ರೈನಾ ನೋಡಲು ರೈನಾ ಬಂದಾಗ, ಪಂದ್ಯ ಕೆಲಕ್ಷಣ ನಿಂತಾಗ
ಕಾನ್ಪುರ್, ಮೇ 11: ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ಗುಜರಾತ್ ಲಯನ್ಸ್ ನಡುವಿನ ಐಪಿಎಲ್ ಪಂದ್ಯ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ರೈನಾ ನೋಡಲು ರೈನಾ ಬಂದಾಗ, ಪಂದ್ಯ ಕೆಲಕ್ಷಣ ನಿಂತಾಗ, ಇದ್ಯಾರು ಹೊಸ ರೈನಾ? ಮುಂದೆ ಓದಿ...
'ಅಭಿಮಾನಿಗಳೇ ನಮ್ಮನೇ ದೇವರು...' ಎಂದು ಸುರೇಶ್ ರೈನಾ ನಿನ್ನೆ ದಿನ ಹಾಡುವುದೊಂದೇ ಬಾಕಿ. ರೈನಾ ಅವರ ಅಭಿಮಾನಿಯೊಬ್ಬ ರೈನಾ ಜರ್ಸಿಯನ್ನು ತೊಟ್ಟು ಆಟೋಗ್ರಾಫ್ ಗಾಗಿ ಹಂಬಲಿಸುತ್ತಾ ಪಂದ್ಯದ ವೇಳೆ ಸುರೇಶ್ ರೈನಾರತ್ತ ಧಾವಿಸಿದ ಘಟನೆ ಬುಧವಾರ(ಮೇ 10)ದಂದು ನಡೆಯಿತು.

195ರನ್ ಟಾರ್ಗೆಟ್ ಪಡೆದ ಡೆಲ್ಲಿ ತಂಡ ರೋಚಕವಾಗಿ ಜಯ ದಾಖಲಿಸಿತು. ಆದರೆ, ಪಂದ್ಯದ ವೇಳೆ ಅಭಿಮಾನಿಯೊಬ್ಬ ಸೆಕ್ಯುರಿಟಿಗಳ ಕಣ್ತಪ್ಪಿಸಿ, ರೈನಾರತ್ತ ಹೋಗುವಲ್ಲಿ ಯಶಸ್ವಿಯಾಗಿದ್ದಾನೆ.
ಟೀಂ ಇಂಡಿಯಾ, ಉತ್ತರಪ್ರದೇಶದ ಜನಪ್ರಿಯ ಆಟಗಾರ ಸುರೇಶ್ ರೈನಾ ಅವರತ್ತ ಬಂದ ಅಭಿಮಾನಿಯನ್ನು ರಿಂಕು ಎಂದು ಗುರುತಿಸಲಾಗಿದೆ. ರೈನಾ ಅವರ ಕೈ ಕುಲುಕಿ, ಹಸ್ತಾಕ್ಷರ ಪಡೆದ ನಂತರ ಮೈದಾನದಿಂದ ಹೊರ ಹೋಗಲು ಒಪ್ಪಿದ್ದಾನೆ.
'ರಿಷಬ್ ಪಂತ್ ವಿಕೆಟ್ ಪಡೆದ ರೀತಿ ಅದ್ಭುತವಾಗಿತ್ತು, ಇದಕ್ಕಾಗಿ ರೈನಾರನ್ನು ಅಭಿನಂದಿಸಲು ನಾನು ಅವರತ್ತ ಹೋದೆ. ಈ ಹಿಂದೆ ಅವರು ತಂಗಿದ್ದ ಹೋಟೆಲ್ ರೂಮಿನತ್ತ ಹೋಗಿದ್ದೆ. ಆದರೆ, ಅವರನ್ನು ಕಾಣಲು ಅಗಿರಲಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ರಿಂಕು ಹೇಳಿದ್ದಾನೆ.
ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಕೆಲ ಕಾಲ ಈ ಅಭಿಮಾನಿ ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡು ಜನಪ್ರಿಯನಾಗಿಬಿಟ್ಟ. ಜತೆಗೆ ಸೆಕ್ಯುರಿಟಿ ಲೋಪವನ್ನು ತೋರಿಸಿಬಿಟ್ಟ. ರಿಷಬ್ ರನ್ನು ರೈನಾ ಔಟ್ ಮಾಡಿದ್ದು ಹೇಗೆ ವಿಡಿಯೋ ನೋಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications