ಹೈದರಾಬಾದ್ ವಿರುದ್ಧ ಆರ್ ಸಿಬಿ ಆಡುವ XI ಏನಿರಬಹುದು?
ಬೆಂಗಳೂರು, ಏಪ್ರಿಲ್ 05: ಐಪಿಎಲ್ ನ ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 10ರ ಉದ್ಘಾಟನಾ ಪಂದ್ಯದಲ್ಲಿ ಏಪ್ರಿಲ್ 05ರಂದು ಹೈದರಾಬಾದಿನಲ್ಲಿ ಸೆಣೆಸಲಿದೆ.
ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ ಹೀಗಿದೆ
ಈ ಮೂಲಕ ಐಪಿಎಲ್ 2017ಕ್ಕೆ ಚಾಲನೆ ಸಿಗಲಿದೆ. ಗಾಯಾಳುಗಳಿಂದ ತುಂಬಿರುವ ಆರ್ ಸಿಬಿಯ ಆಡುವ XI ಏನಿರಬಹುದು ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ.[ಐಪಿಎಲ್-10: ಧೂಳಿಪಟವಾಗುತ್ತವಾ ಆ ಹತ್ತು ದಾಖಲೆಗಳು?]
ಆರಂಭಿಕ ಆಟಗಾರ ಕೆಎಲ್ ರಾಹುಲ್, ನಾಯಕ ವಿರಾಟ್ ಕೊಹ್ಲಿ, ಸರ್ಫರಾರ್ಜ್ ಖಾನ್, ಮಿಚೆಲ್ ಸ್ಟಾರ್ಕ್ ಹಾಗೂ ಎಬಿ ಡಿವಿಲಿಯರ್ಸ್ ಅನುಪಸ್ಥಿತಿಯಲ್ಲಿ ಆರ್ ಸಿಬಿ ತನ್ನ ಚೊಚ್ಚಲ ಪಂದ್ಯವಾಡುತ್ತಿದ್ದು, ಆಸ್ಟ್ರೇಲಿಯಾದ ಆಲ್ ರೌಂಡರ್ ಶೇನ್ ವಾಟ್ಸನ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ. [ಹೈದರಾಬಾದಿನಲ್ಲಿ ಐಪಿಎಲ್ 10 ಭರ್ಜರಿಯಾಗಿ ಆರಂಭ]
ಈ ಬಾರಿ ಆರ್ ಸಿಬಿ ತಂಡದ ಬೌಲಿಂಗ್ ಬಲಿಷ್ಠವಾಗಿದ್ದು, ಗಾಯಾಳುಗಳ ಸಮಸ್ಯೆಯಿಂದ ಬ್ಯಾಟ್ಸ್ ಮನ್ ಗಳ ಕೊರತೆ ಎದುರಿಸುತ್ತಿದೆ. ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್, ಕೇದಾರ್ ಜಾಧವ್ ಹಾಗೂ ಶೇನ್ ವಾಟ್ಸನ್ ಅವರು ಕೆಲ ಪಂದ್ಯಗಳ ತನಕ ಹೆಚ್ಚಿನ ಜವಾಬ್ದಾರಿ ಹೊರಬೇಕಾಗಿದೆ.

#1 ಕ್ರಿಸ್ ಗೇಲ್
ಜಮೈಕಾದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು ಈ ಬಾರಿಯೂ ಆರಂಭಿಕ ಆಟಗಾರರಾಗಿ ಆರ್ ಸಿಬಿಗೆ ಬಲ ತುಂಬಬೇಕಿದೆ. 10 ಸಾವಿರ ರನ್ ದಾಖಲೆ ಬರೆಯುವ ಉತ್ಸಾಹದಲ್ಲಿರುವ ಗೇಲ್ ಅವರು ಇನ್ನಿಂಗ್ಸ್ ಆರಂಭಿಸಬೇಕಾಗುತ್ತದೆ.

#2 ಶೇನ್ ವಾಟ್ಸನ್
ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್ ಅನುಪಸ್ಥಿತಿಯಲ್ಲಿ ಹಂಗಾಮಿ ನಾಯಕರಾಗಿರುವ ಶೇನ್ ವಾಟ್ಸನ್ ಅವರು ಆರಂಭಿಕ ಆಟಗಾರರಾಗಿ ಕಾಣಿಸಿಕೊಳ್ಳಬೇಕಿದೆ. ಸರ್ಫರಾಜ್ ಖಾನ್, ಕೆಎಲ್ ರಾಹುಲ್ ಕೂಡಾ ಇಲ್ಲದಿರುವುದು ವಾಟ್ಸನ್ ಮೇಲೆ ಹೆಚ್ಚಿನ ಹೊರೆ ಬೀಳಲಿದೆ.

#3 ಟ್ರಾವಿಸ್ ಹೆಡ್
ಕೊಹ್ಲಿ ಅನುಪಸ್ಥಿತಿಯಲ್ಲಿ ಮೇಲ್ಪಂಕ್ತಿಯಲ್ಲಿ ಆಡಲು ಸ್ಫೋಟಕ ಬ್ಯಾಟ್ಸ್ ಮನ್ ಟ್ರಾವಿಸ್ ಹೆಡ್ ಅವರಿಗೆ ಅವಕಾಶ ಸಿಗಲಿದೆ. ಎಬಿ ಡಿವಿಲಿಯರ್ಸ್ ಬರುವ ತನಕ ಆಸ್ಟ್ರೇಲಿಯಾದ ಎಡಗೈ ಬ್ಯಾಟ್ಸ್ ಮನ್ ಮೇಲೆ ಹೆಚ್ಚಿನ ಹೊರೆ ಬೀಳಲಿದೆ.

#4 ಕೇದಾರ್ ಜಾಧವ್
ಕೆಎಲ್ ರಾಹುಲ್ ಹಾಗೂ ಎಬಿ ಡಿವಿಲಿಯರ್ಸ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಆಗಿ ಕೇದಾರ್ ಜಾಧವ್ ಅವರು ಕಣಕ್ಕಿಳಿಯ ಬೇಕಿದೆ. ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರುವುದರಿಂದ ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆಯಿದೆ.

#5 ಮನ್ದೀಪ್ ಸಿಂಗ್
ಮನ್ದೀಪ್ ಸಿಂಗ್ - ಆರ್ ಸಿಬಿಯಲ್ಲಿರುವ ಬ್ಯಾಟಿಂಗ್ ಪವರ್ ನಡುವೆ ಆಡುವ ಹನ್ನೊಂದರಲ್ಲಿ ಸ್ಥಾನ ಸಿಗುವುದೆ ಕಷ್ಟವಾಗಿತ್ತು. ಈ ಬಾರಿ ನಾಲ್ಕನೇ ಸ್ಥಾನದಲ್ಲಿ ಆಡುವ ಸಾಧ್ಯತೆಯಿದೆ.

#6 ಪವನ್ ನೇಗಿ
ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಆಲ್ ರೌಂಡರ್ ಪವನ್ ನೇಗಿ ಅವರು ಆಡುವ XI ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಆರ್ ಸಿಬಿ ಪರ ಇದು ಇವರ ಚೊಚ್ಚಲ ಸೀಸನ್ ಆಗಿದ್ದು, ಉತ್ತಮ ಅನುಭವ ಹೊಂದಿದ್ದಾರೆ.

#7 ಸ್ಟುವರ್ಟ್ ಬಿನ್ನಿ
ಕರ್ನಾಟಕ ಪರ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಅವರು ಮತ್ತೊಮ್ಮೆ ಟೀಂ ಇಂಡಿಯಾ ಸೇರಲು ಹೆಚ್ಚಿನ ರೀತಿಯಲ್ಲಿ ಐಪಿಎಲ್ ಬಳಸಿಕೊಳ್ಳಬೇಕಿದೆ.

#8 ಇಕ್ಬಾಲ್ ಅಬ್ದುಲ್ಲಾ
ಎಡಗೈ ಸಾಂಪ್ರದಾಯಿಕ ಸ್ಪಿನ್ನರ್ ಇಕ್ಬಾಲ್ ಅಬ್ದುಲ್ಲಾ ಅವರು ತಂಡದ ಸ್ಪಿನ್ ವಿಭಾಗದಲ್ಲಿ ಮೊದಲ ಪಂದ್ಯದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

#9 ಯಜುವೇಂದ್ರ ಚಾಹಲ್
ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ಕಳೆದ ಬಾರಿ ಐಪಿಎಲ್ ಹಾಗೂ ಇತ್ತೀಚಿನ ಇಂಗ್ಲೆಂಡ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕೊಹ್ಲಿ ಅವರ ನೆಚ್ಚಿನ ವಿಕೆಟ್ ಪಡೆಯುವ ಬೌಲರ್ ಎನಿಸಿಕೊಂಡಿದ್ದಾರೆ.

#10 ಎಸ್ ಅರವಿಂದ್
ಕರ್ನಾಟಕ ಮೂಲದ ಎಡಗೈ ವೇಗಿ ಶ್ರೀನಾಥ್ ಅರವಿಂದ್ ಅವರು ತಂಡದಲ್ಲಿ ಮುಖ್ಯ ಬೌಲರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.ಆರ್ ಸಿಬಿ ಪರ ಆಡಿದ ಅನುಭವ ಹೊಂದಿರುವ ಅರವಿಂದ್ ಅವರು, ವಿಕೆಟ್ ಪಡೆಯುವ ಎಲ್ಲಾ ತಂತ್ರಗಳನ್ನು ಬತ್ತಳಿಕೆಯಲ್ಲಿ ಹೊಂದಿದ್ದಾರೆ.

#11 ತೈಮುಲ್ ಮಿಲ್ಸ್
ಟಿ20 ಸ್ಪೆಷಲಿಸ್ಟ್ ವೇಗಿ ಎನಿಸಿಕೊಂಡಿರುವ ತೈಮುಲ್ ಮಿಲ್ಸ್ ಅವರು ಅತ್ಯಂತ ಹೆಚ್ಚಿನ ಮೊತ್ತಕ್ಕೆ ಆರ್ ಸಿಬಿ ಖರೀದಿಸಿದ್ದು, ಈ ಬಾರಿ ತಂಡದ ಪ್ರಮುಖ ವೇಗಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications