For Quick Alerts
ALLOW NOTIFICATIONS  
For Daily Alerts
 

ತವರು ನೆಲದಲ್ಲೇ ಪಂಜಾಬಿಗಳ ಮುಂದೆ ಮಂಡಿಯೂರಿದ ಆರ್ ಸಿಬಿ

ಕಿಂಗ್ಸ್ XI ಪಂಜಾಬ್ ವಿರುದ್ಧದ ಐಪಿಎಲ್ 10ರ ಪಂದ್ಯದಲ್ಲಿ 19ರನ್ ಗಳಿಂದ ಪಂದ್ಯವನ್ನು ಕಳೆದುಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ತವರು ನೆಲದಲ್ಲೇ ಸೋತು ಸುಣ್ಣವಾಗಿದೆ.

By Mahesh

ಬೆಂಗಳೂರು, ಮೇ 05: ಕಿಂಗ್ಸ್ XI ಪಂಜಾಬ್ ವಿರುದ್ಧದ ಐಪಿಎಲ್ 10ರ ಪಂದ್ಯದಲ್ಲಿ 19ರನ್ ಗಳಿಂದ ಪಂದ್ಯವನ್ನು ಕಳೆದುಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ತವರು ನೆಲದಲ್ಲೇ ಸೋತು ಸುಣ್ಣವಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಂಗ್ಸ್ XI ಪಂಜಾಬ್ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 138ರನ್ ಸ್ಕೋರ್ ಮಾಡಿತ್ತು. ಆರ್ ಸಿಬಿ 19 ಓವರ್ ಗಳಲ್ಲಿ 119ಸ್ಕೋರಿಗೆ ಆಲೌಟ್ ಆಗಿದೆ

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಆರ್ ಸಿಬಿ ಇನ್ನಿಂಗ್ಸ್ : ಸ್ಟಾರ್ ತ್ರಿವಳಿಗಳು ಮತ್ತೊಮ್ಮೆ ವೈಫಲ್ಯ ಕಂಡರು.
* ಕ್ರಿಸ್ ಗೇಲ್ 0, ವಿರಾಟ್ ಕೊಹ್ಲಿ 6, ಎಬಿ ಡಿ ವಿಲಿಯರ್ಸ್ 10 ರನ್ ಗಳಿಸಿ ನಿರಾಶೆ ಮೂಡಿಸಿದರು.
* ಆರಂಭಿಕ ಮೂರು ವಿಕೆಟ್ ಗಳನ್ನು ವೇಗಿ ಸಂದೀಪ್ ಶರ್ಮ ಗಳಿಸಿದರು.
* ಮನ್ದೀಪ್ ಸಿಂಗ್ 40 ಎಸೆತಗಳಲ್ಲಿ 46 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರು.
* ಪವನ್ ನೇಗಿ 21 ರನ್ ಗಳಿಸಿ ಕೊಂಚ ಪ್ರತಿರೋಧ ತೋರಿದರು.
* ಮನ್ದೀಪ್, ನೇಗಿ ಹಾಗೂ ಎಬಿ ಡಿವಿಲಿಯರ್ಸ್ ಮಾತ್ರ ಎರಡಂಕಿ ದಾಟಿದರು.
* ಸಂದೀಪ್ ಶರ್ಮ 22ಕ್ಕೆ3, ಅಕ್ಷರ್ ಪಟೇಲ್ 3 ಓವರ್ ಗಳಲ್ಲಿ 11ಕ್ಕೆ3 ಗಳಿಸಿದರು.

ಪಂಜಾಬ್ ಇನ್ನಿಂಗ್ಸ್ :
ಹಶೀಂ ಆಮ್ಲಾ 1. ಮಾರ್ಟಿನ್ ಗಪ್ಟೀಲ್ 9ರನ್ ಗಳಿಸಿ ಔಟಾದರು.
* ಶಾನ್ ಮಾರ್ಷ್ 20, ಮನನ್ ವೋಹ್ರಾ 25, ವೃದ್ಧಿಮಾನ್ ಸಹಾ 21 ರನ್ ಗಳಿಸಿ ಮಧ್ಯಮ ಕ್ರಮಾಂಕದಲ್ಲಿ ಇನ್ನಿಂಗ್ಸ್ ಕಟ್ಟಲು ಯತ್ನಿಸಿದರು.
* ಕೊನೆಯಲ್ಲಿ ಅಕ್ಷರ್ ಪಟೇಲ್ 17 ಎಸೆತಗಳಲ್ಲಿ 38ರನ್(3 ಬೌಂಡರಿ, 2 ಸಿಕ್ಸರ್ ) ಬಾರಿಸಿ ರನ್ ಗತಿ ಹೆಚ್ಚಿಸಿದರು.
* ಆರ್ ಸಿಬಿ ಪರ 4 ಓವರ್ ಗಳಲ್ಲಿ 17ರನ್ನಿತ್ತು 2 ವಿಕೆಟ್ ಪಡೆದು ಅಂಕಿತ್ ಚೌಧರಿ ಉತ್ತಮ ಬೌಲಿಂಗ್ ಪ್ರದರ್ಶಿಸಿದರು.
* ಚಾಹಲ್ 2, ನೇಗಿ, ವಾಟ್ಸನ್ ಹಾಗೂ ಅರವಿಂದ್ ತಲಾ 1 ವಿಕೆಟ್ ಗಳಿಸಿದರು.

ಕಿಂಗ್ಸ್ XI ಪಂಜಾಬ್ ವಿರುದ್ಧದ ಐಪಿಎಲ್ 10ರ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಅವರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ಕಿಂಗ್ಸ್ ಎಲೆವನ್ ಪಂಜಾಬ್ ಆಡುವ XI: ಮಾರ್ಟಿನ್ ಗಪ್ಟಿಲ್, ಹಶೀಂ ಆಮ್ಲಾ, ಮನನ್ ವೋಹ್ರಾ, ಶಾನ್ ಮಾರ್ಷ್, ಗ್ಲೆನ್ ಮ್ಯಾಕ್ಸ್ ವೆಲ್ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಮೋಹಿತ್ ಶರ್ಮ, ವರುಣ್ ಅರೋನ್, ಸಂದೀಪ್ ಶರ್ಮ, ಟಿ ನಟರಾಜನ್.

IPL 2017: Match 43: Bangalore elect to chase against Punjab; Kohli & Co play for pride

ಆರ್ ಸಿಬಿ: ವಿರಾಟ್ ಕೊಹ್ಲಿ (ನಾಯಕ), ಕ್ರಿಸ್ ಗೇಲ್, ಎಬಿ ಡಿ ವಿಲಿಯರ್ಸ್, ಮನ್ದೀಪ್ ಸಿಂಗ್, ಶಾನ್ ವಾಟ್ಸನ್, ಕೇದಾರ್ ಜಾಧವ್(ವಿಕೆಟ್ ಕೀಪರ್), ಪವನ್ ನೇಗಿ, ಸ್ಯಾಮುಯಲ್ ಬದ್ರಿ, ಅಂಕಿತ್ ಚೌಧರಿ, ಶ್ರೀಶಾಂತ್ ಅರವಿಂದ್, ಯಜುವೇಂದ್ರ ಚಾಹಲ್.

Story first published: Wednesday, January 3, 2018, 10:04 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+