ನವದೆಹಲಿ, ಮೇ 07: ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ತಂಡವು 146ರನ್ ಗಳ ಅಂತರದಿಂದ ಗೆದ್ದು ಐಪಿಎಲ್ ನಲ್ಲಿ ಹೊಸ ದಾಖಲೆ ಬರೆದಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ ಪ್ರ ಲಿಂಡ್ಲ್ ಸಿಮನ್ಸ್ 66, ಪೊಲಾರ್ಡ್ ಅಜೇಯ 63ರನ್ ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಬೃಹತ್ 212ರನ್ ಸ್ಕೋರ್ ಮಾಡಿತು.[ಸ್ಕೋರ್ ಕಾರ್ಡ್]
ಇದಕ್ಕೆ ಉತ್ತರವಾಗಿ ಡೆಲ್ಲಿ ತಂಡ ಕಳಪೆ ಆರಂಭ ಪಡೆಯುತು. ಮೊದಲ ಓವರ್ ನ ಮೊದಲ ಎಸೆತದಲ್ಲೇ ಸಂಜು ಸ್ಯಾಮ್ಸನ್ ಕ್ಯಾಚಿತ್ತು ನಿರ್ಗಮಿಸಿದರು. ಕರುಣ್ ನಾಯರ್ (21)ರನ್‌ಗಳಿಸಿದ್ದು ಬಿಟ್ಟರೆ ಮಿಕ್ಕವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. 13.4 ಓವರ್‌ಗಳಲ್ಲಿ ಕೇವಲ 66ರನ್ ಮಾತ್ರ ಗಳಿಸಿ ಅತ್ಯಂತ ಕಳಪೆ ಪ್ರದರ್ಶನ ನೀಡಿತು.

ಈ ಪಂದ್ಯದ ಮುಖ್ಯಾಂಶಗಳು:
* ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಮರಳಿದ ನಾಯಕ ಜಹೀರ್ ಖಾನ್ ಅವರು ಟಾಸ್ ಗೆದ್ದ ಲಾಭ ಪಡೆಯಲಿಲ್ಲ.
* ಐಪಿಎಲ್ 2017ರಲ್ಲಿ ಮೊಟ್ಟ ಮೊದಲ ಪಂದ್ಯವಾಡಿದ ಲೆಂಡ್ಲ್ ಸಿಮನ್ಸ್, ಪಾರ್ಥೀವ್ ಪಟೇಲ್ ಜತೆ ಇನ್ನಿಂಗ್ಸ್ ಆರಂಭಿಸಿದರು.
* ಪಾರ್ಥೀವ್ ಪಟೇಲ್ ಅವರು 22 ಎಸೆತಗಳಲ್ಲಿ 25ರನ್ ಗಳಿಸಿ ಔಟಾದರು.
* ಕಿರಾನ್ ಪೊಲ್ಲಾರ್ಡ್ ಅವರು ಮೂರನೇ ಕ್ರಮಾಂಕದಲ್ಲಿ ಬಂದು ಭರ್ಜರಿ ಪ್ರದರ್ಶನ ನೀಡಿದರು.
* ಪಟೇಲ್ ಹಾಗೂ ಸಿಮನ್ಸ್ 79ರನ್ ಗಳ ಜೊತೆಯಾಟ ಪ್ರದರ್ಶಿಸಿ ಭದ್ರ ಬುನಾದಿ ಹಾಕಿದರು.
* ಸಿಮನ್ಸ್ ಅವರು 43 ಎಸೆತಗಳಲ್ಲಿ 66ರನ್ ಗಳಿಸಿ ಔಟಾದರು.
* ಕಿರಾನ್ ಪೊಲ್ಲಾರ್ಡ್ ಅವರು 35 ಎಸೆತಗಳಲ್ಲಿ 63ರನ್ ಗಳಿಸಿದರು.
* ಹಾರ್ದಿಕ್ ಪಾಂಡ್ಯ ಅವರು 14 ಎಸೆತಗಳಲ್ಲಿ 29ರನ್ ಚೆಚ್ಚಿದರು.
* ಪ್ಯಾಟ್ ಕುಮಿನ್ಸ್ ಕೊನೆ ಓವರ್ ನಲ್ಲಿ 23ರನ್ ಗಳಿಸಿದ ಮುಂಬೈ.
* ಮುಂಬೈ ತಂಡ 20 ಓವರ್ ಗಳಲ್ಲಿ 212/3 ಸ್ಕೋರ್ ಮಾಡಿತು.
* ಡೆಲ್ಲಿ ಪರ ಕೇವಲ ಮೂರು ಆಟಗಾರರು ಎರಡಂಕಿ ಸ್ಕೋರ್ ದಾಟಿದರು.
* ಕರುಣ್ ನಾಯರ್ ಅವರು 15 ಎಸೆತಗಳಲ್ಲಿ 21ರನ್ ಗಳಿಸಿದ್ದೆ ಗರಿಷ್ಠ ಮೊತ್ತ.
* ಕರಣ್ ಶರ್ಮ ಹಾಗೂ ಹರ್ಭಜನ್ ಸಿಂಗ್ ತಲಾ 3 ವಿಕೆಟ್ ಗಳಿಸಿದರು.
* ಆಡಿದ ಮೊದಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಲೆಂಡ್ಲ್ ಸಿಮನ್ಸ್.
* ಡೆಲ್ಲಿ ಡೇರ್ ಡೆವಿಲ್ಸ್ ತಂಡ ಕೇವಲ 66 ಸ್ಕೋರ್ ಗೆ ಆಲೌಟ್ ಆಯಿತು.
* ಮುಂಬೈ ತಂಡ 146 ರನ್ ಗಳ ಅಂತರದ ಜಯ ದಾಖಲಿಸಿ, ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಅಂತರದ ಜಯ ಗಳಿಸಿದ ದಾಖಲೆ ಬರೆಯಿತು.