್
* ಐಪಿಎಲ್ ಉದ್ಘಾಟನಾ ಪಂದ್ಯದ ಮೊದಲ ಎಸೆತವನ್ನು ಚೊಚ್ಚಲ ಪಂದ್ಯವಾಡಿದ ತೈಮುಲ್ ಮಿಲ್ಸ್ ಎಸೆದಿದ್ದು ವಿಶೇಷ. ಆದರೆ, ಬೌಲಿಂಗ್ ನಲ್ಲಿ ಸಾಧಾರಣ ಪ್ರದರ್ಶನ ನೀಡಿ 4-31-1 ವಿಕೆಟ್ ಪಡೆದರು.
* 18 ವರ್ಷ ವಯಸ್ಸಿನ ರಶೀದ್ ಖಾನ್ ಅವರು ಐಪಿಎಲ್ ಆಡಿದ ಮೊದಲ ಅಫ್ಘಾನಿಸ್ತಾನ ಕ್ರಿಕೆಟರ್ ಎನಿಸಿಕೊಂಡರು. 4 ಕೋಟಿ ರುಗೆ ಖರೀದಿಸಲ್ಪಟ್ತ ರಶೀದ್ ಇಂದಿನ ಪಂದ್ಯದಲ್ಲಿ ಲೆಗ್ ಸ್ಪಿನ್ ಮೂಲಕ 4 ಓವರ್ ಗಳಲ್ಲಿ 2/36 ಗಳಿಸಿದರು.

ಆರ್ ಸಿಬಿ ಪರ ಚಾಹಲ್
* ಐಪಿಎಲ್ 10ರ ಮೊದಲ 4 ಹಾಗೂ 6 ಎರಡನ್ನು ಡೇವಿಡ್ ವಾರ್ನರ್ ಅವರು ಮಿಲ್ಸ್ ಬೌಲಿಂಗ್ ನಲ್ಲಿ ಗಳಿಸಿದರು.
* ಆಸ್ಟ್ರೇಲಿಯಾದ ಮೊಯ್ಸಿಸ್ ಹೆನ್ರಿಕ್ಯೂಸ್ ಅವರು 37 ಎಸೆತಗಳಲ್ಲಿ 52ರನ್ (3X4, 2X6)ಗಳಿಸಿ ಉತ್ತಮ ಆಟ ಪ್ರದರ್ಶಿಸಿದರು.
* ಆರ್ ಸಿಬಿ ಪರ ಯಜುವೇಂದ್ರ ಚಾಹಲ್ ಮಿತವ್ಯಯಿ ಬೌಲರ್ ಎನಿಸಿಕೊಂಡು 4 ಓವರ್ ಗಳಲ್ಲಿ 1/22 ಮಾತ್ರ(5.50 ಸರಾಸರಿ) ನೀಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications