For Quick Alerts
ALLOW NOTIFICATIONS  
For Daily Alerts
 

ಕುಸಿದ ಡೆಲ್ಲಿ: ಮುಂಬೈ ಇಂಡಿಯನ್ಸ್ ತಂಡಕ್ಕೆ 14 ರನ್ ಜಯ

ಬ್ಯಾಟಿಂಗ್ ವೈಫಲ್ಯದಿಂದ ಕಂಗೆಟ್ಟ ಡೆಲ್ಲಿ ಡೇರ್ ಡೆವಿಲ್ಸ್ ತಂಡ, ಆರಂಭಿಕರೂ ಸೇರಿ ನಾಲ್ವರು ಬ್ಯಾಟ್ಸ್ ಮನ್ ಗಳಿಂದ ಸಿಂಗಲ್ ಡಿಜಿಟ್ ಮೊತ್ತ, ಮೂವರು ಆಟಗಾರರಿಂದ ಶೂನ್ಯ ಸಂಪಾದನೆ.

ಮುಂಬೈ, ಏಪ್ರಿಲ್ 22: ಮಧ್ಯಮ ವೇಗಿಗಳಾದ ಮೆಕ್ಲೆನಾಘನ್ ಹಾಗೂ ಜಸ್ ಪ್ರೀತ್ ಬುಮ್ರಾ ಅವರ ಆಕ್ರಮಣಕಾರಿ ಬೌಲಿಂಗ್ ನೆರವಿನಿಂದಾಗಿ, ಮುಂಬೈ ಇಂಡಿಯನ್ಸ್ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಶನಿವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ 14 ರನ್ ಅಂತರದಲ್ಲಿ ಗೆಲುವು ದಾಖಲಿಸಿತು.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ, ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು. ಆನಂತರ, ಡೆಲ್ಲಿ ಡೇರ್ ಡೆವಿಲ್ಸ್ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 128 ಮೊತ್ತ ಗಳಿಸಿತು.[ಸ್ಕೋರ್ ವಿವರ]

IPL 2017: Match 25: Mumbai Indians wins against Delhi Daredevils

ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು ಆರಂಭಿಕರಾದ ಪಾರ್ಥೀವ್ ಪಟೇಲ್ ಅವರನ್ನು ಬೇಗನೇ ಕಳೆದುಕೊಂಡಿತು. ಅದರ ಜತೆಗೆ, ಮಧ್ಯಮ ಕ್ರಮಾಂಕದ ನಿತೀಶ್ ರಾಣಾ, ನಾಯಕ ರೋಹಿತ್ ಶರ್ಮಾ, ಕ್ರುನಾಲ್ ಪಾಂಡ್ಯ, ಹರ್ಭಜನ್ ಸಿಂಗ್ ಅವರು ಬೇಗನೇ ವಿಕೆಟ್ ಒಪ್ಪಿಸಿದರು.[ಅಂಕ ಪಟ್ಟಿ]

ಇವರೆಲ್ಲರೂ 20ರೊಳಗೆ ವೈಯಕ್ತಿಕ ಮೊತ್ತ ದಾಖಲಿಸಿದವರೇ. ಆರಂಭಿಕ ಬಟ್ಲರ್ (28), ಕೀರನ್ ಪೊಲಾರ್ಡ್ (26), ಹಾರ್ದಿಕ್ ಪಾಂಡ್ಯ (24) ಮಾತ್ರ ಇಪ್ಪತ್ತರ ಗಡಿ ದಾಟಿದರಷ್ಟೇ.

ಹೀಗೆ, ಸತತ ಬ್ಯಾಟಿಂಗ್ ವೈಫಲ್ಯದಿಂದಾಗಿ, ಮುಂಬೈ ತಂಡ 142 ರನ್ ಗಳಿಸಿತು.

ಮುಂಬೈ ತಂಡದ ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ತಂಡವು, ಮುಂಬೈಗಿಂತ ಕಳಪೆ ಆಟವಾಡಿತು. ಆರಂಭಿಕರಾದ ಸಂಜು ಸ್ಯಾಮ್ಸನ್, ಆದಿತ್ಯ ತಾರೆ, ಕರುಣ್ ನಾಯರ್, ಶ್ರೇಯಸ್ ಅಯ್ಯರ್, ಕೋರಿ ಆ್ಯಂಡರ್ಸನ್, ರಿಷಬ್ ಪಂತ್ ಸಹ ವೈಫಲ್ಯಕ್ಕೊಳಗಾದರು. ಇವರಲ್ಲಿ ಸ್ಯಾಮ್ಸನ್, ಕರುಣ್, ಅಯ್ಯರ್ ಕ್ರಮವಾಗಿ 9, 5, 6 ರನ್ ಗಳಿಸಿದರೆ, ಉಳಿದವರು ಸೊನ್ನೆ ಸುತ್ತಿದರು.

ಆದರೆ, ಅಂತಿಮ ಕ್ರಮಾಂಕದಲ್ಲಿ ಕಾಗಿಸೋ ರಬಾಡಾ (44), ಕ್ರಿಸ್ ಮೋರಿಸ್ (ಅಜೇಯ 52) ಮಾತ್ರ ಆರ್ಭಟಿಸಿದರು. ಆದರೆ, ಅವರ ಆರ್ಭಟ ತಂಡಕ್ಕೆ ಗೆಲುವು ತರಲಿಲ್ಲ. ಆದರೂ, ಭರ್ಜರಿ ಹೋರಾಟ ಸೋಲಿನ ಅಂತರವನ್ನು ಕೇವಲ 14 ರನ್ ಗಳಿಗೆ ತಗ್ಗಿಸುವ ಮೂಲಕ ಭಾರೀ ಅಪಮಾನದಿಂದ ತಂಡವನ್ನು ಪಾರು ಮಾಡಿದ್ದು ಮನ ಸೆಳೆಯಿತು.

Story first published: Wednesday, January 3, 2018, 10:04 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+