ಸರಿಯಾಗಿ ಚೆಚ್ಚಿಸಿಕೊಂಡ್ರೂ ದಾಖಲೆ ಬರೆದ ವೇಗಿ ದಿಂಡಾ!
ಪುಣೆ, ಏಪ್ರಿಲ್ 06: ರೈಸಿಂಗ್ ಪುಣೆ ಸೂಪರ್ ಜೈಂಟ್ (ಆರ್ ಪಿಎಸ್) ತಂಡದ ವೇಗಿ ಅಶೋಕ್ ದಿಂಡಾ ಅವರು ಏಪ್ರಿಲ್ 06ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್ 10ರ ಪಂದ್ಯದಲ್ಲಿ ಬೇಡದ ದಾಖಲೆ ಪಟ್ಟಿಯನ್ನು ಸೇರಿಕೊಂಡರು. ಕೊನೆ ಓವರ್ ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಭಾರಿ ಹೊಡೆತಕ್ಕೆ ದಿಂಡಾ ಎಸೆತಗಳು ದಿಕ್ಕಾಪಾಲಾದವು.
ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ
ಬಲಗೈ ಮಧ್ಯಮ ವೇಗಿ ಅಶೋಕ್ ದಿಂಡಾ ಅವರು ಪುಣೆ ತಂಡದ ಪರ 20ನೇ ಓವರ್ ಎಸೆದರು. ಮುಂಬೈ ಪರ ಹಾರ್ದಿಕ್ ಪಾಂಡ್ಯ ಅವರು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಭರ್ಜರಿ ಆಟವಾಡಿ ಕೊನೆ ಓವರ್ ನಲ್ಲಿ 30ರನ್ ಕಲೆ ಹಾಕಿದರು. ದಿಂಡಾ ನೀಡಿದ 30ರನ್ (1 ಬೈ ಸೇರಿ) ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ 20ನೇ ಓವರ್ ಎಂಬ ದಾಖಲೆಗೆ ಪಾತ್ರವಾಗಿದೆ.

ಹಾರ್ದಿಕ್ ಪಾಂಡ್ಯ ಒಂದು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಒಳಗೊಂಡು ಅಜೇಯ 35 ರನ್ ಸಿಡಿಸುವ ಮೂಲಕ ತಂಡದ ಮೊತ್ತ 180ರ ಗಡಿ ದಾಟಲು ನೆರವಾದರು.
ಮೊದಲ ಎಸೆತವನ್ನು ಬೌಂಡರಿ ಆಚೆಗೆ ಕಳಿಸಿ ಸಿಕ್ಸ್ ಬಾರಿಸಿದ ಪಾಂಡ್ಯ ನಾಲ್ಕನೇ ಎಸೆತವನ್ನು ಬೌಂಡರಿಗಟ್ಟಿದರು. ನಂತರ ಮತ್ತೊಂದು ಸಿಕ್ಸ್ ಬಾರಿಸಿದರು. ಒತ್ತಡಕ್ಕೆ ಒಳಗಾಗಿ ವೈಡ್ ಎಸೆದ ದಿಂಡಾ, ಓವರ್ ನಲ್ಲಿ ಒಟ್ಟಾರೆ30 ರನ್ ನೀಡಿದರು.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: IPL 2017: Ashok Dinda's unwanted record
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications