ಮುಂಬೈ vs ಪುಣೆ: ಧೋನಿ ವಿರುದ್ಧ ಹರ್ಭಜನ್ ಆಟ ನಡೆಯುವುದೇ?
ಪುಣೆ, ಏಪ್ರಿಲ್ 06: ಐಪಿಎಲ್ 10ರ ಎರಡನೇ ಪಂದ್ಯದಲ್ಲಿ ಏಪ್ರಿಲ್ 06ರಂದು ರಾತ್ರಿ ಮುಂಬೈ ಇಂಡಿಯನ್ಸ್ ವಿರುದ್ಧ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡ ಸೆಣಸಲಿದೆ. ಧೋನಿ ವಿರುದ್ಧ ಹರ್ಭಜನ್, ಸ್ಮಿತ್ ವಿರುದ್ಧ ಬೂಮ್ರಾ ಆಟ ನೋಡಿ ಆನಂದಿಸಿ. ಯಾವೆಲ್ಲ ಟಾಪ್ 5 ಆಟಗಾರರ ನಡುವಿನ ಸೆಣಸಾಟ ನಡೆಯಬಹುದು ಮುಂದೆ ಓದಿ...
ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ
ಕಳೆದ ಸೀಸನ್ ನಿಂದ ಆಡುತ್ತಿರುವ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡ ತನ್ನ ಯಶಸ್ಸಿಗಾಗಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ. ಟೀಂ ಮ್ಯಾನೇಜ್ಮೆಂಟ್ ಕೊನೆಗೆ ಸಂಖ್ಯಾಶಾಸ್ತ್ರಕ್ಕೂ ಮೊರೆ ಹೊಕ್ಕು ಜೈಂಟ್ಸ್ ಬದಲಿಗೆ ಜೈಂಟ್ ಎಂದು ಬಳಕೆ ಮಾಡುತ್ತಿದೆ.
ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಅವರಿಗೆ ಕ್ಯಾಪ್ಟನ್ ಪಟ್ಟ ಕಟ್ಟಲಾಗಿದೆ. ಐಪಿಎಲ್ ಹರಾಜಿನಲ್ಲಿ 14.5 ಕೋಟಿ ರು ನೀಡಿ ಇಂಗ್ಲೆಂಡಿನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ರನ್ನು ಕರೆ ತರಲಾಗಿದೆ.
ಇನ್ನೊಂದೆಡೆ ಎರಡು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮ ಸೇರಿದಂತೆ ಕೆಲ ಹಿರಿಯ ಆಟಗಾರರ ಗಾಯದ ಸಮಸ್ಯೆ ಕಾಡುತ್ತಿದೆ. ಮಿಕ್ಕಂತೆ ಮುಂಬೈ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ...

ಸ್ಮಿತ್ ವಿರುದ್ಧ ಬೂಮ್ರಾ
ಆಸ್ಟ್ರೇಲಿಯಾದ ಬ್ಯಾಟಿಂಗ್ ಶಕ್ತಿ ಸ್ಟೀವ್ ಸ್ಮಿತ್ ಭರ್ಜರಿ ಲಯದಲ್ಲಿದ್ದು, ನಾಯಕತ್ವದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಪುಣೆ ತಂಡದ ಬ್ಯಾಟಿಂಗ್ ಬಲವಾಗಿ ಕಾಣಿಸಿಕೊಳ್ಳಬೇಕಿದ್ದು, ಇವರಿಗೆ ಬ್ರೇಕ್ ಹಾಕಲು ಯಾರ್ಕರ್ ತಜ್ಞ ಜಸ್ ಪ್ರೀತ್ ಬೂಮ್ರಾ ಕಾಯುತ್ತಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಡೆತ್ ಓವರ್ ಗಳಲ್ಲಿ ಬೌಲಿಂಗ್ ಮಾಡುವ ಪರಿಣಿತಿ ಹೊಂದಿರುವ ಬೂಮ್ರಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ

ಧೋನಿ ವಿರುದ್ಧ ಹರ್ಭಜನ್
ನಾಯಕತ್ವದ ಹೊರೆ ಇಳಿಸಿಕೊಂಡಿರುವ ಎಂಎಸ್ ಧೋನಿ ಅವರು ಈಗ ಉತ್ತಮ ಲಯದಲ್ಲಿದ್ದು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಮುಂಬೈ ತಂಡಕ್ಕೆ ಮತ್ತೊಮ್ಮೆ ಕಪ್ ಗೆಲ್ಲಿಸಿಕೊಡಲು ಹರ್ಭಜನ್ ಸಿಂಗ್ ಅವರು ಪ್ರಮುಖ ಅಸ್ತ್ರವಾಗಿದ್ದಾರೆ. ಇಬ್ಬರು ಹಿರಿಯ ಆಟಗಾರರ ನಡುವಿನ ಸ್ಪರ್ಧೆ ಕುತೂಹಲಕಾರಿಯಾಗಿದೆ.

ರೋಹಿತ್ ಹಾಗೂ ದಿಂಡಾ
ರೋಹಿತ್ ಶರ್ಮ ಹಾಗೂ ಅಶೋಕ್ ದಿಂಡಾ ನಡುವಿನ ಕದನ ಇನ್ನಷ್ಟು ಕುತೂಹಲಕಾರಿಯಾಗಿದೆ. ರೋಹಿತ್ ಅವರು ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಮಿಂಚಲು ಕಾಯುತ್ತಿದ್ದು, ಸ್ಫೋಟಕ ಬ್ಯಾಟಿಂಗ್ ನಿರೀಕ್ಷಿಸಬಹುದು ಅಶೋಕ್ ದಿಂಡಾ ಕೂಡಾ ತಮ್ಮ ಸ್ಲೋ ಬೌಲಿಂಗ್ ಮೂಲಕ ಬ್ಯಾಟ್ಸ್ ಮನ್ ಗಳನ್ನು ಕಾಡಲು ಕಾದಿದ್ದಾರೆ.

ಪೊಲ್ಲಾರ್ಡ್ ಹಾಗೂ ಝಂಪಾ
ಕಿರಾನ್ ಪೊಲ್ಲಾರ್ಡ್ ಹಾಗೂ ಆಡಂ ಝಂಪಾ ನಡುವಿನ ಸ್ಪರ್ಧೆ ನೋಡಿ. ರವಿಚಂದ್ರನ್ ಅಶ್ವಿನ್ ಅವರ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾದ ಯುವ ಸ್ಪಿನ್ನರ್ ಆಡಂ ಝಂಪಾ ಮೇಲೆ ಹೆಚ್ಚಿನ ಹೊರೆ ಇದೆ. ಪೊಲ್ಲಾರ್ಡ್ ಅವರು ಈ ಬಾರಿ ಕೂಡಾ ತಂಡವನ್ನು ಕಪ್ ಗೆಲ್ಲುವ ಹಂತಕ್ಕೆ ಕರೆದೊಯ್ಯಲು ಸಹಕಾರಿಯಾಗಲಿದ್ದಾರೆ.

ಬೆನ್ ಸ್ಟೋಕ್ ಹಾಗೂ ಮಾಲಿಂಗ
ಇಂಗ್ಲೆಂಡಿನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರು ಈ ಬಾರಿ ಐಪಿಎಲ್ ನಲ್ಲಿ ಭಾರಿ ಮೊತ್ತಕ್ಕೆ ಹರಾಜಾದ ಆಟಗಾರರ ಪೈಕಿ ಒಬ್ಬರೆನಿಸಿದ್ದಾರೆ. ಜತೆಗೆ ಉತ್ತಮವಾಡಿ ಆಡುವ ಒತ್ತಡದಲ್ಲಿದ್ದಾರೆ. ಗಾಯದ ಸಮಸ್ಯೆಯಿಂದ ಹೊರ ಬಂದಿರುವ ಮುಂಬೈನ ಪ್ರಮುಖ ವೇಗಿ ಲಸಿತ್ ಮಾಲಿಂಗಾ ಅವರು ಮತ್ತೊಮ್ಮೆ ಮುಂಬೈಗೆ ಆಸರೆಯಾಗುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications