Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಖ್ಯಾಂಶಗಳು: ಸ್ಟೀವ್ ಸ್ಮಿತ್ ಭರ್ಜರಿ ಆಟ, ತಾಹೀರ್ ಸ್ಪಿನ್ ಜಾದೂ

ಪುಣೆ, ಏಪ್ರಿಲ್ 07: ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡ ತನ್ನ ತವರು ನೆಲದಲ್ಲಿ ಮೊದಲ ಬಾರಿಗೆ ಗೆಲುವಿನ ನಗೆ ಬೀರಿದೆ. ಎರಡು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಕೊನೆ ಓವರ್ ಥ್ರಿಲ್ಲರ್ ನಲ್ಲಿ ಪುಣೆ ತಂಡ ಸೋಲಿಸಿದೆ.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಐಪಿಎಲ್ 10ರ ಎರಡನೇ ಪಂದ್ಯ ರೋಚಕ ಅಂತ್ಯ ಕಂಡಿದ್ದು, ಸ್ಮಿತ್ ನಾಯಕತ್ವದಲ್ಲಿ ಪುಣೆ ಶುಭಾರಂಭ ಮಾಡಿದೆ. ಪಂದ್ಯದ ಮುಖ್ಯಾಂಶಗಳು ಇಲ್ಲಿದೆ.[ಸರಿಯಾಗಿ ಚೆಚ್ಚಿಸಿಕೊಂಡ್ರೂ ದಾಖಲೆ ಬರೆದ ವೇಗಿ ದಿಂಡಾ!]

ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 184/8 ಸ್ಕೋರ್ ಮಾಡಿತ್ತು. ಪುಣೆ ತಂಡ ಮೂರು ವಿಕೆಟ್ ಕಳೆದುಕೊಂಡು ಈ ಟಾರ್ಗೆಟ್ ದಾಟಿ 187/3 ಸ್ಕೋರ್ ಮಾಡಿ ಗೆಲುವಿನ ನಗೆ ಬೀರಿತು.[ಪಂದ್ಯದ ವರದಿ ಇಲ್ಲಿ ಓದಿ]

ಪುಣೆ ಪರ ನಾಯಕ ಸ್ಟೀವ್ ಸ್ಮಿತ್ 84ರನ್(54 ಎಸೆತಗಳು) ಗಳಿಸಿ ಅಜೇಯರಾಗಿ ಉಳಿದು ಗೆಲುವಿನ ದಡ ಮುಟ್ಟಿಸಿದರು. ರನ್ ಚೇಸ್ ನಲ್ಲಿ ರಹಾನೆ 60ರನ್ (34 ಎಸೆತಗಳು) ಗಳಿಸಿ ಉತ್ತಮ ಅಡಿಪಾಯ ಹಾಕಿದರು. ಬೆನ್ ಸ್ಟೋಕ್ಸ್ 14 ಎಸೆತಗಳಲ್ಲಿ 21ರನ್ ಗಳಿಸಿದರು.

ನಾಯಕನಾಗಿ ಮೊದಲ ಗೆಲುವು

ನಾಯಕನಾಗಿ ಮೊದಲ ಗೆಲುವು

* ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡದ ನಾಯಕನಾಗಿ ಸ್ಟೀವ್ ಸ್ಮಿತ್ ಅವರಿಗೆ ಇದು ಮೊದಲ ಗೆಲುವಾಗಿದೆ.
* 180 ಪ್ಲಸ್ ರನ್ ಗಳಿಸಿ ಇದುವರೆವಿಗೂ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಸೋಲು ಕಂಡಿರಲಿಲ್ಲ. ಇದು ಮೊದಲ ಸೋಲು.
* ಮಹಾರಾಷ್ಟ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಪುಣೆಗೆ ಮೊದಲ ಜಯ.

ಸ್ಮಿತ್ ಗೆ ಸಿಕ್ಕಿತ್ತು ಜೀವದಾನ

ಸ್ಮಿತ್ ಗೆ ಸಿಕ್ಕಿತ್ತು ಜೀವದಾನ

* ಸ್ಮಿತ್ ಅವರು 36ರನ್ ಗಳಿಸಿದ್ದಾಗ ಮಿಚೆಲ್ ಮೆಕ್ ಕ್ಲೆನೆಗನ್ ಬೌಲಿಂಗ್ ನಲ್ಲಿ ನೀಡಿದ್ದ ಕ್ಯಾಚನ್ನು ನಿತಿಶ್ ರಾಣಾ ಕೈ ಚೆಲ್ಲಿದರು.
* ಸ್ಮಿತ್ 54 ಎಸೆತಗಳಲ್ಲಿ 84 ರನ್ ಗಳಿಸಿ 7 ಬೌಂಡರಿ ಹಾಗು 3 ಸಿಕ್ಸರ್ ಸಿಡಿಸಿ ಅಜೇಯರಾಗಿ ಉಳಿದರು.
* ಕೊನೆ ಓವರ್ ನಲ್ಲಿ 13 ರನ್ ಬೇಕಿತ್ತು. ಪೊಲ್ಲಾರ್ಡ್ ಬೌಲಿಂಗ್ ಎದುರಿಸಲು ಎಂಎಸ್ ಧೋನಿ ಸ್ಟ್ರೈಕ್ ನಲ್ಲಿದರು. ನಂತರ ಸ್ಟ್ರೈಕ್ ಗೆ ಬಂದ ಸ್ಮಿತ್ ಸತತ 2 ಸಿಕ್ಸ್ ಸಿಡಿಸಿ ಪಂದ್ಯ ಗೆಲ್ಲಿಸಿದರು.

ಅಶೋಕ್ ದಿಂಡಾ ದಾಖಲೆ

ಅಶೋಕ್ ದಿಂಡಾ ದಾಖಲೆ

ರೈಸಿಂಗ್ ಪುಣೆ ಸೂಪರ್ ಜೈಂಟ್ ಪರ ಅಶೋಕ್ ದಿಂಡಾ ಕೊನೆ ಓವರ್ ಎಸೆದು 30ರನ್(1 ಬೈ ಸೇರಿ) ನೀಡಿ ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ 20ನೇ ಓವರ್ ದಾಖಲೆ ಬರೆದರು.
* ಈ ಪಂದ್ಯದ ಸ್ಪೆಲ್ ಸೇರಿದಂತೆ 4 ಬಾರಿ ಐಪಿಎಲ್ ನಲ್ಲಿ 50 ಪ್ಲಸ್ ರನ್ ಕೊಟ್ಟಿದ್ದಾರೆ. 0/57 ಈ ಪಂದ್ಯದಲ್ಲಿ ಚೆಚ್ಚಿಸಿಕೊಂಡರು.
* ಹಾರ್ದಿಕ್ ಪಾಂಡ್ಯ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದರು. 6, 6, 6, 4, 6, 1 wide (run out), 1 bye

ಪುಣೆ ರನ್ ಚೇಸಿಂಗ್ ಸೂಪರ್

ಪುಣೆ ರನ್ ಚೇಸಿಂಗ್ ಸೂಪರ್

* ರೈಸಿಂಗ್ ಪುಣೆ ಸೂಪರ್ ಜೈಂಟ್ ಪರ ಲೆಗ್ ಸ್ಪಿನ್ನರ್ ಇಮ್ರಾನ್ ತಾಹೀರ್ ಅವರು 4 ಓವರ್ ಗಳಲ್ಲಿ 3/28 ಗಳಿಸಿ ಉತ್ತಮ ಪ್ರದರ್ಶನ ನೀಡಿದರು.
* ಮುಂಬೈ ಇಂಡಿಯನ್ಸ್ 12 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿತು.
* ರೈಸಿಂಗ್ ಪುಣೆ ಸೂಪರ್ ಜೈಂಟ್ 18 ಬೌಂಡರಿ ಹಾಗೂ 6 ಸಿಕ್ಸರ್ ಗಳಿಸಿತು

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+