Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪುಣೆ ಗೆಲ್ಲಿಸಿದ ವೀರ ಧೋನಿಗೆ ಬಹುಪರಾಕ್ ಎಂದ ಕೊಹ್ಲಿ

ಪುಣೆ, ಏಪ್ರಿಲ್ 23: ಸನ್ ರೈಸರ್ಸ್ ಹೈದರಾಬಾದ್ ತಂಡದ ಗೆಲುವಿನ ಕನಸನ್ನು ನುಚ್ಚು ನೂರು ಮಾಡಿ, ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಪುಣೆ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರ ಆಟವನ್ನು ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಅವರು ಮನಸಾರೆ ಹೊಗಳಿದ್ದಾರೆ.

[ಸ್ಕೋರ್ ಕಾರ್ಡ್]

ಮಹೇಂದ್ರ ಸಿಂಗ್ ಧೋನಿಯವರ ಆಕ್ರಮಣಕಾರಿ ಬ್ಯಾಟಿಂಗ್ ಅಜೇಯ 61 ರನ್(34 ಎಸೆತಗಳು, 5 ಬೌಂಡರಿ, 3 ಸಿಕ್ಸರ್) ಸಹಾಯದಿಂದಾಗಿ ಪುಣೆ ರೈಸಿಂಗ್ ಸೂಪರ್ ಜೈಂಟ್ ತಂಡ, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್ ಗಳ ಜಯ ಗಳಿಸಿತು.[ಧೋನಿಯ ಬೆಸ್ಟ್ ಫಿನಿಷಿಂಗ್ ಮ್ಯಾಚ್ ಗಳು]

IPL: Virat Kohli lauds MS Dhoni's 'champion knock'


18ನೇ ಓವರ್ ನ ಆರಂಭದಲ್ಲಿ ಪುಣೆಗೆ ಪಂದ್ಯ ಗೆಲ್ಲಲು 12 ಎಸೆತಗಳಿಂದ 30 ರನ್ ಬೇಕಿತ್ತು.19ನೇ ಓವರ್ ನಲ್ಲಿ ಮಿಂಚಿದ ಧೋನಿ, ಎರಡು ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ ಪುಣೆ ಅಭಿಮಾನಿಗಳನ್ನು ಪುಳಕಿತರನ್ನಾಗಿಸಿದರು. ಇವರಿಬ್ಬರ ಜುಗಲ್ ಬಂದಿಯಿಂದ 19ನೇ ಓವರ್ ನಲ್ಲಿ 19 ರನ್ ಹರಿದುಬಂದವು[ಅಂಕ ಪಟ್ಟಿ]

ಕೊನೆಯ ಎಸೆತದಲ್ಲಿ 2 ರನ್ ಪೇರಿಸುವ ಒತ್ತಡದಲ್ಲಿದ್ದ ಧೋನಿ, ಭರ್ಜರಿ ಬೌಂಡರಿ ಬಾರಿಸಿ, ಪುಣೆ ತಂಡಕ್ಕೆ ಜಯ ತಂದರಲ್ಲದೆ, ತಾವು ಬೆಸ್ಟ್ ಫಿನಿಷರ್ ಎಂಬುದನ್ನು ಮತ್ತೆ ಸಾಬೀತುಪಡಿಸಿದರು.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+