ಡೆಲ್ಲಿ ವಿರುದ್ಧ ಮುಂಬೈ ಗೆಲುವಿಗೆ ಕಾರಣವಾದ ಅಂಶಗಳೇನು?
ಮುಂಬೈ, ಏಪ್ರಿಲ್ 23: ಮುಂಬೈ ಇಂಡಿಯನ್ಸ್ ತಂಡ ತನ್ನ ಮೊದಲ ಪಂದ್ಯ ಸೋತ ಬಳಿಕ ಸತತ ಆರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಐಪಿಎಲ್ 10ರಲ್ಲಿ ಮಿಂಚುತ್ತಿದೆ. ಡೆಲ್ಲಿ ತಂಡ ಗೆಲುವಿನ ಹೊಸ್ತಿಲಿಗೆ ಬಂದರೂ ಸೋಲು ಕಾಣಲು ಕಾರಣವಾಗಿದ್ದು ಮುಂಬೈನ ಸಂಘಟಿತ ಹೋರಾಟ, ಡೆಲ್ಲಿ ಬ್ಯಾಟ್ಸ್ ಮನ್ ಗಳ ಬ್ಯಾಟಿಂಗ್ ವೈಫಲ್ಯ ಎನ್ನಬಹುದು.
ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ, ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು. ಆನಂತರ, ಡೆಲ್ಲಿ ಡೇರ್ ಡೆವಿಲ್ಸ್ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 128 ಮೊತ್ತ ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು.[ಮುಂಬೈ ಇಂಡಿಯನ್ಸ್ ವೇಳಾಪಟ್ಟಿ]

ಆದರೆ, ದಕ್ಷಿಣ ಆಫ್ರಿಕಾದ ವೇಗಿಗಳಾದ ಕಾಗಿಸೋ ರಬಾಡಾ (44), ಕ್ರಿಸ್ ಮೋರಿಸ್ (ಅಜೇಯ 52) ಆರ್ಭಟ ಎಲ್ಲರ ಮೆಚ್ಚುಗೆ ಗಳಿಸಿತು. ಭರ್ಜರಿ ಹೋರಾಟ ಸೋಲಿನ ಅಂತರವನ್ನು ಕೇವಲ 14 ರನ್ ಗಳಿಗೆ ತಗ್ಗಿಸಿದ್ದಷ್ಟೇ ಸಾಧನೆಯಾಯಿತು.[ಐಪಿಎಲ್ 2017: ಅಂಕಪಟ್ಟಿ]
* ಐಪಿಎಲ್ 10ರಲ್ಲಿ ಮೊದಲ ಪಂದ್ಯವನ್ನು ಕಳೆದುಕೊಂಡ ಬಳಿಕ ಮುಂಬೈ ತಂಡ, ಪುಣೆ ಸೂಪರ್ ಜೈಂಟ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಸತತ ಆರನೇ ಜಯ ಗಳಿಸಿತು.
* ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಅಗ್ರಸ್ಥಾನಕ್ಕೇರಿದೆ.
* ಡೆಲ್ಲಿ ವಿರುದ್ದ ಮೊದಲ ಸ್ಪೆಲ್ ನಲ್ಲಿ ಎರಡು ಓವರ್ ಗಳಲ್ಲಿ 3/7 ಗಳಿಸಿ ಮಾರಕ ಬೌಲಿಂಗ್ ಪ್ರದರ್ಶಿಸಿದ ನ್ಯೂಜಿಲೆಂಡ್ ನ ಮಿಚೆಲ್ ಮೆಕ್ಲೆನಗನ್ ಅವರು ಅಂತಿಮವಾಗಿ ನಾಲ್ಕು ಓವರ್ ಗಳಾಲ್ಲಿ 3/24 ಗಳಿಸಿ ಪಂದ್ಯ ಶ್ರೇಷ್ಠ ಎನಿಸಿಕೊಂಡರು.
* ಶ್ರೀಲಂಕಾದ ಲಸಿತ್ ಮಾಲಿಂಗಾ ಬದಲಿಗೆ ತಂಡ ಸೇರಿದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್ ಅವರು ಮೊದಲ ಪಂದ್ಯದಲ್ಲಿ ಮೇಡನ್ ಎಸೆದರು. ನಾಲ್ಕು ಓವರ್ ಗಳಲ್ಲಿ 0/23 ಗಳಿಸಿದರು.
* 6.3 ಓವರ್ ಗಳಲ್ಲಿ 24/6 ಸ್ಕೋರ್ ಮಾಡಿದ್ದ ಡೆಲ್ಲಿ ತಂಡ 20 ಓವರ್ ಗಳಲ್ಲ 128/7 ಸ್ಕೋರ್ ಮಾಡಿದ್ದೇ ಸಾಧನೆ.
* ಕಾಗಿಸೋ ರಬಾಡಾ (44), ಕ್ರಿಸ್ ಮೋರಿಸ್ (ಅಜೇಯ 52) ಏಳನೇ ವಿಕೆಟ್ ಗೆ 91 ರನ್ ಜೊತೆಯಾಟ ಪ್ರದರ್ಶಿಸಿ ಗಮನ ಸೆಳೆದರು.
* 2011 ರಿಂದ ಇಲ್ಲಿ ತನಕ ಡೆಲ್ಲಿ ಡೇರ್ ಡೆವಿಲ್ಸ್ ತಂಡ ವಾಂಖೆಡೆ ಸ್ಟೇಡಿಯಂನಲ್ಲಿ ಗೆಲುವು ಸಾಧಿಸಿಲ್ಲ
* 2011ರಿಂದ ಇಲ್ಲಿ ತನಕ 24/6 ಡೆಲ್ಲಿ ತಂಡದ ಸ್ಕೋರ್ ಎರಡನೇ ಅತ್ಯಂತ ಕಳಪೆ ಸ್ಟಾರ್ಟ್ (ಮೊದಲ 6 ಓವರ್ ಲೆಕ್ಕ) ಆಗಿದೆ. ಡೆಕ್ಕನ್ ಚಾರ್ಜರ್ಸ್ ವಿರುದ್ದ ಕೇರಳ ಟಸ್ಕರ್ಸ್ 11/6 ಅತ್ಯಂತ ಕಳಪೆ ಸ್ಕೋರ್ ಆಗಿದೆ.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: IPL 2017: Match 25 Highlights: MI Vs DD
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications