ಐಪಿಎಲ್: ಗುಜರಾತ್ ಸೋಲಿಸಲು ಡೆಲ್ಲಿಗೆ 209ರನ್ ಟಾರ್ಗೆಟ್
ನವದೆಹಲಿ, ಮೇ 04: ಐಪಿಎಲ್ 2017ರ 42ನೇ ಪಂದ್ಯದಲ್ಲಿ ಗುಜರಾತ್ ಲಯನ್ಸ್ ನೀಡಿದ್ದ 209ರನ್ ಮೊತ್ತವನ್ನು ಭರ್ಜರಿಯಾಗಿ ಚೇಸ್ ಮಾಡಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡ 7ವಿಕೆಟ್ ಗಳ ಅಮೋಘ ಜಯ ದಾಖಲಿಸಿದೆ. ರಿಷಬ್ ಪಂತ್ 97 ಹಾಗೂ ಸಂಜು ಸಾಮ್ಸನ್ 60 ರನ್ ಗಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು.
ಗುಜರಾತ್ ಇನ್ನಿಂಗ್ಸ್: ಡ್ವಾಯ್ಸ್ನೆ ಸ್ಮಿತ್ 9, ಬ್ರೆಂಡನ್ ಮೆಕಲಮ್ 1 ರನ್ ಗಳಿಸಿ ಔಟಾದ ಬಳಿಕ ನಾಯಕ ಸುರೇಶ್ ರೈನಾ 43 ಎಸೆತಗಳಲ್ಲಿ 77ರನ್ (5 ಬೌಂಡರಿ, 4 ಸಿಕ್ಸರ್ ) ಬಾರಿಸಿದರೆ, ದಿನೇಶ್ ಕಾರ್ತಿಕ್ 34 ಎಸೆತಗಳಲ್ಲಿ 65 ರನ್ (5 ಬೌಂಡರಿ, 5 ಸಿಕ್ಸರ್ ) ಬಾರಿಸಿ ಉತ್ತಮ ಜೊತೆಯಾಟ(133 ರನ್) ಪ್ರದರ್ಶಿಸಿದರು.
ಉಳಿದಂತೆ ಅರೋನ್ ಫಿಂಚ್ 19 ಎಸೆತಗಳಲ್ಲಿ 27ರನ್, ರವೀಂದ್ರ್ ಜಡೇಜ 7 ಎಸೆತಗಳಲ್ಲಿ 18ರನ್ ಗಳಿಸಿ ತಂಡದ ಮೊತ್ತವನ್ನು 208/7ಕ್ಕೇರಿಸಿದರು. ಡೆಲ್ಲಿ ಪರ ರಬಾಡಾ, ಕುಮಿನ್ಸ್ ತಲಾ ಎರಡು ವಿಕೆಟ್ ಪಡೆದರು.

ಪ್ಲೇ ಆಫ್ ಹಂತಕ್ಕೇರಲು ಎರಡು ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದೆ. ಗಾಯಾಳು ಜಹೀರ್ ಖಾನ್ ಅವರು ಈ ಪಂದ್ಯಕ್ಕೂ ಅಲಭ್ಯರಾಗಿದ್ದು, ಡೆಲ್ಲಿ ತಂಡವನ್ನು ಕರ್ನಾಟಕದ ಕರುಣ್ ನಾಯರ್ ಅವರು ಮುನ್ನಡೆಸುತ್ತಿದ್ದಾರೆ.

ಡೆಲ್ಲಿ ಡೇರ್ ಡೆವಿಲ್ಸ್ : ಕರುಣ್ ನಾಯರ್ (ನಾಯಕ), ಕೋರೆ ಅಂಡರ್ಸನ್, ಕಾಗಿಸೋ ರಬಡಾ, ಪ್ಯಾಟ್ ಕುಮಿನ್ಸ್, ಮೊಹಮ್ಮದ್ ಶಮಿ, ಜಯಂತ್ ಯಾದವ್, ಅಮಿತ್ ಮಿಶ್ರಾ, ಶ್ರೇಯಸ್ ಅಯ್ಯರ್, ಸಂಜು ಸಾಮ್ಸನ್, ರಿಶಬ್ ಪಂತ್(ವಿಕೆಟ್ ಕೀಪರ್), ಮರ್ಲಾನ್ ಸ್ಯಾಮುಯಲ್ಸ್
ಗುಜರಾತ್ ಲಯನ್ಸ್ : ಸುರೇಶ್ ರೈನಾ(ನಾಯಕ), ಬಸಿಲ್ ಥಂಪಿ, ಡ್ವಾಯ್ನೆ ಸ್ಮಿತ್, ಜೇಮ್ಸ್ ಫಾಲ್ಕ್ನರ್, ಅರೋನ್ ಫಿಂಚ್, ಇಶಾನ್ ಕಿಶಾನ್, ರವೀಂದ್ರ ಜಡೇಜ, ಅಂಕಿತ್ ಸೋನಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಬ್ರೆಂಡನ್ ಮೆಕಲಮ್, ಪ್ರದೀಪ್ ಸಾಂಗ್ವನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications