ಸ್ಮಿತ್ ಭರ್ಜರಿ ಆಟ, ಮುಂಬೈ ವಿರುದ್ಧ ಪುಣೆಗೆ ಜಯ
ಪುಣೆ, ಏಪ್ರಿಲ್ 06: ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯ ಪ್ರೇಕ್ಷಕರನ್ನು ಸಕತ್ತಾಗಿ ರಂಜಿಸಿದೆ.
ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 184/8 ಸ್ಕೋರ್ ಮಾಡಿತ್ತು. ಪುಣೆ ತಂಡ ಮೂರು ವಿಕೆಟ್ ಕಳೆದುಕೊಂಡು ಈ ಟಾರ್ಗೆಟ್ ದಾಟಿ 187/3 ಸ್ಕೋರ್ ಮಾಡಿ ಗೆಲುವಿನ ನಗೆ ಬೀರಿದೆ. [ಮುಖ್ಯಾಂಶಗಳು: ಸ್ಟೀವ್ ಸ್ಮಿತ್ ಭರ್ಜರಿ ಆಟ, ತಾಹೀರ್ ಸ್ಪಿನ್ ಜಾದೂ]
ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ
ಪುಣೆ ಪರ ನಾಯಕ ಸ್ಟೀವ್ ಸ್ಮಿತ್ 84ರನ್(54 ಎಸೆತಗಳು) ಗಳಿಸಿ ಅಜೇಯರಾಗಿ ಉಳಿದು ಗೆಲುವಿನ ದಡ ಮುಟ್ಟಿಸಿದರು. ರನ್ ಚೇಸ್ ನಲ್ಲಿ 60ರನ್ (34 ಎಸೆತಗಳು) ಗಳಿಸಿ ಉತ್ತಮ ಅಡಿಪಾಯ ಹಾಕಿದರು. ಬೆನ್ ಸ್ಟೋಕ್ಸ್ 14 ಎಸೆತಗಳಲ್ಲಿ 21ರನ್ ಗಳಿಸಿದರು.
ಕಳೆದ ಸೀಸನ್ ನಿಂದ ಆಡುತ್ತಿರುವ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡ ಕಳೆದ ಬಾರಿ ಏಳನೇ ಸ್ಥಾನಕ್ಕೆ ಕುಸಿದಿತ್ತು. ಈ ಬಾರಿ ಯಶಸ್ಸಿಗಾಗಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ. [ಸರಿಯಾಗಿ ಚೆಚ್ಚಿಸಿಕೊಂಡ್ರೂ ದಾಖಲೆ ಬರೆದ ವೇಗಿ ದಿಂಡಾ! ]

ಟೀಂ ಮ್ಯಾನೇಜ್ಮೆಂಟ್ ಕೊನೆಗೆ ಸಂಖ್ಯಾಶಾಸ್ತ್ರಕ್ಕೂ ಮೊರೆ ಹೊಕ್ಕು ಜೈಂಟ್ಸ್ ಬದಲಿಗೆ ಜೈಂಟ್ ಎಂದು ಬಳಕೆ ಮಾಡುತ್ತಿದೆ.
ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಅವರಿಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ.
ರೈಸಿಂಗ್ ಪುಣೆ ತಂಡದಲ್ಲಿ ಇಬ್ಬರು ಲೆಗ್ ಸ್ಪಿನ್ನರ್ ಗಳನ್ನು ಸೇರಿಸಿಕೊಳ್ಳಲಾಗಿದೆ. ಆಡಂ ಝಂಪಾ ಹಾಗೂ ಇಮ್ರಾಹ್ ತಾಹೀರ್ ತಂಡದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಪಾಂಡ್ಯ ಬ್ರದರ್ಸ್ ಗಳಾದ ಹಾರ್ದಿಕ್ ಹಾಗೂ ಕೃನಾಲ್ ಆಡುತ್ತಿದ್ದಾರೆ.
ಆಡುವ ಹನ್ನೊಂದು ತಂಡ:
ಪಿಚ್ ಹೇಗಿದೆ?:
(ಒನ್ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications