ಯುವರಾಜ್ ಅಬ್ಬರ ವ್ಯರ್ಥ, ಡೆಲ್ಲಿಗೆ 6 ವಿಕೆಟ್ ಗಳ ಜಯ
ನವದೆಹಲಿ, ಮೇ 02: ಯುವರಾಜ್ ಸಿಂಗ್ ಅವರು 41 ಎಸೆತ ಎದುರಿಸಿದ ಅಜೇಯ 70 ರನ್ ಗಳಿಸಿ ಹೈದರಾಬಾದ್ ತಂಡದ ಮೊತ್ತ 185/3 ಸ್ಕೋರ್ ಮಾಡಲು ಕಾರಣರಾದರು. ಆದರೆ, ಡೆಲ್ಲಿ ತಂಡ ಇನ್ನೂ 5 ಎಸೆತಗಳು ಬಾಕಿ ಇರುವಂತೆ 189/4 ಸ್ಕೋರ್ ಮಾಡಿ ಜಯ ಗಳಿಸಿತು.
ಡೆಲ್ಲಿ ಚೇಸ್ : ನಾಯಕ ಕರುಣ್ ನಾಯರ್ ಮೊದಲ ಬಾರಿಗೆ ಉತ್ತಮ ಆಟ ಪ್ರದರ್ಶಿಸಿ 20 ಎಸೆತಗಳಲ್ಲಿ 39ರನ್ ಗಳಿಸಿದರು. ಸಂಜು ಸಾಮ್ಸನ್ 24ರನ್ ಗಳಿಸಿ ಔಟಾದರು. ರಿಷಬ್ ಪಂತ್ 34, ಶ್ರೇಯಸ್ ಅಯ್ಯರ್ 33, ಕೋರೆ ಅಂಡರ್ಸನ್ 24 ಎಸೆತಗಳಲ್ಲಿ ಅಜೇಯ 41ರನ್, ಕ್ರಿಸ್ ಮೊರಿಸ್ 7 ಎಸೆತಗಳಲ್ಲಿ 15ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಯುವರಾಜ್ ಅಲ್ಲದೆ ಶಿಖರ್ ಧವನ್ 17 ಎಸೆತಗಳಲ್ಲಿ 28, ಡೇವಿಡ್ ವಾರ್ನರ್ 21 ಎಸೆತಗಳಲ್ಲಿ 30, ಮೋಯಿಸ್ ಹೆನ್ನ್ರಿಕ್ಯೂಸ್ 18 ಎಸೆತಗಳಲ್ಲಿ 25ರನ್ ಗಳಿಸಿದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 185 ರನ್ ಕಲೆಹಾಕಿತು.
ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಡೆಲ್ಲಿ ಡೇರ್ ಡವಿಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಕುತೂಹಲಕಾರಿಯಾಗಿ ಸಾಗಿತು.ಅಂತಿಮವಾಗಿ ಡೆಲ್ಲಿ ತಂಡ ಗೆಲುವಿನ ನಗೆ ಬೀರಿತು.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: IPL 10: SRH post 185/3 against DD
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications