ಕೆಕೆಆರ್ ವಿರುದ್ಧ ಪುಣೆ ಗೆಲ್ಲಲು ತ್ರಿಪಾಠಿ ಆರ್ಭಟವೇ ಕಾರಣ!
ಕೋಲ್ಕತಾ, ಮೇ 03: ಸ್ಟೀವ್ ಸ್ಮಿತ್ ನೇತೃತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡವು ಐಪಿಎಲ್ ನ ಬಲಿಷ್ಠ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಗರ್ವಭಂಗ ಮಾಡಿದೆ. ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್ ಗಳಲ್ಲಿ 155/8 ಸ್ಕೋರ್ ಮಾಡಿತ್ತು. ಪುಣೆ ತಂಡ ನಾಲ್ಕು ವಿಕೆಟ್ ಗಳಿಂದ ಜಯಭೇರಿ ಬಾರಿಸಿದೆ.
ಪುಣೆ ಚೇಸ್: ಅಜಿಂಕ್ಯ ರಹಾನೆ 11ರನ್ ಗಳಿಸಿ ಔಟಾದರೆ, ರಾಹುಲ್ ತ್ರಿಪಾಠಿ 52 ಎಸೆತಗಳಲ್ಲಿ 93ರನ್(9 ಬೌಂಡರಿ, 7 ಸಿಕ್ಸರ್ ) ಗಳಿಸಿ ಏಕಾಂಗಿ ಹೋರಾಟ ನಡೆಸಿ ತಂಡವನ್ನು ಜಯದ ಹೊಸ್ತಿಲಿಗೆ ತಂದರು. ಬೆನ್ ಸ್ಟೋಕ್ಸ್ 14ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಎರಡಂಕಿ ದಾಟಲಿಲ್ಲ.

ಕೆಕೆಆರ್ ಇನ್ನಿಂಗ್ಸ್: ಪಿಂಚ್ ಹಿಟ್ಟರ್ ಸುನಿಲ್ ನಾರಾಯಣ್ ಶೂನ್ಯ ಸುತ್ತಿ ಅಚ್ಚರಿ ಮೂಡಿಸಿದರೆ, ನಾಯಕ ಗಂಭೀರ್ 24 ರನ್ ಗಳಿಸಿದರು.
ಮನೀಶ್ ಪಾಂಡೆ 37, ಕಾಲಿನ್ ಡಿ ಗ್ರಾಡೊಮ್ 19 ಎಸೆತಗಳಲ್ಲಿ 36, ಸೂರ್ಯ ಕುಮಾರ್ ಯಾದವ್ 16 ಎಸೆತಗಳಲ್ಲಿ 30 ರನ್ ಗಳಿಸಿ ತಂಡದ ಮೊತ್ತವನ್ನು 20 ಓವರ್ ಗಳಲ್ಲಿ 155/8ಕ್ಕೇರಿಸಿದರು. ಪುಣೆ ಪರ ವಾಷಿಂಗ್ಟನ್ ಸುಂದರ್ 2 ಓವರ್ ಗಲಲ್ಲಿ 18 ರನ್ನಿತ್ತು 2 ವಿಕೆಟ್ ಹಾಗೂ ಉನದ್ಕತ್ 28ರನ್ನಿತ್ತು 2 ವಿಕೆಟ್ ಪಡೆದರು.
ಐಪಿಎಲ್ 2017 ರ ಪಂದ್ಯದಲ್ಲಿ ಬುಧವಾರ ರಾತ್ರಿ ಟಾಸ್ ಗೆದ್ದ ಸ್ಟೀವ್ ಸ್ಮಿತ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಉತ್ತಮ ಪ್ರದರ್ಶನ ನೀಡುತ್ತಿದೆ. ಕೆಕೆಆರ್ ತಂಡ ಆರಂಭಿಕ ಮೂರು ವಿಕೆಟ್ ಗಳನ್ನು ಕಳೆದುಕೊಂಡಿದೆ.

ಕೆಕೆ ಆರ್: ಸುನಿಲ್ ನಾರಾಯಣ್, ಗೌತಮ್ ಗಂಭೀರ್ (ನಾಯಕ), ಮನೀಶ್ ಪಾಂಡೆ, ಯೂಸುಫ್ ಪಠಾಣ್, ಸೂರ್ಯಕುಮಾರ್ ಯಾದವ್, ಶೆಲ್ಡನ್ ಜಾಕ್ಸನ್ (ವಿಕೆಟ್ ಕೀಪರ್) ಕೊಲಿಂದ್ ಡಿ ಗ್ರಾಂಡ್ ಹೊಮೆ, ಕ್ರಿಸ್ ವೋಕ್ಸ್, ನಾಥನ್ ಕೌಲ್ಟರ್ ನೈಲ್, ಉಮೇಶ್ ಯಾದವ್, ಕುಲದೀಪ್ ಯಾದವ್
ಪುಣೆ: ರಾಹುಲ್ ತ್ರಿಪಾಠಿ, ಅಜಿಂಕ್ಯ ರಹಾನೆ, ಸ್ಟೀವ್ ಸ್ಮಿತ್ (ನಾಯಕ), ಬೆನ್ ಸ್ಟೋಕ್ಸ್, ಮನೋಜ್ ತಿವಾರಿ, ಎಂಎಸ್ ಧೋನಿ (ವಿಕೆಟ್ ಕೀಪರ್), ಡಾನ್ ಕ್ರಿಶ್ಚಿಯನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜೈದೇವ್ ಉನದ್ಕತ್, ಇಮ್ರಾನ್ ತಾಹೀರ್.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: IPL: Pune elect to field against Kolkata
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications