Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹೈದರಾಬಾದಿನಲ್ಲಿ ಐಪಿಎಲ್ 10 ಭರ್ಜರಿಯಾಗಿ ಆರಂಭ

ಹೈದರಾಬಾದ್, ಏಪ್ರಿಲ್ 05: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 10ನೇ ಆವೃತ್ತಿಗೆ ಹೈದರಾಬಾದಿನಲ್ಲಿ ಭರ್ಜರಿಯಾಗಿ ಆರಂಭ ಸಿಕ್ಕಿದೆ. ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉದ್ಘಾಟನಾ ಪಂದ್ಯದಲ್ಲಿ ಸೆಣಸುತ್ತಿವೆ.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ ಹೀಗಿದೆ

ಇಲ್ಲಿನ ಉಪ್ಪಳದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಬುಧವಾರ ಸಂಜೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ, ಕ್ರಿಕೆಟ್ ದಿಗ್ಗಜರ ಸಮ್ಮುಖದಲ್ಲಿ ಸಾಂಪ್ರದಾಯಿಕ ಸ್ವಾಗತದೊಂದಿಗೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಹೈದರಾಬಾದಿನ ನಾಯಕ ಡೇವಿಡ್ ವಾರ್ನರ್ ಎಂಟ್ರಿ ಕೊಟ್ಟಿದ್ದು, ಅಭಿಮಾನಗಳಿಗೆ ಥ್ರಿಲ್ ನೀಡಿತು.[ಹೈದರಾಬಾದಿನಲ್ಲಿ ಐಪಿಎಲ್ 10 ಭರ್ಜರಿಯಾಗಿ ಆರಂಭ]

ಏಪ್ರಿಲ್ 5 ರಿಂದ ಮೇ 14 ರ ತನಕ ಐಪಿಎಲ್ 10 ಟಿ20 ಹಬ್ಬ ನಡೆಯಲಿದೆ. ಈ ಬಾರಿಯ ಉದ್ಘಾಟನಾ ಪಂದ್ಯವು ಕಳೆದ ವರ್ಷದ ಫೈನಲ್ ಪಂದ್ಯದ ಪುನಾರಾವರ್ತನೆ ಪಂದ್ಯವಾಗಲಿದೆ. ಎಲ್ಲಾ ಪಂದ್ಯಗಳ ಸಮಯ ಭಾರತೀಯ ಕಾಲಮಾನದ ಪ್ರಕಾರ All times in IST (GMT +5.30) ಮೂರು ಪಂದ್ಯಗಳು 4 ಗಂಟೆಗೆ ಆರಂಭ, ಮಿಕ್ಕ ಪಂದ್ಯಗಳು 8 ಗಂಟೆಗೆ ಶುರು.[ಹೈದರಾಬಾದ್ ವಿರುದ್ಧ ಆರ್ ಸಿಬಿ ಆಡುವ XI ಏನಿರಬಹುದು?]

ಭಾರಿ ಭದ್ರತೆಯೊಂದಿಗೆ ಐಪಿಎಲ್ ಶುರು

ಭಾರಿ ಭದ್ರತೆಯೊಂದಿಗೆ ಐಪಿಎಲ್ ಶುರು

ಹೈದರಾಬಾದಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಬುಧವಾರದಂದು ಐಪಿಎಲ್ 10ಕ್ಕೆ ಚಾಲನೆ ಸಿಕ್ಕಿದೆ. ಈ ಪಂದ್ಯವನ್ನು ಕಾಯಲು 250 ಸೆಕ್ಯುರಿಟಿ ವಿಂಗ್, 270 ಟ್ರಾಫಿಕ್ ಸಿಬ್ಬಂದಿ, 750ಕ್ಕೂ ಅಧಿಕ ಪೊಲೀಸ್ ಪೇದೆಗಳು, 6 ಪ್ಲಾಟೂನ್ ವಿಶೇಷ ದಳ, ವಿಶೇಷ ಬ್ರ್ಯಾಂಚ್ ಪೊಲೀಸರ ಬಿಗಿಭದ್ರತೆ ಒದಗಿಸಲಾಗಿದೆ. ಒಟ್ಟಾರೆ 1800 ಸಿಬ್ಬಂದಿಗಳು ಕ್ರಿಕೆಟ್ ಪಂದ್ಯ ಸರಾಗವಾಗಿ ನಡೆಯಲು ಬೇಕಾದ ವ್ಯವಸ್ಥೆಯನ್ನು ಕಾಯುತ್ತಿದ್ದಾರೆ.

ಕ್ರಿಕೆಟ್ ಪ್ರೇಮಿಗಳು ಮೈದಾನದತ್ತ

ಉಪ್ಪಳದಲ್ಲಿರುವ ರಾಜೀವ್ ಗಾಂಧಿ ಸ್ಟೇಡಿಯಂನೊಳಗೆ ಹೋಗಲು ಸರತಿ ಸಾಲಿನಲ್ಲಿ ನಿಂತಿರುವ ಪ್ರೇಕ್ಷಕರು. ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಉದ್ಘಾಟನಾ ಪಂದ್ಯವನ್ನು ನೋಡಲು ಕಾತುರರಾಗಿದ್ದಾರೆ.

ಐಪಿಎಲ್ ಪ್ರಸಾರ ಎಲ್ಲಿ?

ಐಪಿಎಲ್ 10ರ ಪ್ರಸಾರವನ್ನು ಸೋನಿ ಪಿಕ್ಚರ್ಸ್ ಸಂಸ್ಥೆಯ ಸೋನಿ ಮ್ಯಾಕ್ಸ್ ಹಾಗೂ ಸಹವರ್ತಿ ಚಾನೆಲ್ ಗಳಲ್ಲಿ ಹಾಗೂ ಹಾಟ್ ಸ್ಟಾರ್ ಅಪ್ಲಿಕೇಷನ್ (5 ನಿಮಿಷ ವಿಳಂಬ ನಲ್ಲಿ ನೋಡಬಹುದು [ಪೂರ್ಣ ಪಟ್ಟಿ ಇಲ್ಲಿದೆ]

ದ್ರಾವಿಡ್ ಮಾತ್ರ ಮಿಸ್

ನಟಿ ಆಮಿ ಜಾಕ್ಸನ್ ಮತ್ತು 300 ಕಲಾವಿದರು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿದರೆ, ಬಿಸಿಸಿಐನಿಂದ ದಿಗ್ಗಜರಾದ ಸಚಿನ್ ತೆಂಡುಲ್ಕರ್, ಸೌರವ್​ ಗಂಗೂಲಿ,ವಿವಿ ಎಸ್ ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್​ ಅವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ರಾಹುಲ್ ದ್ರಾವಿಡ್ ಅವರು ಹೈದರಾಬಾದಿಗೆ ಕಾರಣಾಂತರದಿಂದ ಬರಲಾಗದಿದ್ದರಿಂದ ಅವರು ಪಾಲ್ಗೊಳ್ಳಲಾಗಲಿಲ್ಲ.

Story first published: Wednesday, January 3, 2018, 10:04 [IST]
Other articles published on Jan 3, 2018
Read in English: IPL 2017 officially begins
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+