Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಂಎಸ್ ಧೋನಿ ಅವರ ಟ್ವೆಂಟಿ 20 ದಾಖಲೆ ಮುರಿದ ರೋಹಿತ್

ಮುಂಬೈ, ಮೇ 22: ಮೂರು ಬಾರಿ ಐಪಿಎಲ್ ಕಪ್ ಎತ್ತಿದ ಮೊದಲ ನಾಯಕ ಎನಿಸಿಕೊಂಡಿರುವ ರೋಹಿತ್ ಶರ್ಮ ಅವರು ಎಂಎಸ್ ಧೋನಿ ಅವರ ಟ್ವೆಂಟಿ 20 ದಾಖಲೆಯನ್ನು ಮುರಿದಿದ್ದಾರೆ.

ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ ಒಂದು ರನ್ ನಿಂದ ರೋಚಕ ಜಯ ದಾಖಲಿಸಿದ ರೋಹಿತ್ ಹೊಸ ಇತಿಹಾಸಕ್ಕೆ ನಾಂದಿ ಹಾಡಿದರು. [ಐಪಿಎಲ್ 2017 : ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ]

IPL 2017: Rohit Sharma breaks MS Dhoni's record

ಮುಂಬೈ ಇಂಡಿಯನ್ಸ್ ಪರ 3 ಹಾಗೂ ಒಟ್ಟಾರೆ 7ನೇ ಟ್ವೆಂಟಿ ಪ್ರಶಸ್ತಿ ಗೆಲ್ಲುವ ಮೂಲಕ ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ, ರವಿಚಂದ್ರನ್ ಅಶ್ವಿನ್ ಹಾಗೂ ಅಂಬಟಿ ರಾಯುಡು ಅವರನ್ನು ಹಿಂದಿಕ್ಕಿದ್ದಾರೆ.[ಪುಣೆ ಸೋತಿದ್ದಕ್ಕೆ 5 ಪ್ರಮುಖ ಕಾರಣಗಳಿವು]

ರೋಹಿತ್ ಅವರು ವಿಶ್ವಟಿ20(2007), ಏಷ್ಯಾ ಕಪ್ ಟಿ20(2016), ನಾಲ್ಕು ಐಪಿಎಲ್ ಟ್ರೋಫಿ(ಮುಂಬೈ ಪರ 3 ಹಾಗೂ ಡೆಕ್ಕನ್ ಚಾರ್ಜರ್ಸ್ ಪರ ಒಂದು)ಗೆದ್ದುಕೊಂಡು ಅತ್ಯಂತ ಯಶಸ್ವಿ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ವೆಬ್ ಸೈಟ್ ಪ್ರಕಟಿಸಿದೆ.

IPL 2017: Rohit Sharma breaks MS Dhoni's record

ಧೋನಿ, ರೈನಾ, ಅಶ್ವಿನ್ ಹಾಗೂ ರಾಯುಡು ತಲಾ 6 ಬಾರಿ ಟ್ರೋಫಿ ಗೆದ್ದಿದ್ದಾರೆ. ಯೂಸುಫ್ ಪಠಾಣ್ ಹಾಗೂ ಹರ್ಭಜನ್ ಸಿಂಗ್ ಆವರು 5 ಬಾರಿ ಟ್ರೋಫಿ ಎತ್ತಿ ಹಿಡಿದಿದ್ದಾರೆ.[ಮೊದಲ ಫೈನಲಿನಲ್ಲೇ ದಾಖಲೆ ಬರೆದ ವಾಷಿಂಗ್ಟನ್ ಸುಂದರ್!]

ಹೈದರಾಬಾದಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2017ರ ಫೈನಲ್ ನಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ ಕೊನೆ ಎಸೆತದಲ್ಲಿ ಮುಂಬೈ ಇಂಡಿಯನ್ಸ್ ರೋಚಕ ಜಯ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+