ರಿಷಬ್ ಪಂತ್ ಆಟ ನೋಡಿ ಥ್ರಿಲ್ ಆಗಿ ಸಚಿನ್ ಟ್ವೀಟ್
ನವದೆಹಲಿ, ಮೇ 05: ಡೆಲ್ಲಿ ಡ್ಯಾಶರ್ ರಿಷಬ್ ಪಂತ್ ಅವರ ಭರ್ಜರಿ ಆಟ ನೋಡಿ ಕ್ರಿಕೆಟ್ ದಿಗ್ಗಜ ಸೇರಿದಂತೆ ಎಲ್ಲರೂ ಥ್ರಿಲ್ ಆಗಿದ್ದಾರೆ. ಇಂಥ ಒಂದು ಅದ್ಭುತ ಇನ್ನಿಂಗ್ಸ್ ಕಳೆದ 10 ಐಪಿಎಲ್ ನಲ್ಲಿ ನೋಡಿಲ್ಲ ಎಂದು ಸಚಿನ್ ಹೇಳಿದ್ದಾರೆ. ಮಾಜಿ, ಹಾಲಿ ಕ್ರಿಕೆಟರ್ಸ್, ಫ್ಯಾನ್ಸ್, ಸೆಲೆಬ್ರಿಟಿಗಳ ಪ್ರತಿಕ್ರಿಯೆಗಳ ಸಂಗ್ರಹ ಇಲ್ಲಿದೆ...
ಗುಜರಾತ್ ಲಯನ್ಸ್ ನೀಡಿದ್ದ 209ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಯುವ ಪ್ರತಿಭೆಗಳಾದ ಸಂಜು ಸಾಮ್ಸನ್ ಹಾಗೂ ರಿಷಬ್ ಪಂತ್ ಆಸರೆಯಾದರು.
ಡೆಲ್ಲಿ ಆಟಗಾರ ರಿಷಬ್ 43 ಎಸೆತಗಳಲ್ಲಿ 97ರನ್ ಚೆಚ್ಚಿದರು. ಇದರಲ್ಲಿ 9 ಸೂಪರ್ ಸಿಕ್ಸರ್ ಗಳಿತ್ತು. ಪಂತ್ ಗೆ ಸಾಥ್ ನೀಡಿದ ಸಂಜು ಸಾಮ್ಸನ್ 30 ಎಸೆತಗಳಲ್ಲಿ 60ರನ್ ಬಾರಿಸಿದರು. ಇಬ್ಬರ ನಡುವಿನ 143ರನ್ ಜೊತೆಯಾಟವು ಗುಜರಾತಿಗೆ ಮಾರಕವಾಯಿತು.
ರಿಷಬ್ ಪಂತ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ್ದು ಸಚಿನ್ ಸೇರಿದಂತೆ ಅನೇಕರಿಂದ ಮೆಚ್ಚುಗೆ, ಶುಭ ಹಾರೈಕೆಯನ್ನು ಪಡೆದಿದ್ದಾರೆ.

ರಿಷಬ್ ಪಂತ್ ಭರ್ಜರಿ ಆಟ
ರಿಷಬ್ ಪಂತ್ ಅವರು 97ರನ್ ಗಳಿಸಿ ಶತಕ ವಂಚಿತರಾಗಿದ್ದು, ತಂಡ ಗೆಲುವಿಗೆ ಕಾರಣವಾಗಿದ್ದು, ರೈನಾ ಅವರಿಂದ ಸಾಂತ್ವನ, ಕ್ರಿಕೆಟ್ ದಿಗ್ಗಜರಿಂದ ಶುಭಹಾರೈಕೆ ಎಲ್ಲವೂ ರಿಷಬ್ ಹತ್ತಿರ ಹರಿದು ಬಂದಿದೆ.
ಬೆಸ್ಟ್ ಇನ್ನಿಂಗ್ಸ್ ಎಂದ ಸಚಿನ್
ಐಪಿಎಲ್ 10 ವರ್ಷಗಳಲ್ಲಿ ಇದೊಂದು ಶ್ರೇಷ್ಠ ಇನ್ನಿಂಗ್ಸ್ ಎಂದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್
ರಿಷಬ್ ಬಳಿ ಬಂದ ರೈನಾ
97 ರನ್ನಿಗೆ ಔಟಾಗಿ ಶತಕ ವಂಚಿತರಾಗಿ ನಿಂತಿದ್ದ ರಿಷಬ್ ಹತ್ತಿರ ಬಂದ ಎದುರಾಳಿ ನಾಯಕ ರೈನಾ ಸಾಂತ್ವನ ಹೇಳಿದ್ದು ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ದ್ರಾವಿಡ್ ಮಾರ್ಗದರ್ಶನ
ಸಂಜು ಸಾಮ್ಸನ್ ರಂತೆ ರಿಷಬ್ ಪಂತ್ ರಿಗೂ ಕ್ರಿಕೆಟ್ ಲೋಕದ ವಾಲ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನವಿದೆ. ರಿಷಬ್ ಅವರ ಅದ್ಭುತ ಇನ್ನಿಂಗ್ಸ್ ನೋಡಿದ ಬಳಿಕ ದ್ರಾವಿಡ್ ಅವರು ಎದ್ದು ನಿಂತು ಅಭಿನಂದನೆ ಸಲ್ಲಿಸಿದವರಲ್ಲಿ ಮೊದಲಿಗರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications