ಮೊದಲ ಫೈನಲಿನಲ್ಲೇ ದಾಖಲೆ ಬರೆದ ವಾಷಿಂಗ್ಟನ್ ಸುಂದರ್!
ಹೈದರಾಬಾದ್, ಮೇ 21: ಮುಂಬೈ ಇಂಡಿಯನ್ಸ್ ತಂಡದ ಹಾಗೂ ರೈಸಿಂಗ್ ಪುಣೆ ಸೂಪರ್ ಜೈಂಟ್ ನಡುವೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದಿರುವ ಇಂಡಿಯನ್ ಪ್ರೀಮೀಯರ್ ಲೀಗ್ (ಐಪಿಎಲ್ ) 10ರ ಫೈನಲ್ ಪಂದ್ಯದಲ್ಲಿ 17 ವರ್ಷ ವಯಸ್ಸಿನ ವಾಷಿಂಗ್ಟನ್ ಸುಂದರ್ ಅವರು ಹೊಸ ದಾಖಲೆ ಬರೆದಿದ್ದಾರೆ.
ರೈಸಿಂಗ್ ಪುಣೆ ಸೂಪರ್ ಜೈಂಟ್ ಪರ ಆಡುತ್ತಿರುವ ವಾಷಿಂಗ್ಟನ್ ಸುಂದರ್ ಅವರು ಐಪಿಎಲ್ ಫೈನಲ್ ಆಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. [ಯುವ ಪ್ರತಿಭೆ ಸುಂದರ್ ಹೆಸರಲ್ಲಿ 'ವಾಷಿಂಗ್ಟನ್' ಏಕಿದೆ?]

17 ವರ್ಷ 228ದಿನ ವಯಸ್ಸಿನ ಸುಂದರ್ ಅವರು ಕ್ವಾಲಿಫೈಯರ್ 1 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಅದ್ಭುತ ಪ್ರದರ್ಶನ ನೀಡಿ 16 ರನ್ನಿತ್ತು 3 ಪ್ರಮುಖ ವಿಕೆಟ್ ಕಬಳಿಸಿದ್ದರು. [ಐಪಿಎಲ್ 10 ಫೈನಲ್ ಪಂದ್ಯದ ವರದಿ]
ಪಂದ್ಯಶ್ರೇಷ್ಠ ಗೆದ್ದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದ ಸುಂದರ್ ಅವರು ಈಗ ಫೈನಲ್ ಆಡಿದ ಅತ್ಯಂತ ಕಿರಿಯ ಎನಿಸಿಕೊಂಡಿದ್ದಾರೆ. ರವಿಚಂದ್ರನ್ ಅಶ್ವಿನ್ ಅವರ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಪಿನ್ನರ್ ಆಗಿ ಈ ತಮಿಳುನಾಡಿನ ಪ್ರತಿಭೆ ಉತ್ತಮ ಪ್ರದರ್ಶನ ನೀಡಿದ್ದಾರೆ.
ವಾಷಿಂಗ್ಟನ್ ಸುಂದರ್ ಗೂ ಮುನ್ನ ರವೀಂದ್ರ ಜಡೇಜ ಅವರು 19 ವರ್ಷ 178 ವಯಸ್ಸಿನಲ್ಲಿ ಫೈನಲ್ ಆಡಿದ್ದರು. ಮನೀಶ್ ಪಾಂಡೆ ಅವರು 2009ರಲ್ಲಿ 19 ವರ್ಷ 256 ವಯಸ್ಸಿನಲ್ಲಿ ಫೈನಲ್ ಆಡಿದ್ದರು.(ಒನ್ಇಂಡಿಯಾ ಸುದ್ದಿ)
Story first published: Wednesday, January 3, 2018, 10:04 [IST]
Other articles published on Jan 3, 2018
Read in English: Washington Sundar sets new IPL record
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications